IPL Auction 2023 : 5.75 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಜೇಸನ್ ಹೋಲ್ಡರ್

ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ 5.75 ಕೋಟಿ ರುಪಾಯಿಗಳಿಗೆ ಹರಾಜಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಜೇಸನ್ ಹೋಲ್ಡರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಖರೀದಿ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ಮಾಡಿತು. ಆದರೆ ರಾಜಸ್ಥಾನ ರಾಯಲ್ಸ್ ತಂಡ ಪೈಪೋಟಿ ನೀಡಿತು. ಅಂತಿಮವಾಗಿ 5.75 ಕೋಟಿ ರುಪಾಯಿಗೆ ಅವರು ರಾಜಸ್ಥಾನ ತಂಡದ ಪಾಲಾದರು.
ಕಳೆದ ಸೀಸನ್‌ನಲ್ಲಿ ಜೇಸನ್ ಹೋಲ್ಡರ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡಿದ್ದರು. ಕಳೆದ ಸೀಸನ್‌ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು.
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಜೇಸನ್ ಹೋಲ್ಡರ್ ಈ ಬಾರಿ ಉತ್ತಮ ಮೊತ್ತಕ್ಕೆ ಮಾರಾಟವಾಗುವಲ್ಲಿ ಸಫಲರಾಗಿದ್ದಾರೆ. 2022ರಲ್ಲಿ ಅವರು 8.75 ಕೋಟಿ ರುಪಾಯಿಗಳಿಗೆ ಮಾರಾಟವಾಗಿದ್ದರು.
ಅತ್ಯುತ್ತಮ ವೇಗದ ಬೌಲರ್ ಆಗಿರುವ ಜೇಸನ್ ಹೋಲ್ಡರ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ರಾಜಸ್ಥಾನ ರಾಯಲ್ಸ್ ಅವರನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications