ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ಗೆ ಜಾಕ್ ಪಾಟ್ ಹೊಡೆದಿದೆ. ಯುವ ಆಟಗಾರನನ್ನು ಸನ್ರೈಸರ್ಸ್ ಹೈದರಾಬಾದ್ ತಂಡ 13.25 ಕೋಟಿ ರುಪಾಯಿಗಳಿಗೆ ಬಿಡ್ ಮಾಡುವ ಮೂಲಕ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಯುವ ಬ್ಯಾಟರ್ ಖರೀದಿಸಲು ಭಾರಿ ಪೈಪೋಟಿ ನಡೆಯಿತು. ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡ ಬ್ರೂಕ್ಗಾಗಿ ಬಿಡ್ ಮಾಡಿದವು. 5 ಕೋಟಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ರೂಕ್ಗಾಗಿ ಬಿಡ್ ಮಾಡಿತು. ಕೇವಲ 8.75 ಕೋಟಿ ರುಪಾಯಿ ಪರ್ಸ್ ಹೊಂದಿರುವ ಆರ್ ಸಿಬಿ ನಂತರ ಬಿಡ್ನಿಂದ ಹಿಂದೆ ಸರಿಯಿತು.
ನಂತರ ಸ್ಪರ್ಧೆಗೆ ಬಿದ್ದ ಸನ್ರೈಸರ್ಸ್ ಹೈದರಾಬಾದ್ ಹ್ಯಾರಿ ಬ್ರೂಕ್ಗಾಗಿ ರಾಜಸ್ಥಾನ ರಾಯಲ್ಸ್ ಜೊತೆ ಭಾರಿ ಪೈಪೋಟಿ ನಡೆಸಿತು. 13 ಕೋಟಿ ರುಪಾಯಿವರೆಗೂ ರಾಜಸ್ಥಾನ ರಾಯಲ್ಸ್ ಇಂಗ್ಲೆಂಡ್ ಬ್ಯಾಟರ್ ಗಾಗಿ ಮಾಡಿತು. ರಾಜಸ್ಥಾನ ರಾಯಲ್ಸ್ ತಂಡ ಪರ್ಸ್ನಲ್ಲಿ 13.20 ಕೋಟಿ ರುಪಾಯಿ ಮಾತ್ರ ಹೊಂದಿದ್ದರಿಂದ ನಂತರ ಬಿಡ್ನಿಂದ ಹಿಂದೆ ಸರಿಯಬೇಕಾಯಿತು.
ಪರ್ಸ್ನಲ್ಲಿ 42.25 ಕೋಟಿ ರುಪಾಯಿ ಹೊಂದಿದ್ದ ಸನ್ರೈಸರ್ಸ್ ಹೈದರಾಬಾದ್ ಅಂತಿಮವಾಗಿ 13.25 ಕೋಟಿ ರುಪಾಯಿ ಬೃಹತ್ ಮೊತ್ತಕ್ಕೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.