IPL Auction 2023 : ನಿಕೋಲಸ್ ಪೂರನ್‌ಗೆ ಬರೊಬ್ಬರಿ 16 ಕೋಟಿ ರುಪಾಯಿ ನೀಡಿದ ಲಕ್ನೋ ಸೂಪರ್ ಜೈಂಟ್ಸ್

ಐಪಿಎಲ್ ಮಿನಿ ಹರಾಜಿನಲ್ಲಿ ಹಲವು ಆಟಗಾರರಿಗೆ ಹಣದ ಹೊಳೆಯೇ ಹರಿಯುತ್ತಿದೆ. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಈ ಬಾರಿ ಮಿನಿ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ರುಪಾಯಿಗೆ ಹರಾಜಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪೂರನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
2022ರ ಐಪಿಎಲ್ ಮೆಗಾಹರಾಜಿನಲ್ಲಿ ನಿಕೋಲಸ್ ಪೂರನ್ ಅವರನ್ನು 10.75 ಕೋಟಿ ರುಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿ ಮಾಡಿತ್ತು. ಆದರೆ, ಕಳೆದ ಸೀಸನ್‌ನಲ್ಲಿ ಪೂರನ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
2023ರ ಮಿನಿ ಹರಾಜಿಗೆ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಬಿಡುಗಡೆ ಮಾಡಿತ್ತು. ಆದರೆ, ಈ ಬಾರಿ ಮಿನಿ ಹರಾಜಿನಲ್ಲಿ ಅವರು ಕಳೆದ ಬಾರಿಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪೂರನ್ ಅವರನ್ನು ಖರೀದಿ ಮಾಡಲು ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬಿಡ್ ಮಾಡಿತು. ನಂತರ ರಾಜಸ್ಥಾನ ರಾಯಲ್ಸ್ ತಂಡ 3 ಕೋಟಿ ರುಪಾಯಿವರೆಗೆ ನಿಕೋಲಸ್ ಪೂರನ್‌ಗಾಗಿ ಪೈಪೋಟಿ ನಡೆಸಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ 6 ಕೋಟಿ ರುಪಾಯಿವರೆಗೆ ಬಿಡ್ ಮಾಡಿದವು. 11 ಕೋಟಿ ರುಪಾಯಿ ಬಿಡ್ಡಿಂಗ್ ದಾಟಿದ ನಂತರ ಲಕ್ನೋ ಸೂಪರ್ ಜೈಂಟ್ಸ್ ಸ್ಪರ್ಧೆಗೆ ಇಳಿಯಿತು.

ಲಕ್ನೊ ಸೂಪರ್ ಜೈಂಟ್ಸ್ ಅಚ್ಚರಿಯ ನಿರ್ಧಾರ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ವೆಸ್ಟ್ ಇಂಡೀಸ್ ಬ್ಯಾಟರ್ ಖರೀದಿ ಮಾಡಲು ಪೈಪೋಟಿ ನಡೆಸಿದವು. ಆದರೆ, ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿತು.
2023ರ ಹರಾಜಿನಲ್ಲಿ ಇದು ಅತ್ಯಂತ ಅಚ್ಚರಿಗೆ ಹರಾಜಾಗಿದೆ. ಪೂರನ್‌ಗಾಗಿ 16 ಕೋಟಿ ರುಪಾಯಿ ವ್ಯಯಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಿರ್ಧಾರಕ್ಕೆ ಸಾಕಷ್ಟು ಮಾಜಿ ಕ್ರಿಕೆಟಿಗರು, ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications