For Quick Alerts
ALLOW NOTIFICATIONS  
For Daily Alerts
 

IPL Auction 2023 : 25 ಎಸೆತಗಳಲ್ಲಿ ಶತಕ ಸಿಡಿಸಿದ್ದ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆ

IPL Auction 2023 : England Batting Allrounder Will Jacks Sold To RCB At 3.20 Crore

ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ವಿಲ್‌ ಜಾಕ್ಸ್‌ರನ್ನು 3.20 ಕೋಟಿ ರುಪಾಯಿಗೆ ಖರೀದಿ ಮಾಡಿದೆ. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಮೂರನೇ ಆಟಗಾರ ಆಗಿದ್ದಾರೆ.

ವಿಲ್‌ ಜಾಕ್ಸ್ ಇಂಗ್ಲೆಂಡ್ ತಂಡದ ಯುವ ಕ್ರಿಕೆಟಿಗ. ಇಂಗ್ಲೆಂಡ್ ಪರವಾಗಿ ವಿಲ್ ಜಾಕ್ಸ್ ಕೇವಲ 2 ಟೆಸ್ಟ್ ಮತ್ತು 2 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ, ಇತರೆ ಲೀಗ್‌ಗಳಲ್ಲಿ ವಿಲ್ ಜಾಕ್ಸ್ ನೀಡಿರುವ ಪ್ರದರ್ಶನವನ್ನು ಗಮನಿಸಿರುವ ಆರ್‌ಸಿಬಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಿತು. ಯುವ ಕ್ರಿಕೆಟಿಗ ವಿಲ್‌ ಜಾಕ್ಸ್ ವಿರಾಟ್ ಕೊಹ್ಲಿ ಅಭಿಮಾನಿ ಎನ್ನುವುದು ಕೂಡ ವಿಶೇಷ.

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ವಿಲ್‌ ಜಾಕ್ಸ್‌ಗಾಗಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೈಪೋಟಿ ನಡೆಸಿದವು. ಆದರೆ ಅಂತಿಮವಾಗಿ ಆರ್‌ಸಿಬಿ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ಇದುವರೆಗೂ ಕೇವಲ ಮೂವರು ಆಟಗಾರರನ್ನು ಮಾತ್ರ ಖರೀದಿ ಮಾಡಿದೆ. ರೀಸ್ ಟೋಪ್ಲೆ ಅವರನ್ನು 1.90 ಕೋಟಿ ರುಪಾಯಿಗೆ ಖರೀದಿ ಮಾಡಿದ್ದು, ಭಾರತದ ಯುವ ಆಟಗಾರ ಹಿಮಾಂಶು ಶರ್ಮಾರನ್ನು 20 ಲಕ್ಷ ರುಪಾಯಿಗೆ ಖರೀದಿ ಮಾಡಿದೆ.

ಸ್ಫೋಟಕ ಆಲ್‌ರೌಂಡರ್ ವಿಲ್‌ ಜಾಕ್ಸ್

ವಿಲ್‌ ಜಾಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಟೆಸ್ಟ್ ಮತ್ತು 2 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ, ವಿವಿಧ ಲೀಗ್‌ಗಳಲ್ಲಿ ಆಡಿರುವ ವಿಲ್ ಜಾಕ್ಸ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅವರು ಎಲ್ಲಾ ಲೀಗ್‌ಗಳಲ್ಲಿ ಸೇರಿ ಇದುವರೆಗೆ 102 ಟಿ20 ಪಂದ್ಯಗಳನ್ನಾಡಿದ್ದಾರೆ. 95 ಟಿ20 ಇನ್ನಿಂಗ್ಸ್‌ಗಳಲ್ಲಿ 2532 ರನ್ ಗಳಿಸಿದ್ದಾರೆ. 154.69 ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಮಾಡಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ ಒಂದು ಶತಕ ಮತ್ತು 20 ಅರ್ಧಶತಕ ಸೇರಿವೆ. ಆಫ್‌ಬ್ರೇಕ್ ಬೌಲರ್ ಆಗಿರುವ ವಿಲ್ ಜಾಕ್ಸ್ ಟಿ20 ಮಾದರಿಯಲ್ಲಿ ಜಾಕ್ಸ್ 39 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್ ಪಡೆದಿದ್ದಾರೆ.

IPL Auction 2023 : England Batting Allrounder Will Jacks Sold To RCB At 3.20 Crore

ಒಂದೇ ಓವರ್‌ನಲ್ಲಿ ಆರು ಸಿಕ್ಸ್‌

2019ರಲ್ಲಿ ವಿಲ್ ಜ್ಯಾಕ್ಸ್ ಒಂದೇ ಓವರ್‌ನಲ್ಲಿ ಆರು ಸಿಕ್ಸ್‌ ಬಾರಿಸಿ ಮತ್ತು ಕೇವಲ 25 ಎಸೆತಗಳಿಗೆ ಶತಕ ಚಚ್ಚುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ದುಬೈನಲ್ಲಿ ನಡೆದ ಟಿ10 ಪಂದ್ಯವೊಂದರಲ್ಲಿ ಆಂಗ್ಲ ಕ್ರಿಕೆಟಿಗ ಈ ಅಪರೂಪದ ಸಾಧನೆ ಮಾಡಿದ್ದರು. ಟಿ10 ಟೂರ್ನಿಯಲ್ಲಿ ಲಂಕಾಷೈರ್ ತಂಡದ ವಿರುದ್ಧ ಸರ್ರೆ ತಂಡದ ಆಟಗಾರ ಜ್ಯಾಕ್ಸ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು.

30 ಎಸೆತಗಳಲ್ಲಿ 105 ರನ್ ಗಳಿಸಿದ್ದರು, ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 11 ಸಿಕ್ಸ್‌ಗಳೂ ಸೇರಿದ್ದವು. ಇದು ಅಧಿಕೃತ ಪಂದ್ಯವಾಗಿರದ ಕಾರಣ ದಾಖಲೆಯ ಪುಸ್ತಕ ಸೇರಲಿಲ್ಲ.

Story first published: Friday, December 23, 2022, 19:19 [IST]
Other articles published on Dec 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+