ಐಪಿಎಲ್ 2019ಗಾಗಿ ಆಟಗಾರರ ಹರಾಜು ದಿನಾಂಕ, ಸ್ಥಳ ಘೋಷಣೆ


ಬೆಂಗಳೂರು, ಡಿಸೆಂಬರ್ 03: ಈ ಬಾರಿ ಅವಧಿಗೂ ಮುನ್ನವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2019ರ ಹರಾಜು ಪ್ರಕ್ರಿಯೆ ಬೆಂಗಳೂರಿನ ಬದಲಿಗೆ ಜೈಪುರದಲ್ಲಿ ನಡೆಸಲಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ(ಡಿಸೆಂಬರ್ 03) ದಂದು ಪ್ರಕಟಿಸಿದೆ.
2019ನೇ ಸಾಲಿನ 12ನೇ ಆವೃತ್ತಿಯ ಐಪಿಎಲ್ ಗಾಗಿ ಜೈಪುರದಲ್ಲಿ ಡಿಸೆಂಬರ್ 17 ಹಾಗೂ 18ರಂದು ಹರಾಜು ನಡೆಸಲಾಗುತ್ತದೆ.
ಎಷ್ಟು ಆಟಗಾರರು?: 70 ಆಟಗಾರರು ಹರಾಜಾಗುತ್ತಿದ್ದು, 50 ಮಂದಿ ಭಾರತೀಯರು 20 ಮಂದಿ ವಿದೇಶಿ ಆಟಗಾರರಿದ್ದಾರೆ. 145.25 ಕೋಟಿ ರು ಅದಲು ಬದಲಾಗಲಿದೆ.
ಈ ಮುಂಚೆ ಗೋವಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲು ಯತ್ನಿಸಲಾಗಿತ್ತು. ಆದರೆ, ಫ್ರಾಂಚೈಸಿಗಳ ಬೇಡಿಕೆಗೆ ಮಣಿದು ಜೈಪುರದಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.
2009 ಹಾಗೂ 2014ರಲ್ಲಿ ಭಾರತದ ಹೊರಗೆ ಐಪಿಎಲ್ ಆಯೋಜಿಸಲಾಗಿತ್ತು. ಐಪಿಎಲ್ ಗೆ ಪುನರ್ ಪ್ರವೇಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಪ್ ಎತ್ತಿತ್ತು. ವಿಶ್ವಕಪ್ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಮೆಂಟ್ ಏಪ್ರಿಲ್ -ಮೇ ಅವಧಿಯಲ್ಲಿ ನಡೆಸಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications