Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2025: ಐಪಿಎಲ್‌ ಇತಿಹಾಸದಲ್ಲಿ ದುಬಾರಿ ಆಟಗಾರರ ಪಟ್ಟಿ

ನವೆಂಬರ್‌ 23 ರಂದು ಐಪಿಎಲ್ ಮೆಗಾ ಹರಾಜು ಆರಂಭವಾಗಲಿದೆ. ಈ ಹರಾಜಿನಲ್ಲಿ ಐಪಿಎಲ್‌ನ 10 ಮಾಲೀಕರು ಭಾಗವಾವಹಿಸಲಿದ್ದಾರೆ. ಈ ಹರಾಜಿನಲ್ಲಿ ಆಟಗಾರರು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ಆಟಗಾರರ ಸದ್ಯದ ಫಾರ್ಮ್‌ ಹಾಗೂ ಅವರ ಬ್ರ್ಯಾಂಡ್‌ ವ್ಯಾಲ್ಯೂ ಪರಿಗಣಿಸಿ ಐಪಿಎಲ್ ಮಾಲೀಕರು ಆಟಗಾರರಿಗೆ ಮಣೆ ಹಾಕುತ್ತಾರೆ. ಸ್ಟಾರ್ ಆಟಗಾರರು ಐಪಿಎಲ್‌ ಮೆಗಾ ಹರಾಜು ಪ್ರವೇಶುಸುತ್ತಿದ್ದಂತೆ ಮಾಲೀಕರು ಹಣದ ಹೊಳೆಯನ್ನು ಹರಿಸಲಿದ್ದಾರೆ.

ಸ್ಟಾರ್‌ ಆಟಗಾರರನ್ನು ಕೊಳ್ಳಲು ಐಪಿಎಲ್ ತಂಡಗಳ ಮಾಲೀಕರು ಹಣದ ಹೊಳೆಯನ್ನು ಹರಿಸುತ್ತಾರೆ. ಆ ಆಟಗಾರ ಆಲ್‌ರೌಂಡರ್‌ ಆಗಿದ್ದರೆ ಮುಗಿದೇ ಹೋಯಿತು. ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಐಪಿಎಲ್‌ ಇತಿಹಾಸದಲ್ಲಿ ಅದೆಷ್ಟೋ ಆಟಗಾರರು ಕುಬೇರರ ವಂಶಕ್ಕೆ ಡೈರೆಕ್ಟ್‌ ಎಂಟ್ರಿ ಪಡೆದಿದ್ದಾರೆ. ಹಾಗಿದ್ದರೆ ಐಪಿಎಲ್‌ ಇತಿಹಾಸದಲ್ಲಿ ದುಬಾರಿ ಬೆಲೆಗೆ ಬಿಕರಿ ಆದ ಆಟಗಾರರ ಪಟ್ಟಿ ಇಲ್ಲಿದೆ.

IPL Auction Over the Years Most Expensive Players and Total Spending Till IPL 2024

ಧೋನಿ ದುಬಾರಿ ಆಟಗಾರ

ಐಪಿಎಲ್‌ 2008 ರ ಮೊದಲ ಆವೃತ್ತಿಯಲ್ಲಿ 8 ತಂಡಗಳು ಆಟಗಾರರ ಖರೀದಿಗೆ 36.4 ಕೋಟಿ ಖರ್ಚು ಮಾಡಿದ್ದವು. ಮೊದಲ ಆವೃತ್ತಿಯಲ್ಲಿ ಧೋನಿ 9.5 ಕೋಟಿಗೆ ಬಿಕರಿ ಆಗಿ, ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಐಪಿಎಲ್‌ ಎರಡನೇ ಆವೃತ್ತಿಯಲ್ಲಿ ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ ದುಬಾರಿ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪೀಟರ್ಸನ್ ಅವರನ್ನು ಆರ್‌ಸಿಬಿ ಖರೀದಿಸಿತು ಮತ್ತು ಫ್ಲಿಂಟಾಫ್ ಅವರನ್ನು ಸಿಎಸ್‌ಕೆ 9.8 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್‌ 2010ರ ದುಬಾರಿ ಆಟಗಾರ ಎಂಬ ಕೀರ್ತಿ ಶೇನ್ ಬಾಂಡ್ ಮತ್ತು ಕೀರಾನ್ ಪೊಲಾರ್ಡ್ ಅವರಿಗೆ ಸಲ್ಲುತ್ತದೆ.

ಐಪಿಎಲ್‌ 2011ರ ದುಬಾರಿ ಆಟಗಾರ ಎಂದರೆ ಗೌತಮ್‌ ಗಂಭೀರ್‌. ಆಗ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 14.9 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್‌ 2012ರ ಹೆಚ್ಚಿನ ಹಣಕ್ಕೆ ದುಬಾರಿಗೆ ಸೇಲ್‌ ಆದ ಆಟಗಾರ. ಈ ಹರಾಜಿನಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 12.8 ಕೋಟಿ ರೂ.ಗೆ ಖರೀದಿಸಿತ್ತು. 2013ರ ಐಪಿಎಲ್‌ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 6.3 ಕೋಟಿ ರೂ.ಗೆ ಖರೀದಿಸಿತು.

IPL Auction Over the Years Most Expensive Players and Total Spending Till IPL 2024

ದಾಖಲೆ ನಿರ್ಮಿಸಿದ ಯುವಿ

ಯುವರಾಜ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ 2014ರಲ್ಲಿ 14 ಕೋಟಿ ರೂ.ಗೆ ಖರೀದಿಸಿತು. ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಯುವಿ ಅವರಿಗೆ 16 ಕೋಟಿ ರೂ.ಗೆ ನೀಡಿತು. ಐಪಿಎಲ್‌ 2016ರಲ್ಲೂ ಆರ್‌ಸಿಬಿ ಶೇನ್‌ ವ್ಯಾಟ್ಸನ್‌ ಅವರನ್ನು 9.5 ಕೋಟಿ ನೀಡಿ ಖರೀದಿಸಿತು. ಐಪಿಎಲ್‌ 2017 ಹರಾಜಿನಲ್ಲಿ ಬೆನ್ ಸ್ಟೋಕ್ಸ್, ಅವರನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್ 14.5 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು.

ಐಪಿಎಲ್‌ 2018ರ ಐಪಿಎಲ್‌ನಲ್ಲಿ ತಮ್ಮ ತಂಡದ ಪರ ಆಡುವಂತೆ ಬೆನ್‌ ಸ್ಟೋಕ್ಸ್ ಅವರಿಗೆ 12.5 ಕೋಟಿ ನೀಡಿತು. ಐಪಿಎಲ್‌ 2019 ಉನದ್ಕತ್ ಅವರನ್ನು ರಾಜಸ್ಥಾನ ಮತ್ತು ಚಕ್ರವರ್ತಿ ಅವರನ್ನು ಪಂಜಾಬ್ 8.4 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್‌ 2020ರಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 15.5 ಕೋಟಿ ರೂ.ಗೆ ಖರೀದಿಸಿತು.

IPL Auction Over the Years Most Expensive Players and Total Spending Till IPL 2024

ಸ್ಟಾರ್ಕ್‌ ಶ್ರೀಮಂತ ಆಟಗಾರ

ರಾಜಸ್ಥಾನ ಐಪಿಎಲ್‌ 2021ರಲ್ಲಿ ಕ್ರಿಸ್ ಮೋರಿಸ್ ನೀಡಿ 16.25 ಕೋಟಿಗೆ ಬರ ಮಾಡಿಕೊಂಡಿತು. ಐಪಿಎಲ್‌ 2022ರ ಹರಾಜಿನಲ್ಲಿ ದುಬಾರಿ ಆಟಗಾರ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಖರೀದಿಸಿತು. ಸ್ಯಾಮ್‌ ಕರನ್‌ ಅವರನ್ನು ಐಪಿಎಲ್‌ 2023ರ ಹರಾಜಿನಲ್ಲಿ ಪಂಜಾಬ್‌ 18.5 ಕೋಟಿಗೆ ತಮ್ಮ ತಂಡದ ಜೆರ್ಸಿ ನೀಡಿತು. ಐಪಿಎಲ್‌ 2024ರ ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌ ದಾಖಲೆ ಮೊತ್ತಕ್ಕೆ ಬಿಡ್‌ ಆದ ಆಟಗಾರ ಎಂಬ ಕೀರ್ತಿ ತಮ್ಮ ದಾಗಿಸಿಕೊಂಡರು. ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಬಿಡ್ ಮಾಡಿತು.

Story first published: Sunday, November 24, 2024, 10:02 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+