For Quick Alerts
ALLOW NOTIFICATIONS  
For Daily Alerts
 

IPL Auction 2024: ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಬಾಚಿದ ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು!

ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್ ನಡೆಸಿದವು.

ದೇಶೀಯ ಕ್ರಿಕೆಟಿಗರಾದ ಸಮೀರ್ ರಿಜ್ವಿ ಮತ್ತು ಶುಭಂ ದುಬೆ ಅವರು ಮೂಲ ಬೆಲೆ 20 ಲಕ್ಷ ರೂಪಾಯಿ ಹೊಂದಿದ್ದರೂ, ಫ್ರಾಂಚೈಸಿಗಳನ್ನು ಬಿಡ್ಡಿಂಗ್ ವಾರ್‌ಗೆ ಆಹ್ವಾನಿಸಿದರು.

20 ವರ್ಷದ ಸಮೀರ್ ರಿಜ್ವಿ 2024ರ ಐಪಿಎಲ್ ಹರಾಜಿನ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿದ್ದು, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8.40 ಕೋಟಿ ರೂಪಾಯಿಗೆ ಖರೀದಿಸಿತು.

IPL Auction 2024: Indian Uncapped Players who Fetched Crore of Rupees in IPL Auction!

ಸಿಎಸ್‌ಕೆ, ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಸಮೀರ್ ರಿಜ್ವಿ ಅಂತಿಮವಾಗಿ 8.40 ಕೋಟಿ ರೂಪಾಯಿಗೆ ಚೆನ್ನೈ ಪಾಲಾದರು.

ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಮೀರ್ ರಿಜ್ವಿ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 139.89ರ ಸ್ಟ್ರೈಕ್ ರೇಟ್‌ ಮತ್ತು 69.25 ಸರಾಸರಿಯಲ್ಲಿ 277 ರನ್ ಗಳಿಸಿದರು.

ನಂತರ ಸಮೀರ್ ರಿಜ್ವಿ ಅಂಡರ್-23 ಲಿಸ್ಟ್ ಎ ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅಲ್ಲಿ ಅವರು ಅಂತಿಮ ಪಂದ್ಯದಲ್ಲಿ 50 ಎಸೆತಗಳಲ್ಲಿ 84 ರನ್ ಗಳಿಸಿದ ಕಾರಣ, ಉತ್ತರ ಪ್ರದೇಶ ತಂಡ ವಿಜಯಶಾಲಿಯಾಯಿತು.

ಉತ್ತರ ಪ್ರದೇಶದ ಯುವ ಬ್ಯಾಟರ್ ಸಮೀರ್ ರಿಜ್ವಿ ತನ್ನ ಬ್ಯಾಟಿಂಗ್ ಪ್ರದರ್ಶನದಿಂದಾಗಿ ದೇಶೀಯ ಸರ್ಕ್ಯೂಟ್‌ನಲ್ಲಿ ಅಲೆಗಳನ್ನು ಎಬ್ಬಿಸುತ್ತಿದ್ದಾರೆ.

ಯುಪಿ ಟಿ20 ಲೀಗ್‌ನಲ್ಲಿ ಸಮೀರ್ ರಿಜ್ವಿ ಕಾನ್ಪುರ್ ಸೂಪರ್‌ಸ್ಟಾರ್ಸ್‌ಗಾಗಿ ಆಡಿದ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 455 ರನ್‌ಗಳನ್ನು ಗಳಿಸಿದರು. ಇದರಲ್ಲಿ ಎರಡು ಅದ್ಭುತ ಶತಕಗಳು ಮತ್ತು ಸ್ಪರ್ಧೆಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದರು.

IPL Auction 2024: Indian Uncapped Players who Fetched Crore of Rupees in IPL Auction!

5.80 ಕೋಟಿಗೆ ರಾಜಸ್ಥಾನ ರಾಯಲ್ಸ್ ಸೇರಿದ ಶುಭಂ ದುಬೆ

ಇದೇ ವೇಳೆ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ವಿದರ್ಭ ರಣಜಿ ತಂಡದ ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಶುಭಂ ದುಬೆ ಅವರನ್ನು 5.80 ಕೋಟಿ ರೂಪಾಯಿ ನೀಡಿ ಖರೀದಿಸಿತು.

20 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಧುಮುಕಿದ ಶುಭಂ ದುಬೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬಿಡ್‌ಗೆ ಮಾಡಿತು. ನಂತರ ರಾಜಸ್ಥಾನ್ ರಾಯಲ್ಸ್ 25 ಲಕ್ಷ ರೂಪಾಯಿಗೆ ಏರಿಸಿತು. ಬಳಿಕ ನಡೆದ ಬಿಡ್ಡಿಂಗ್ ವಾರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪೈಪೋಟಿ ನಡೆಸಿದವು. ಕೊನೆಗೆ ಶುಭಂ ದುಬೆ 5.80 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು.

ಶುಭಂ ದುಬೆ ಯಾರು?

2023ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶುಭಂ ದುಬೆ ಆಡಿದ 7 ಪಂದ್ಯಗಳಿಂದ 73.66ರ ಸರಾಸರಿಯಲ್ಲಿ 221 ರನ್ ಗಳಿಸಿದರು. ಪಂದ್ಯಾವಳಿಯ ಪ್ರಮುಖ ಅಂಶವೆಂದರೆ, ವಿದರ್ಭ ತಂಡವು ಬಂಗಾಳ ವಿರುದ್ಧ 13 ಎಸೆತಗಳು ಬಾಕಿ ಇರುವಂತೆಯೇ 213 ರನ್‌ಗಳ ಅತ್ಯಧಿಕ ಯಶಸ್ವಿ ಚೇಸ್‌ಗೆ ಅವರ ಕೊಡುಗೆ ದೊಡ್ಡದಾಗಿದೆ.

5ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶುಭಂ ದುಬೆ ಕೇವಲ 20 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿ ಅಜೇಯ 58 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಶುಭಂ ಮೇಲೆ ಮೊದಲ ಬಿಡ್ ಮಾಡಿದೆ. ಇದಾದ ಬಳಿಕ ಇಬ್ಬರ ನಡುವೆ ಜಟಾಪಟಿ ನಡೆದಿದೆ. ದೆಹಲಿ ಕೊನೆಯದಾಗಿ 5.60 ಕೋಟಿ ರೂ. ಆದರೆ ಇದಾದ ಬಳಿಕ ರಾಜಸ್ಥಾನ ಗೆದ್ದಿತ್ತು. ರಾಜಸ್ಥಾನ 5.80 ಕೋಟಿ ರೂ.ಗೆ ಶುಭಂ ಅವರನ್ನು ಖರೀದಿಸಿತು. ಹರಾಜಿನಲ್ಲಿ ಮಾರಾಟವಾದ ನಂತರ, ಶುಭಂ ಅವರ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವರು ಇನ್ನೂ ಅನಾಮಧೇಯರಾಗಿದ್ದರು. ಆದರೆ ಹರಾಜಿನಲ್ಲಿ ಮಾರಾಟವಾದ ನಂತರ ಅವು ಬೆಳಕಿಗೆ ಬಂದಿವೆ. ರಾಜಸ್ಥಾನ್ ರಾಯಲ್ಸ್ ಕೂಡ ಶುಭಂ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶುಭಂ ದುಬೆ ದೇಶಿಯ ಪಂದ್ಯಗಳಲ್ಲಿ ಆಡುತ್ತಾರೆ ಮತ್ತು ಅವರು ದೊಡ್ಡ ಹೊಡೆತಗಳನ್ನು ಆಡುವಲ್ಲಿ ಪರಿಣತರಾಗಿದ್ದಾರೆ.ಶುಭಮ್ಗೆ ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಆದರೆ ಅವರು ಪರಿಣಾಮಕಾರಿಯಾಗಿ ಪ್ರದರ್ಶನ ನೀಡಿದ್ದಾರೆ. ಶುಭಮನ್ 20 ಟಿ20 ಪಂದ್ಯಗಳಲ್ಲಿ 485 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಒಂದು ಅರ್ಧಶತಕ ಗಳಿಸಿದ್ದಾರೆ. ಅವರು 8 ಲಿಸ್ಟ್ ಎ ಪಂದ್ಯಗಳಲ್ಲಿ 159 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಶುಭಂ ಔಟಾಗದೆ 62 ರನ್ ಗಳಿಸಿದ್ದು ಉತ್ತಮ ಸ್ಕೋರ್.

ಶುಭಂ ದುಬೆ ಈ ವರ್ಷ ಲಿಸ್ಟ್ ಎ ಗೆ ಪಾದಾರ್ಪಣೆ ಮಾಡಿರುವುದು ಗಮನಾರ್ಹ. ಅವರು ನವೆಂಬರ್ 2023 ರಲ್ಲಿ ಮೇಘಾಲಯ ವಿರುದ್ಧ ವಿದರ್ಭ ಪರವಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದರು. ನವೆಂಬರ್ 2021 ರಲ್ಲಿ ಮಣಿಪುರ ವಿರುದ್ಧ ವಿದರ್ಭ ಪರ ಮೊದಲ ಟಿ20 ಪಂದ್ಯವನ್ನು ಆಡಲಾಯಿತು.

Story first published: Tuesday, December 19, 2023, 18:04 [IST]
Other articles published on Dec 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+