IPL Auction 2023 : ಜಮ್ಮು ಆಟಗಾರನಿಗೆ ಒಲಿದ ಅದೃಷ್ಟ! 2.60 ಕೋಟಿ ರುಪಾಯಿ ಪಡೆದ ವಿವ್ರಾಂತ್ ಶರ್ಮಾ

ಐಪಿಎಲ್ ಮಿನಿ ಹರಾಜಿನಲ್ಲಿ ಜಮ್ಮು ಆಟಗಾರನಿಗೆ ಬಂಪರ್ ಅದೃಷ್ಟ ಸಿಕ್ಕಿದೆ. ಜಮ್ಮು ತಂಡದ ಆಲ್‌ರೌಂಡರ್ ವಿವ್ರಾಂತ್ ಶರ್ಮಾ ಮಿನಿ ಹರಾಜಿನಲ್ಲಿ 2.60 ಕೋಟಿ ರುಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
ಜಮ್ಮು ತಂಡದ ಆಲ್‌ರೌಂಡರ್ ವಿವ್ರಾಂತ್ ಶರ್ಮಾರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಿವ್ರಾಂತ್ ಶರ್ಮಾರನ್ನು ಖರೀದಿಸಲು ಹೈದರಾಬಾದ್ ವಿರುದ್ಧ ಸಾಕಷ್ಟು ಪೈಪೋಟಿ ನಡೆಸಿತು.
ಜಮ್ಮ ಮತ್ತು ಕಾಶ್ಮೀರ ತಂಡದ ಆಲ್‌ರೌಂಡರ್ ಗಾಗಿ ಸನ್‌ರೈಸರ್ಸ್ ತಂಡ ಪಟ್ಟು ಹಿಡಿಯಿತು. ಅಂತಿಮವಾಗಿ 2.60 ಕೋಟಿ ರುಪಾಯಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ವಿವ್ರಾಂತ್ ಶರ್ಮಾ ದೇಶೀಯ ಲೀಗ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಫ್ರಾಂಚೈಸಿಗಳು ಗಮನಿಸಿದ್ದವು. ಉತ್ತಮ ಆಲ್‌ರೌಂಡರ್ ಆಗಿರುವ ಶರ್ಮಾ ಸನ್‌ರೈಸರ್ಸ್ ತಂಡದ ಉತ್ತಮ ಆಯ್ಕೆಯಾಗಿದೆ.
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ವಿವ್ರಾಂತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ 39.92 ಸರಾಸರಿಯಲ್ಲಿ 87.22 ಸ್ಟ್ರೈಕ್‌ರೇಟ್‌ನಲ್ಲಿ 519 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮೂರು ಅರ್ಧಶತಕ ಸೇರಿವೆ. ಅಲ್ಲದೆ ಸ್ಪಿನ್ನರ್ ಆಗಿರುವ ವಿವ್ರಾಂತ್ 14 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ.
ಟಿ20 ಮಾದರಿ ಲೀಗ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 9 ಪಂದ್ಯಗಳನ್ನಾಡಿದ್ದು, 191 ರನ್ ಗಳಿಸಿದ್ದಾರೆ. 9 ಪಂದ್ಯಗಳಲ್ಲಿ ಅವರು 2 ಅರ್ಧಶತಕ ಗಳಿಸಿದರು. ಟೂರ್ನಿಯಲ್ಲಿ ಅವರು 3 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್ ಪಡೆದು ಮಿಂಚಿದ್ದಾರೆ. ವಿವ್ರಾಂತ್ ಶರ್ಮಾ ಕೆಳ ಕ್ರಮಾಂಕದಲ್ಲಿ ತಂಡಕ್ಕಾಗಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications