Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ದುಬಾರಿ ಬೆಲೆಗೆ ಮಾರಾಟವಾದ ಅತೀ ಕಿರಿಯ ಆಟಗಾರರು!

IPL auction: Indian teenagers emerge as costly buys as franchise rope them in

ಜೈಪುರ, ಡಿಸೆಂಬರ್ 19: ಐಪಿಎಲ್ 12ನೇ ಆವೃತ್ತಿಗಾಗಿ ಆಟಗಾರರ ಹರಾಜು ನಡೆದಾಗ ಸೂಪರ್ ಸ್ಟಾರ್ ಆಟಗಾರ ಡೇಲ್‌ಸ್ಟೇನ್ ಮಾರಾಟವಾಗದೆ ಉಳಿದರೆ, ಯುವರಾಜ್ ಸಿಂಗ್ ಕಡೇ ಘಳಿಗೆಯಲ್ಲಿ ಮಾರಾಟವಾದ ಸಂಗತಿ ನಡೆದಿತ್ತು. ಈ ನಡುವೆ ಹರಾಜಿನಲ್ಲಿ ಅತೀ ಕಿರಿಯ ಆಟಗಾರರು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಎಲ್ಲರನ್ನೂ ಅಚ್ಚರಿಗೀಡು ಮಾಡಿತ್ತು.

ಮಂಗಳವಾರ (ಡಿಸೆಂಬರ್ 19) ಜೈಪುರದಲ್ಲಿ ನಡೆದ 2019ನೇ ಐಪಿಎಲ್ ಆಟಗಾರರ ಹರಾಜಿನಲ್ಲಿ ಪ್ರಭ್ ಸಿಮ್ರನ್ ಸಿಂಗ್ ಮತ್ತು ಪ್ರಯಾಸ್ ರೈ ಬರ್ಮನ್ ಅತೀಕಿರಿಯ ಆಟಗಾರರಾಗಿ ಗಮನ ಸೆಳೆದರು. ಅದೂ ಇಬ್ಬರೂ ಕೋಟಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಮೂಗಿಗೆ ಬೆರಳಿಡುವಂತೆ ಮಾಡಿತ್ತು.

18ರ ಹರೆಯದ ಪ್ರಭ್ ಸಿಮ್ರನ್ ಅವರನ್ನು ಪ್ರೀತಿ ಝಿಂಟಾ ಮಾಲಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ಫ್ರಾಂಚೈಸಿ ಬರೋಬ್ಬರಿ 4.80 ಕೋ.ರೂ. ಖರೀದಿಸಿತು. ಪ್ರಯಾಸ್ ಅವರು 1.5 ಕೋ.ರೂ.ಗೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.

ಪ್ರಭ್ ಸಿಮ್ರನ್ ವಿಕೆಟ್ ಕೀಪಿಂಗ್‌ ಮತ್ತು ಬ್ಯಾಟಿಂಗ್‌ಗೆ ಸಮರ್ಥರಿದ್ದರೆ, ವೆಸ್ಟ್ ಬೆಂಗಾಲ್‌ನ ಬರ್ಮನ್ ಸರ್ವಾಂಗಿಣ ಆಟಗಾರ. ಇಬ್ಬರ ಮೂಲ ಬೆಲೆಯೂ 20 ಲಕ್ಷ ರೂ. ಆಗಿತ್ತು. ಅನುಭವಿ ಅನೇಕ ಆಟಗಾರರು ಮಾರಾಟವಾಗದೆ ಉಳಿಯುವಾಗ ದುಬಾರಿ ಬೆಲೆಗೆ ಮಾರಾಟವಾದ ಈ ಇಬ್ಬರೂ ಆಟಗಾರರತ್ತಲೇ ಕ್ರೀಡಾಭಿಮಾನಿಗಳ ಚಿತ್ತ ಹರಿದಿದ್ದು ಸುಳ್ಳಲ್ಲ.

ಮಾರಾಟವಾಗದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಬಲಾಡ್ಯರಾದ ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್, ಭಾರತದ ಚೇತೇಶ್ವರ್ ಪೂಜಾರ, ಮನೋಜ್ ತಿವಾರಿ ಹೀಗೆ ಸಾಲು ಸಾಲು ಹೆಸರುಗಳು ಕಾಣ ಸಿಗುತ್ತವೆ. ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರು ಅಂತಿಮ ಕ್ಷಣದಲ್ಲಿ 1 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾದರು.

Story first published: Wednesday, December 19, 2018, 15:24 [IST]
Other articles published on Dec 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+