IPL Auction 2023: ಅತಿ ಹೆಚ್ಚು ಹಣವನ್ನು ಪರ್ಸ್‌ನಲ್ಲಿ ಹೊಂದಿರುವ ಗುಜರಾತ್ ಟೈಟನ್ಸ್: ತಂಡದ ತಂತ್ರಗಾರಿಕೆ ಏನು?
ಐಪಿಎಲ್ 2024 ಗಾಗಿ ನಡೆಯಲಿರುವ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಪರ್ಸ್ ನಲ್ಲಿ ಅತಿ ಹೆಚ್ಚು ಹಣದೊಂದಿಗೆ ಹರಾಜಿಗೆ ಕುಳಿತುಕೊಳ್ಳಲಿದೆ. ಗುಜರಾತ್ ಒಟ್ಟು 38.15 ಕೋಟಿ ರೂ.ಗಳನ್ನು ಹೊಂದಿದ್ದು, ವಿದೇಶಿ ಆಟಗಾರರಿಗೆ 2 ಸೇರಿದಂತೆ ಒಟ್ಟು 8 ಸ್ಲಾಟ್‌ಗಳು ತುಂಬಿಕೊಳ್ಳುವ ಅವಕಾಶ ಇದೆ. ಐಪಿಎಲ್ 2022 ರಲ್ಲಿ ಗುಜರಾತ್ ತಂಡ ಚೊಚ್ಚಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿತ್ತು. ರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಪಟ್ಟ ನೀಡಿದ್ದ ಗುಜರಾತ್ ಎಲ್ಲರಿಗೂ ಅಚ್ಚರಿಗೊಳಿಸಿತು.
ಹಾರ್ದಿಕ್ ನಾಯಕತ್ವದಲ್ಲಿ, ಗುಜರಾತ್ ಐಪಿಎಲ್ ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಯಿತು. ಮತ್ತು ಐಪಿಎಲ್ 2023 ರಲ್ಲಿ ಅಂದರೆ ಎರಡನೇ ಸೀಸನ್‌ನಲ್ಲಿಯೂ ಫೈನಲ್‌ಗೆ ತಲುಪಿತು. ಈಗ, ಐಪಿಎಲ್‌ನಲ್ಲಿ ಜಿಟಿ ಮೂರನೇ ಸೀಸನ್ ಹರಾಜಿಗೂ ಮುನ್ನ, ಈ ತಂಡದ ವಿಜೇತ ನಾಯಕ ಅಂದರೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ತೆರಳಿದ್ದಾರೆ. ಹೀಗಾಗಿ ಗುಜರಾತ್ ಪರ್ಸ್‌ನಲ್ಲಿ 38 ಕೋಟಿ ರೂ. ಉಳಿದಿದೆ.

ಇದೀಗ ಗುಜರಾತ್ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ನಾಯಕನನ್ನಾಗಿ ಮಾಡಿದೆ. ಆದರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ತುಂಬವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಗುಜರಾತ್ ಆಲ್‌ರೌಂಡರ್ ಆಟಗಾರ ಮೇಲೆ ಕಣ್ಣು ನೆಟ್ಟಿದೆ.
ಹಾರ್ದಿಕ್ ಬದಲಿಗೆ ಯಾರು?
ಐಪಿಎಲ್ 2024 ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್‌ನ ದೊಡ್ಡ ತಂತ್ರದೊಂದಿಗೆ ಕಣಕ್ಕೆ ಇಳಿಯಲಿದೆ. ಪಾಂಡ್ಯ ಅವರ ಅನುಪಸ್ಥಿತಿಯನ್ನು ತುಂಬ ಬಲ್ಲ ಸ್ಟಾರ್ ಆಲ್‌ರೌಂಡರ್‌ನನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ತಂಡ 10-15 ಕೋಟಿ ರೂ.ಗೂ ಹೆಚ್ಚು ಬಿಡ್ ಮಾಡಬಹುದಾಗಿದೆ.
ಹಾರ್ದಿಕ್ ಸ್ಥಾನ ತುಂಬಲು ಅಜ್ಮತುಲ್ಲಾ ಒಮರ್ಜಾಯ್, ಕ್ರಿಸ್ ವೋಕ್ಸ್, ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಜೇಮ್ಸ್ ನೀಶಮ್, ಡ್ವೇನ್ ಪ್ರಿಟೋರಿಯಸ್ ಅವರಂತಹ ಕೆಲವು ಆಟಗಾರರು ಹರಾಜಿನಲ್ಲಿದ್ದು ಇವರ ಮೇಲೆ ಗುಜರಾತ್ ಹಣದ ಹೊಳೆಯನ್ನು ಹರಿಸಬಹುದು.

ಈ ಬಾರಿ ಗುಜರಾತ್ ಅಲ್ಜಾರಿ ಜೋಸೆಫ್, ಯಶ್ ದಯಾಳ್, ಶಿವಂ ಅವರಂತಹ ಅನೇಕ ವೇಗದ ಬೌಲರ್‌ಗಳನ್ನು ಬಿಡುಗಡೆ ಮಾಡಿದೆ. ಈ ಕಾರಣಕ್ಕಾಗಿ, ಅವರು ಭಾರತೀಯ ಅಥವಾ ವಿದೇಶಿ ವೇಗದ ಬೌಲರ್‌ಗಳ ಮೇಲೆ ಕಣ್ಣಿಟ್ಟಿದೆ. ಪ್ಯಾಟ್ ಕಮಿನ್ಸ್, ಜೆರಾಲ್ಡ್ ಕೋಟ್ಜಿ, ಕಾರ್ತಿಕ್ ತ್ಯಾಗಿ, ಉಮೇಶ್ ಯಾದವ್ ಅಥವಾ ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರಿಗೆ ದೊಡ್ಡ ಬಾಜಿ ಕಟ್ಟ ಬಹುದು. ಇನ್ನು ಹರಾಜಿನಲ್ಲಿ ಬ್ಯಾಕ್ ಅಪ್ ವಿಕೆಟ್ ಕೀಪರ್ ಗೆ ತಂಡ ಹಣವನ್ನು ಹೂಡಬಹುದು.
ಗುಜರಾತ್ ಉಳಿಸಿಕೊಂಡಿರುವ ಆಟಗಾರರು: ಅಭಿನವ್ ಸದಾರಂಗನಿ, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ಡೇವಿಡ್ ಮಿಲ್ಲರ್, ಜಯಂತ್ ಯಾದವ್, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಆರ್. ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶುಭಮನ್ ಗಿಲ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾಬಿಡುಗಡೆಯಾದ ಗುಜರಾತ್ ಆಟಗಾರರು: ಯಶ್ ದಯಾಳ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದಸುನ್ ಶನಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications