IPL Auction 2023: ಮೊದಲೇ ಬಲಾಢ್ಯ ಸಿಎಸ್‌ಕೆ ತಂಡಕ್ಕೆ ಮತ್ತೋರ್ವ ಸೂಪರ್ ಆಲ್ರೌಂಡರ್ ಸೇರ್ಪಡೆ

2021, 2018, 2011 ಮತ್ತು 2010ರ ಆವೃತ್ತಿಯಲ್ಲಿ ವಿಜೇತ ತಂಡವಾಗಿದ್ದ ಸಿಎಸ್‌ಕೆ ತಂಡದ ಆಡಳಿತ ಮಂಡಳಿ, ಕೊಚ್ಚಿನ್ ನಲ್ಲಿ ನಡೆಯುತ್ತಿರುವ ಆಕ್ಷನ್ ಪ್ರಕ್ರಿಯೆಯಲ್ಲಿ ಅಳೆದು ತೂಗಿ ಆಟಗಾರರನ್ನು ತಮ್ಮ ಬತ್ತಳಿಕೆಗೆ ಸೇರ್ಪಡೆಗೊಳಿಸುತ್ತಿದೆ.
ಈಗಾಗಲೇ ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ಹೊಂದಿರುವ ಇಂಡಿಯಾ ಸಿಮೆಂಟ್ಸ್ ಒಡೆತನದ ಸಿಎಸ್‌ಕೆ ತಂಡಕ್ಕೆ, ಹಾಲೀ ಕ್ರಿಕೆಟಿನ ಸ್ಪೋಟಕ ಆಟಗಾರ ಎಂದೇ ಹೆಸರಾಗಿರುವ ಬೆನ್ ಸ್ಟೋಕ್ಸ್ ಸೇರ್ಪಡೆಯಾಗಿದ್ದಾರೆ. ಆ ಮೂಲಕ ತಂಡಕ್ಕೆ ಆನೆಬಲ ಬಂದಂತಾಗಿದೆ.
ಕ್ಯಾಮರೂನ್ ಗ್ರೀನ್, ಮಯಾಂಕ್ ಅಗರ್ವಾಲ್, ಬೆನ್ ಸ್ಟೋಕ್ಸ್ ದಾಖಲೆ ಮೊತ್ತಕ್ಕೆ ಹರಾಜು ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರಂತೇ, ಮಯಾಂಕ್ ಅಗರ್ವಾಲ್ 8.25 ಕೋಟಿ ಮೊತ್ತಕ್ಕೆ ಸರ್ ರೈಸರ್ಸ್ ತಂಡದ ಪಾಲಾಗಿದ್ದಾರೆ. ಇನ್ನು, ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 17.50 ಕೋಟಿಗೆ ಖರೀದಿಸಿದೆ.

ಇಂಗ್ಲೆಂಡ ತಂಡದ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿಗೆ ಖರೀದಿಸಿದೆ. ಇದುವರೆಗೆ 43 ಐಪಿಎಲ್ ಪಂದ್ಯವನ್ನು ಆಡಿರುವ ಸ್ಟೋಕ್ಸ್ 134.5 ಸ್ಟ್ರೈಕ್ ರೇಟ್ ಹೊಂದಿರುವುದು ಗಮನಿಸಬೇಕಾದ ವಿಚಾರ. ಜೊತೆಗೆ, ಬೌಲಿಂಗ್ ನಲ್ಲಿ 8.56 ಇಕಾನಮಿ ರೇಟ್ ಅನ್ನು ಹೊಂದಿದ್ದಾರೆ.
ಬೆನ್ ಸ್ಟೋಕ್ಸ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತಿಹೆಚ್ಚು ಸಂಭಾವನೆಯನ್ನು ಪಡೆಯುವ ಆಟಗಾರರಾಗಿದ್ದಾರೆ. ಹದಿನಾರು ಕೋಟಿ ಪಡೆಯುವ ರವೀಂದ್ರ ಜಡೇಜಾ ಅವರನ್ನು ಸ್ಟೋಕ್ಸ್ ಈಗ ಮೀರಿಸಿದ್ದಾರೆ.
ರುತುರಾಜ್ ಗಾಯಕ್ವಾಡ್, ಅಂಬಟಿ ರಾಯಡು, ಮೊಯಿನ್ ಆಲಿ, ಜಡೇಜಾ, ಧೋನಿ, ಶಿವಂ ದುಭೆ ಮುಂತಾದ ಸ್ಟಾರ್ ಆಟಗಾರರನ್ನು ಹೊಂದಿರುವ ಚೆನ್ನೈ ತಂಡಕ್ಕೆ ಬೆನ್ ಸ್ಟೋಕ್ಸ್ ಸೇರ್ಪಡೆ ಇನ್ನೊಂದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಸಂಶಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications