IPL Auction 2024: ವಿಶ್ವಕಪ್ ವಿಜೇತ ಬೌಲರ್‌ನ ಕೇಳುವವರಿಲ್ಲ; ಜೋಶ್ ಹ್ಯಾಜಲ್‌ವುಡ್ ಅನ್ ಸೋಲ್ಡ್!
ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್‌ನಲ್ಲಿ ಪಾಲ್ಗೊಂಡವು.
ಇದೇ ವೇಳೆ ಹತ್ತು ಪ್ರಾಂಚೈಸಿಗಳ ಪೈಕಿ ಖರೀದಿಸುವವರಿಲ್ಲದೆ, ಬಿಡ್ ಕೂಗುವವವರಿಲ್ಲದೆ, ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ವೇಗದ ಬೌಲರ್ ಜೋಶ್ ಹಾಜಲ್‌ವುಡ್ 2024ರ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದರು. ಎರಡನೇ ಸುತ್ತಿನಲ್ಲಿ ಯಾವುದಾದರೂ ಒಂದು ತಂಡ ಆಸಕ್ತಿ ತೋರಿಸಬಹುದು.

ಈವೆರೆಗೆ 27 ಐಪಿಎಲ್ ಪಂದ್ಯಗಳಲ್ಲಿ 35 ವಿಕೆಟ್‌ಗಳ ಪ್ರಭಾವಶಾಲಿ ದಾಖಲೆಯೊಂದಿಗೆ, ಜೋಶ್ ಹ್ಯಾಜಲ್‌ವುಡ್ ತನ್ನ ಮಗುವಿನ ಜನನಕ್ಕಾಗಿ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದಲ್ಲಿರುತ್ತಾರೆ.
ತಾವು ಮೇ ತಿಂಗಳಲ್ಲಿ ಮಾತ್ರ ಲಭ್ಯವಿರಲಿದ್ದೇನೆ ಎಂದು ಜೋಶ್ ಹ್ಯಾಜಲ್‌ವುಡ್ ದೃಢಪಡಿಸಿದ್ದಾರೆ. ಇದರಿಂದಾಗಿ ಎಲ್ಲಾ ಫ್ರಾಂಚೈಸಿಗಳ ಆಸಕ್ತಿಗಳಿಂದ ದೂರವುಳಿದರು.
ಐಪಿಎಲ್ 2024ರ ಮೊದಲಾರ್ಧ ಜೋಶ್ ಹ್ಯಾಜಲ್‌ವುಡ್ ತಪ್ಪಿಸಿಕೊಳ್ಳಲಿದ್ದಾರೆ
ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಸ್ಟ್ರೇಲಿಯಾದ ಬೌಲರ್‌ನನ್ನು ಬಿಡುಗಡೆ ಮಾಡಲು ನಿರ್ಧರಿಸಿತು.

ಇದಲ್ಲದೆ, ಕಳೆದ ಎರಡು ಐಪಿಎಲ್ ಋತುಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ಬೌಲರ್ 19.69ರ ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಮೊಣಕಾಲು ಗಾಯದಿಂದಾಗಿ ಅವರು ಐಪಿಎಲ್ 2023ರಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಲು ಸಾಧ್ಯವಾಯಿತು.
ಇದೀಗ ಜೋಶ್ ಹ್ಯಾಜಲ್‌ವುಡ್ ಮತ್ತು ಅವರ ಪತ್ನಿ ಮಾರ್ಚ್ 2024ರಲ್ಲಿ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಇದರಿಂದಾಗಿ ಅವರು 2024ರ ಐಪಿಎಲ್ ಋತುವಿನ ಮೊದಲ ಭಾಗಕ್ಕೆ ಲಭ್ಯವಾಗುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications