For Quick Alerts
ALLOW NOTIFICATIONS  
For Daily Alerts
 

IPL auction 2023: ವೆಸ್ಟ್‌ ಇಂಡೀಸ್ ಆಟಗಾರರಿಗೆ ಹೊಡೆಯುವುದೆ ಜಾಕ್‌ಪಾಟ್‌

ಐಪಿಎಲ್ 2024 ರ ಹರಾಜಿನ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಿಟ್ಟಿನಲ್ಲಿ ಎಲ್ಲಾ ತಂಡಗಳು ಈಗಾಗಲೇ ಆಟಗಾರರನ್ನು ರಿಲೀಸ್ ಮಾಡಿದ್ದಾರೆ. ಈ ಬಾರಿಯ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ವೆಸ್ಟ್ ಇಂಡೀಸ್ ನ ಕೆಲವು ಆಟಗಾರರ ಮೇಲೆ ಮಾಲೀಕರು ಕಣ್ಣಿಟ್ಟಿವೆ. ಪ್ರತಿ ಬಾರಿಯ ಐಪಿಎಲ್‌ ಆಕ್ಷನ್‌ನಲ್ಲಿ ವಿಂಡೀಸ್‌ ಸ್ಟಾರ್ ಆಟಗಾರರಿಗೆ ಭಾರೀ ಮನ್ನಣೆ ಸಿಗುತ್ತದೆ.

ಐಪಿಎಲ್‌ನಲ್ಲಿ ವಿಂಡೀಸ್ ತಂಡದ ಸ್ಟಾರ್ ಆಟಗಾರರು ತಮ್ಮದೇ ಛಾಪು ಮೂಡಿಸಿದ್ದಾರೆ. ಯುನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌, ಕಿರನ್ ಪೋಲಾರ್ಡ್‌, ಡ್ವೆನ್ ಬ್ರಾವೊ ತಾವಾಡಿದ ತಂಡದ ಪರ ಅಬ್ಬರಿಸಿದ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಈ ಸಾಲಿನಲ್ಲೇ ಅನೆಕ ಆಟಗಾರರು ಈಗಲೂ ಇದ್ದು ಹರಾಜಿನಲ್ಲಿ ಹಣವನ್ನು ಬಾಚಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್ ಮತ್ತು ಅಲ್ಜಾರಿ ಜೋಸೆಫ್‌ಗೆ ಭಾರಿ ಮೊತ್ತವನ್ನು ಖರ್ಚು ಮಾಡಬಹುದು.

IPL auction 2023: West Indies players hit jackpot

ಜೇಸನ್ ಹೋಲ್ಡರ್

ವೆಸ್ಟ್ ಇಂಡೀಸ್ ನ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಇಲ್ಲಿಯವರೆಗೆ ಉತ್ತಮ ಫಾರ್ಮ್ ಹೊಂದಿದ್ದಾರೆ. ಈ ಬಾರಿ ಹರಾಜಿನಲ್ಲಿ ಈ ಸ್ಟಾರ್‌ ಪ್ಲೇಯರ್‌ಗೆ ಬೇಡಿಕೆ ಬರಬಹುದು. ಹೋಲ್ಡರ್ ಕೂಡ ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳಬಹುದು. ಹೋಲ್ಡರ್ ಇದುವರೆಗೆ 46 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 259 ರನ್ ಗಳಿಸಿ 57 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ ಪಂದ್ಯವೊಂದರಲ್ಲಿ 27 ರನ್ ನೀಡಿ 5 ವಿಕೆಟ್ ಕಬಳಿಸಿರುವುದು ಹೋಲ್ಡರ್ ಅವರ ಅತ್ಯುತ್ತಮ ಸಾಧನೆ. ಹೋಲ್ಡರ್ ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು.

ರೋವ್ಮನ್ ಪೊವೆಲ್

ರೋವ್‌ಮನ್ ಪೊವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದೆ. ಅವರೊಬ್ಬ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಈ ಹರಾಜಿನಲ್ಲಿ ತಂಡಗಳು ಪೊವೆಲ್ ಮೇಲೆ ದೊಡ್ಡ ಹಣವನ್ನು ತಮ್ಮ ಖಾತೆಗೆ ಹಾಕಿಕೊಳ್ಳಬಹುದು. ಪೊವೆಲ್ ಐಪಿಎಲ್‌ನಲ್ಲಿ ಇದುವರೆಗೆ 17 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 257 ರನ್ ಸಿಡಿಸಿದ್ದಾರೆ. ಪೊವೆಲ್ 63 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1082 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ.

IPL auction 2023: West Indies players hit jackpot

ಅಲ್ಜಾರಿ ಜೋಸೆಫ್

ಅಲ್ಜಾರಿ ಜೋಸೆಫ್ ಐಪಿಎಲ್‌ನ ಕೊನೆಯ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಅವರು ಇದುವರೆಗೆ 19 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 20 ವಿಕೆಟ್ ಪಡೆದಿದ್ದಾರೆ. ಜೋಸೆಫ್ ಐಪಿಎಲ್ ಪಂದ್ಯವೊಂದರಲ್ಲಿ 12 ರನ್ ನೀಡಿ 6 ವಿಕೆಟ್ ಕಬಳಿಸಿರುವುದು ಶ್ರೇಷ್ಠ ಪ್ರದರ್ಶನ. ಅವರು 16 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ. ಇದರಲ್ಲಿ 26 ವಿಕೆಟ್ ಪಡೆದರು. ಅವರು ಬ್ಯಾಟಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಅಲ್ಜಾರಿ ಜೋಸೆಫ್ 65 ಏಕದಿನ ಪಂದ್ಯಗಳಲ್ಲಿ 400 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 105 ವಿಕೆಟ್‌ಗಳು ಉರುಳಿವೆ.

Story first published: Friday, December 8, 2023, 19:32 [IST]
Other articles published on Dec 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+