IPL Auction 2025: ಯಾವ ತಂಡಗಳ ಬಳಿ ಎಷ್ಟು ಹಣವಿದೆ? ಎಷ್ಟು RTM ಕಾರ್ಡ್ ಇದೆ?
ಭಾನುವಾರದಿಂದ ಸೌದಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಟೀಮ್ ಇಂಡಿಯಾದ ಹಾಗೂ ವಿದೇಶಿ ಆಟಗಾರರು ಸಹ ಭಾಗವಹಿಸಿದ್ದಾರೆ. ಸೌದಿಯಲ್ಲಿ ನಡೆಯಲಿರುವ ಹರಾಜು ಎಲ್ಲರ ಚಿತ್ತ ಕದ್ದಿದೆ. ಈಗಾಗಲೇ ಈ ಐಪಿಎಲ್ ಹರಾಜಿಗೆ ಒಟ್ಟು 1500ಕ್ಕೂ ಹೆಚ್ಚು ಆಟಗಾರರು ನೊಂದಾಯಿಸಿಕೊಂಡಿದ್ದರು. ಅದರಲ್ಲಿ ಶಾರ್ಟ್ ಲೀಸ್ಟ್ ಮಾಡಿ ಈ ಸಂಖ್ಯೆಯನ್ನು 574 ಇಳಿಸಲಾಗಿದೆ. ಇದರಲ್ಲಿ 366 ದೇಶೀಯ ಹಾಗೂ 208 ವಿದೇಶಿ ಆಟಗಾರರು ಸೇರಿದ್ದಾರೆ.
ನವೆಂಬರ್ 24 ರಿಂದ 25ರ ವರೆಗೆ ನಡೆಯಲಿರುವ ಹರಾಜಿನಲ್ಲಿ ಒಟ್ಟು 204 ಸ್ಲಾಟ್‌ಗಳನ್ನು ಫಿಲ್ ಮಾಡಲಾಗುತ್ತದೆ. ಇದರಲ್ಲಿ 70 ವಿದೇಶಿ ಆಟಗಾರರು ಹರಾಜು ಆಗಬೇಕಿದೆ. ಸೌಧಿಯಲ್ಲಿ ನಡೆಯಲಿರುವ ಹರಾಜು ಎಲ್ಲರ ಚಿತ್ತ ಕದ್ದಿದೆ. ಈ ವೇಳೆ ಐಪಿಎಲ್‌ನಲ್ಲಿ ಮಿಂಚಿದ ಸ್ಟಾರ್ ಆಟಗಾರರು ಮೊದಲಾವಧಿಯಲ್ಲಿ ಹರಾಜು ಅಂಗಳ ಪ್ರವೇಶಿಸುವ ಸಾಧ್ಯತೆ ಇದೆ. ಹಾಗಿದ್ದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ತಂಡಗಳ ಬಳಿ ಎಷ್ಟು ಹಣ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಶ್ರೀಮಂತ ತಂಡ
ಈ ಬಾರಿಯ ಹರಾಜಿನಲ್ಲಿ ಭಾಗವಹಿಸಲಿರುವ ಅತ್ಯಂತ ಶ್ರೀಮಂತ ತಂಡ ಎಂ ಹೆಗ್ಗಳಿಕೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಲ್ಲುತ್ತದೆ. ಈ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಿಗೆ 9.5 ಕೋಟಿ ನೀಡಿ ಉಳಿಸಿಕೊಂಡಿದ್ದು, 110 ಕೋಟಿ ರೂಪಾಯಿಗಳೊಂದಿಗೆ ಬಿಡ್ಡಿಂಗ್ ರೂಮ್ ಪ್ರವೇಶಿಸಲಿದೆ. ಈ ವೇಳೆ ಪಂಜಾಬ್ 4 ಆರ್‌ಟಿಎಂ ಕಾರ್ಡ್ ಬಳಸಬಹುದಾಗಿದೆ.
ಆರ್‌ಸಿಬಿ ಎರಡನೇ ಶ್ರೀಮಂತ ತಂಡ
ಆರ್‌ಸಿಬಿ 3 ಆಟಗಾರರುನ್ನು ಉಳಿಸಿಕೊಂಡಿದ್ದು, ಇವರಿಗೆ 37 ಕೋಟಿ ಹಣವನ್ನು ಖರ್ಚು ಮಾಡಿದ್ದು, 83 ಕೋಟಿ ರೂಪಾಯಿಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಲಿದೆ. ಈ ವೇಳೆ ಆರ್‌ಸಿಬಿ ಬಳಿ ಮೂರು ಆರ್‌ಟಿಎಂ ಕಾರ್ಡ್‌ಗಳು ಸೇರಿವೆ. ಆರ್‌ಸಿಬಿ ಗರಿಷ್ಠ 22 ಆಟಗಾರರನ್ನು ಖರೀದಿಸಬಹುದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ಆಟಗಾರರನ್ನು ಉಳಿಸಿಕೊಂಡಿದ್ದು, 73 ಕೋಟಿ ರೂಪಾಯಿಗಳಿಗೆ ಬಿಡ್ಡಿಂಗ್ ನಡೆಸಲಿದ್ದು, 2 ಆರ್‌ಟಿಎಂ ಕಾರ್ಡ್ ಹೊಂದಿದೆ. ಇನ್ನು ಲಕ್ನೋ ಹಾಗೂ ಗುಜರಾತ್ ತಂಡಗಳು 69 ಕೋಟಿಯನ್ನು 20 ಆಟಗಾರರನ್ನು ಖರೀದಿಸಲು ಖರ್ಚು ಮಾಡಲಿದೆ. ಈ ತಂಡಗಳ ಬಳಿ ತಲಾ ಒಂದು ಆರ್‌ಟಿಎಂ ಕಾರ್ಡ್ಗಳಿವೆ.
ಮಾಜಿ ಚಾಂಪಿಯನ್ಸ್ ಚೆನ್ನೈ 55, ಮುಂಬೈ ಇಡಿಂಯನ್ಸ್ 45 ಕೋಟಿಗಳೊಂದಿಗೆ ಐಪಿಎಲ್ ಮೆಗಾ ಹರಾಜು ಕೋಠಡಿ ಪ್ರವೇಶಿಸಲಿವೆ. ಈ ವೇಳೆ ಉಭಯ ತಂಡಗಳ ಬಳಿ ತಲಾ ಒಂದೊಂದು ಆರ್‌ಟಿಎಂ ಕಾರ್ಡ್ ಇದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಸಹ ಒಂದು ಆರ್‌ಟಿಎಂ ಕಾರ್ಡ್ ಹಾಗೂ 45 ಕೋಟಿ ರೂಪಾಯಿ ಹೊದಿದೆ.
ಆರು ಸ್ಥಾನ ಫುಲ್!
ಬಿಸಿಸಿಐ ಹೇಳಿದಂತೆ ತಮ್ಮ ತಂಡದ ಆರೂ ಸ್ಥಾನಗಳನ್ನು ಭರ್ತಿ ಮಾಡಿಕೊಂಡ ಎರಡೇ ಎರಡು ತಂಡಗಳು ಅಂದರೆ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್. ಐಪಿಎಲ್ ಮೆಗಾ ಹರಾಜಿನಲ್ಲಿ ಈ ತಂಡಗಳ ಬಳಿ ಯಾವುದೇ ಆರ್‌ಟಿಎಂ ಕಾರ್ಡ್‌ಗಳು ಇರುವುದಿಲ್ಲ. ರಾಜಸ್ಥಾನ 41 ಕೋಟಿಯೊಂದಿದರೆ, ಕೆಕೆಆರ್ 51 ಕೋಟಿ ರೂಪಾಯಿಯನ್ನು ಬಿಡ್ಡಿಂಗ್‌ನಲ್ಲಿ ಬಳಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications