Sameer Rizvi: ಅನ್‌ಕ್ಯಾಪ್ಡ್ ಆಟಗಾರನಿಗೆ 8.40 ಕೋಟಿ ರೂಪಾಯಿ ಸುರಿದ ಸಿಎಸ್‌ಕೆ; ಯಾರು ಈ ಸಮೀರ್ ರಿಜ್ವಿ?
ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಹರಾಜಿನಲ್ಲಿ ಉತ್ತರಪ್ರದೇಶ ಬ್ಯಾಟರ್ ಸಮೀರ್ ರಿಜ್ವಿ ಐಪಿಎಲ್ 2024ರ ಹರಾಜಿನಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರರಾದರು.
ಉತ್ತರಪ್ರದೇಶ ಪರ ಆಡುತ್ತಿರುವ 20 ವರ್ಷದ ಸಮೀರ್ ರಿಜ್ವಿ 2024ರ ಐಪಿಎಲ್ ಹರಾಜಿನ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿದ್ದು, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು 8.40 ಕೋಟಿ ರೂಪಾಯಿಗೆ ಖರೀದಿಸಿತು.

ಸಿಎಸ್‌ಕೆ, ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಸಮೀರ್ ರಿಜ್ವಿ ಅಂತಿಮವಾಗಿ 8.40 ಕೋಟಿ ರೂಪಾಯಿಗೆ ಚೆನ್ನೈ ಪಾಲಾದರು.
ದೇಶೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗಾಗಿ ಹೆಸರುವಾಸಿಯಾಗಿರುವ ಸಮೀರ್ ರಿಜ್ವಿ, ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿದ ಕೂಡಲೇ ತಮ್ಮ ಭಾವನೆಗಳನ್ನು ವರ್ಣಿಸಲು ಪದಗಳಿಲ್ಲ ಎಂದು ಸಮೀರ್ ರಿಜ್ವಿ ಹರ್ಷ ವ್ಯಕ್ತಪಡಿಸಿದರು.
"ಇದು ನನಗೆ ಅವಾಸ್ತವ ಭಾವನೆಯಾಗಿದೆ. ನಾನು ಇದನ್ನು ಪದಗಳಲ್ಲಿ ವಿವರಿಸಲು ನನಗೆ ತುಂಬಾ ಕಷ್ಟಕರವಾಗಿದೆ. ಈ ಕ್ಷಣದಲ್ಲಿ ನಾನು ಪದಗಳಿಂದ ಹೊರಗುಳಿದಿದ್ದೇನೆ, ಸಿಎಸ್‌ಕೆ ತಂಡಕ್ಕಾಗಿ ಆಡಲು ಎದುರು ನೋಡುತ್ತಿದ್ದೇನೆ," ಎಂದು ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಸಮೀರ್ ರಿಜ್ವಿ ತಿಳಿಸಿದ್ದಾರೆ.

ತನ್ನ ಸೋದರ ಮಾವ ತಂಕೀಬ್ ಅಖ್ತರ್ ಅವರ ಮನೆಗೆ ಪ್ರವೇಶಿಸುವುದನ್ನು ನಿಷೇಧಿಸಿದ್ದರು. ಕಾರಣವೆಂದರೆ, ಸ್ವತಃ ವಿಫಲ ಕ್ರಿಕೆಟಿಗನಾದ ತಂಕೀಬ್ ಅಖ್ತರ್ ತನ್ನ ಸೋದರಳಿಯ ಸಮೀರ್ ರಿಜ್ವಿ ಅವರಲ್ಲಿ ಸಾಮರ್ಥ್ಯವನ್ನು ಕಂಡಿದ್ದನು ಮತ್ತು ಅವನು ಭಾರತ ತಂಡಕ್ಕಾಗಿ ಆಡಬೇಕೆಂದು ಬಯಸಿದ್ದನು.
ಯುಪಿ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸಮೀರ್ ರಿಜ್ವಿ ಅತಿ ವೇಗದ ಶತಕ ದಾಖಲಿಸಿದರು. ಯುವ ಬ್ಯಾಟರ್ ದೇಶೀಯ ಟಿ20 ಪಂದ್ಯಗಳಲ್ಲಿ 134.70ರ ಸ್ಟ್ರೈಕ್ ರೇಟ್‌ನಲ್ಲಿ 49.16ರ ಸರಾಸರಿ ಹೊಂದಿದ್ದಾರೆ.
ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಮೀರ್ ರಿಜ್ವಿ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 139.89ರ ಸ್ಟ್ರೈಕ್ ರೇಟ್ ಮತ್ತು 69.25 ಸರಾಸರಿಯಲ್ಲಿ 277 ರನ್ ಗಳಿಸಿದರು.
ನಂತರ ಸಮೀರ್ ರಿಜ್ವಿ ಅಂಡರ್-23 ಲಿಸ್ಟ್ ಎ ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅಲ್ಲಿ ಅವರು ಅಂತಿಮ ಪಂದ್ಯದಲ್ಲಿ 50 ಎಸೆತಗಳಲ್ಲಿ 84 ರನ್ ಗಳಿಸಿದ ಕಾರಣ, ಉತ್ತರ ಪ್ರದೇಶ ತಂಡ ವಿಜಯಶಾಲಿಯಾಯಿತು.
ಉತ್ತರ ಪ್ರದೇಶದ ಯುವ ಬ್ಯಾಟರ್ ಸಮೀರ್ ರಿಜ್ವಿ ತನ್ನ ಬ್ಯಾಟಿಂಗ್ ಪ್ರದರ್ಶನದಿಂದಾಗಿ ದೇಶೀಯ ಸರ್ಕ್ಯೂಟ್‌ನಲ್ಲಿ ಅಲೆಗಳನ್ನು ಎಬ್ಬಿಸುತ್ತಿದ್ದಾರೆ.
ಯುಪಿ ಟಿ20 ಲೀಗ್‌ನಲ್ಲಿ ಸಮೀರ್ ರಿಜ್ವಿ ಕಾನ್ಪುರ್ ಸೂಪರ್‌ಸ್ಟಾರ್ಸ್‌ಗಾಗಿ ಆಡಿದ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 455 ರನ್‌ಗಳನ್ನು ಗಳಿಸಿದರು. ಇದರಲ್ಲಿ ಎರಡು ಅದ್ಭುತ ಶತಕಗಳು ಮತ್ತು ಸ್ಪರ್ಧೆಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದರು.
ಜಿಯೋಸಿನಿಮಾದಲ್ಲಿ ನಡೆದ ಐಪಿಎಲ್ ಅಣಕು ಹರಾಜಿನಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್, ಸಮೀರ್ ರಿಜ್ವಿ ಅವರು ಬಲಗೈ ಸುರೇಶ್ ರೈನಾ ಇದ್ದಂತೆ ಎಂದು ಐಪಿಎಲ್ ಮೊಗಸಾಲೆಯಿಂದ ಹೇಳಲಾಗಿದೆ ಎಂದು ಬಹಿರಂಗಪಡಿಸಿದರು.
"ಸಮೀರ್ ರಿಜ್ವಿ ಸ್ಪಿನ್ ವಿರುದ್ಧ ಬಾರಿಸುವ ಕ್ಷೇತ್ರಗಳು ಒಂದೇ ಆಗಿರುತ್ತವೆ ಮತ್ತು ಅನೇಕ ತಂಡಗಳು ಆತನ ಹಿಂದೆ ಹೋಗಬಹುದು," ಎಂದು ಅಭಿನವ್ ಮುಕುಂದ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
"ಸಮೀರ್ ರಿಜ್ವಿ ಅವರ ಬ್ಯಾಟಿಂಗ್‌ನಲ್ಲಿ ವಿಭಿನ್ನ ಉದ್ದೇಶವಿದೆ. ಅವರು ಯುಪಿ ತಂಡದಲ್ಲಿ ಆಡಿದರೆ ಅವರು ಸಾಕಷ್ಟು ಆತ್ಮವಿಶ್ವಾಸವನ್ನು ಪಡೆಯುತ್ತಾರೆ. ಅವರು ಆಯುಷ್ ಬದೊನಿ ಮಾದರಿಯ ಆಟಗಾರ. ಆದರೆ ನೇರವಾದ ಬ್ಯಾಟ್‌ನೊಂದಿಗೆ ಆಡುತ್ತಾರೆ," ಎಂದು ಸುರೇಶ ರೈನಾ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications