IPL 2023: ಐಪಿಎಲ್ ಹರಾಜನ್ನು ಟಿವಿಯಲ್ಲಿ ವೀಕ್ಷಿಸುತ್ತೇನೆ ಎಂದ ಇಂಗ್ಲೆಂಡ್ ಸ್ಟಾರ್ ಆಟಗಾರ

ಐಪಿಎಲ್ ಹರಾಜಿಗಾಗಿ ದಿನಗಣನೆ ಶುರುವಾಗಿದ್ದು, ಎಲ್ಲಾ ಫ್ರಾಂಚೈಸಿಗಳ ಸಿಬ್ಬಂದಿ ಈಗಾಗಲೇ ಕೊಚ್ಚಿ ತಲುಪಿದ್ದಾರೆ. ಡಿಸೆಂಬರ್ 23 ರಂದು ಎಲ್ಲಾ 10 ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಒಟ್ಟು 87 ಆಟಗಾರರಿಗೆ ಬಿಡ್ ಮಾಡಲಿದ್ದಾರೆ.
ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಸ್ಯಾಮ್ ಕರನ್ ಈ ಬಾರಿಯ ಐಪಿಎಲ್ ಹರಾಜಿನ ಬೇಡಿಕೆಯ ಆಟಗಾರನಾಗಿದ್ದಾರೆ. ಐಪಿಎಲ್ ಹರಾಜು ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಕರನ್, ಶುಕ್ರವಾರ ಐಪಿಎಲ್ ಹರಾಜು ಪ್ರಕ್ರಿಯೆನ್ನು ಟಿವಿಯಲ್ಲಿ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ ಕರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ ಅವರು ಒಟ್ಟು 13 ವಿಕೆಟ್ ಪಡೆದು ಮಿಂಚಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಯಾಮ್ ಕರನ್ 4 ಓವರ್ ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದರು. ಅವರ ಅತ್ಯುತ್ತಮ ಪ್ರದರ್ಶನಕ್ಕೆ ಫೈನಲ್ ಪಂದ್ಯದ ಆಟಗಾರ ಪ್ರಶಸ್ತಿ ಕೂಡ ಪಡೆದರು. ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕಾರಣ ಅವರಿಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ನೀಡಲಾಯಿತು.

ಮನೆಯಿಂದಲೇ ಐಪಿಎಲ್ ಹರಾಜು ವೀಕ್ಷಿಸಲಿರುವ ಕರನ್
ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆನ್ನು ವೀಕ್ಷಿಸುತ್ತೇನೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ. 2021ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು, ಆ ಆವೃತ್ತಿಯಲ್ಲಿ ಸಿಎಸ್‌ಕೆ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2022ರಲ್ಲಿ ಸ್ಯಾಮ್ ಕರನ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಹರಾಜಿನ ಭಾಗವಾಗಿರಲಿಲ್ಲ.
2023ರ ಮಿನಿ ಹರಾಜಿನಲ್ಲಿ ಸ್ಯಾಮ್ ಕರನ್ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಣ್ಣಿಟ್ಟಿದೆ. ತಮ್ಮ ತಂಡದ ಮಾಜಿ ಆಟಗಾರರನ್ನು ತಂಡಕ್ಕೆ ವಾಪಸ್ ಕರೆತರಲು ಫ್ರಾಂಚೈಸಿ ಈಗಾಗಲೇ ಯೋಜನೆ ರೂಪಸಿದೆ. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಸ್ಯಾಮ್ ಕರನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಮ್ಯಾನೇಜ್‌ಮೆಂಟ್‌ಗೆ ಸೂಚನೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕೂಡ ಸ್ಯಾಮ್ ಕರನ್ ಮೇಲೆ ಬಿಡ್ಡಿಂಗ್ ಮಾಡಬಹುದು. ಹಲವು ಫ್ರಾಂಚೈಸಿಗಳು ಅವರನ್ನು ಖರೀದಿಸಲು ಇಚ್ಚಿಸಿರುವುದರಿಂದ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. 2023ರ ಐಪಿಎಲ್‌ನಲ್ಲಿ ಸ್ಯಾಮ್ ಕರನ್ ಯಾವ ತಂಡದ ಪರವಾಗಿ ಆಡಲಿದ್ದಾರೆ ಎನ್ನುವ ಕುತೂಹಲಕ್ಕೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ತೆರೆ ಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications