ಐಪಿಎಲ್ ಹರಾಜು; ಐಪಿಎಲ್ ಇತಿಹಾಸದಲ್ಲಿ ಪ್ಯಾಟ್ ಕಮಿನ್ಸ್ ದಾಖಲೆ

ಐಪಿಎಲ್ ಹರಾಜಿನಲ್ಲಿ ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಅಸ್ಟ್ರೇಲಿಯಾದ ವೇಗಿ ಐಪಿಎಲ್ ಇತಿಹಾಸದಲ್ಲೇ ವಿಶೇಷ ದಾಖಲೆಯನ್ನು ಮಾಡಿದ್ದಾರೆ. 15.50 ಕೋಟಿ ಬೆಲೆಗೆ ಪ್ಯಾಟ್ ಕಮಿನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ.
ವಿದೇಶಿ ಅಟಗಾರನೋರ್ವನ ಐಪಿಎಲ್ ಇತಿಹಾಸದಲ್ಲಿ ನಡೆದ ಹರಾಜಿನಲ್ಲಿ ಪಡೆದ ಅತಿದೊಡ್ಡ ಮೊತ್ತ ಇದಾಗಿದೆ. 2017ರಲ್ಲಿ 14.5 ಕೋಟಿಗೆ ಬೆನ್ ಸ್ಟೋಕ್ಸ್ ಹರಾಜಾಗಿದ್ದು ಇಲ್ಲಿಯವರೆಗೆ ವಿದೇಶಿ ಆಟಗಾರ ಪಡೆದಿರುವ ದೊಡ್ಡ ಮೊತ್ತವಾಗಿದೆ.
ಪ್ಯಾಟ್ ಕಮಿನ್ಸ್ ಪಡೆದಿರುವ ಮೊತ್ತ ಒಟ್ಟಾರೆಯಾಗಿ ಪಡೆದಿರುವ ಎರಡನೇ ದೊಡ್ಡ ಮೊತ್ತವಾಗಿದೆ. 2015 ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 16 ಕೋಟಿಗೆ ಮಾರಾಟವಾಗಿದ್ದರು.
ಆರ್‌ಸಿಬಿ ತಂಡ ಕೊನೆ ಕ್ಷಣದವರೆಗೆ ಪ್ಯಾಟ್ ಕಮ್ಮಿನ್ಸ್ ಅವರನ್ನು ತಂಡಕ್ಕೆ ಸೇರ್ಡೆಗೊಳಿಸಲು ಪ್ರಯತ್ಮ ಪಟ್ಟಿತು. ಆದರೆ ಕೊನೆಗೆ ಕೆಕೆಆರ್ ಹರಾಜಿಗೆ ಬಿಟ್ಟುಕೊಟ್ಟಿದ್ದ ತಮ್ಮದೇ ಆಟಗಾರನನ್ನು ಇಷ್ಟು ದೊಡ್ಡ ಮೊತ್ತಕ್ಕೆ ಮರಳಿ ಪಡೆಯಲು ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications