Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2023 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಕರ್ನಾಟಕದ ಆಟಗಾರ

IPL Auction 2023 : Karnataka Player Manoj Bhandge Sold To RCB For 20 Lakh

ಐಪಿಎಲ್ ಮಿನಿ ಹರಾಜಿನಲ್ಲಿ ಕೊನೆಗೂ ಕನ್ನಡಿಗ ಆಟಗಾರನೊಬ್ಬ ಆರ್‌ಸಿಬಿ ತಂಡಕ್ಕೆ ಸೇರಿಕೊಂಡಿದ್ದಾರೆ. ಕರ್ನಾಟಕ ತಂಡದ ಆಟಗಾರ ಮನೋಜ್ ಭಾಂಡಗೆ ಅವರನ್ನು ಆರ್‌ಸಿಬಿ ಮೂಲಬೆಲೆ 20 ಲಕ್ಷ ರುಪಾಯಿಗೆ ಖರೀದಿ ಮಾಡಿದೆ.

ಮನೋಜ್ ಭಾಂಡಗೆ ಮೂಲತಃ ರಾಯಚೂರಿನವರು, ಕರ್ನಾಟಕ ಪ್ರೀಮಿಯಲ್ ಲೀಗ್‌ನಲ್ಲಿ ಅವರು ಬಿಜಾಪುರ ಬುಲ್ಸ್ ಮತ್ತು ಗುಲ್ಬರ್ಗಾ ತಂಡಕ್ಕಾಗಿ ಆಡಿದ್ದಾರೆ. ಕರ್ನಾಟಕ ತಂಡದಲ್ಲಿ ಆಡುವ ಮನೋಜ್ ಭಾಂಡಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಆಲ್‌ರೌಂಡರ್ ಆಟಗಾರನಾಗಿರುವ ಮನೋಜ್ ಭಾಂಡಗೆ ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 10 ಪಂದ್ಯಗಳಲ್ಲಿ 143 ರನ್ ಗಳಿಸಿರುವ ಭಾಂಡಗೆ, 5 ವಿಕೆಟ್ ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ಅವರು 7 ಇನ್ನಿಂಗ್ಸ್‌ನಲ್ಲಿ 116 ರನ್ ಗಳಿಸಿದ್ದರು. 154.66 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿರುವ ಮನೋಜ್ ಭಾಂಡಗೆ 12 ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಗಳಿಸಿ ಗಮನ ಸೆಳೆದಿದ್ದಾರೆ.

ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆರ್‌ಸಿಬಿ ವಿಫಲವಾಯಿತು. ಮಯಾಂಕ್ ಅಗರ್ವಾಲ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಯ, ಮನೀಶ್ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.

IPL Auction 2023 : Karnataka Player Manoj Bhandge Sold To RCB For 20 Lakh

ಆರ್‌ಸಿಬಿ ಖರೀದಿಸಿದ ಇತರೆ ಆಟಗಾರರು

8.75 ಕೋಟಿ ರುಪಾಯಿ ಪರ್ಸ್ ಹೊಂದಿದ್ದ ಆರ್‌ಸಿಬಿ ಮಿನಿ ಹರಾಜಿನಲ್ಲಿ 7 ಆಟಗಾರರನ್ನು ಖರೀದಿ ಮಾಡಿತು. ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ವಿಲ್ ಜ್ಯಾಕ್ಸ್ 3.20 ಕೋಟಿ ರುಪಾಯಿಗೆ ಖರೀದಿ ಮಾಡಿದರೆ, ರೀಸ್ ಟೋಪ್ಲೆ ಅವರನ್ನು 1.90 ಕೋಟಿ ರುಪಾಯಿಗೆ ಖರೀದಿ ಮಾಡಿತು.

ರಜನ್ ಕುಮಾರ್ ಅವರನ್ನು 70 ಲಕ್ಷಕ್ಕೆ ಖರೀದಿ ಮಾಡಿದರೆ, ಅವಿನಾಶ್‌ ಸಿಂಗ್‌ರನ್ನು 60 ಲಕ್ಷಕ್ಕೆ ಖರೀದಿ ಮಾಡಿತು. ಸೋನು ಯಾದವ್, ಮನೋಜ್ ಭಾಂಡಗೆ ಮತ್ತು ಹಿಮಾಂಶು ಶರ್ಮಾರನ್ನು 20 ಲಕ್ಷ ಮೂಲಬೆಲೆಗೆ ಖರೀದಿ ಮಾಡಿದೆ.

Story first published: Friday, December 23, 2022, 19:57 [IST]
Other articles published on Dec 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+