"ಆ ತಂಡದ ಕಾರಣ ಆತ ಹಾಗಾಗಿದ್ದ" : ಕೆಎಲ್ ರಾಹುಲ್ ಬಗ್ಗೆ ಆಕಾಶ್ ಚೋಪ್ರ ಹೇಳಿಕೆ

ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಕಳೆದ ಕೆಲ ವರ್ಷಗಳಿಂದ ಸತತವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಅದರಲ್ಲೂ ಕಳೆದ ಎರಡು ಆವೃತ್ತಿಯಲ್ಲಿ ರಾಹುಲ್ ಸತತವಾಗಿ 600ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಹಾಗಿದ್ದರೂ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಕೆಲ ಅಸಮಾಧಾನಗಳು ವ್ಯಕ್ತವಾಗಿತ್ತು. ಇದಕ್ಕೆ ಕಾರಣ ಕೆಎಲ್ ರಾಹುಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕನಾಗಿ ತ್ವರಿತವಾಗಿ ರನ್‌ಗಳಿಸಲು ರಾಹುಲ್ ವಿಫಲವಾದರು ಎಂಬುದು ಇದಕ್ಕೆ ಕಾರಣವಾಗಿದೆ.
ಪ್ರಸ್ತುತ ಕೆಎಲ್ ರಾಹುಲ್ ಪಂಜಾಬ್ ಫ್ರಾಂಚೈಸಿಯನ್ನು ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಮಡದ ಪರವಾಗಿ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋಗಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆ ತಂಡವೇ ಕಾರಣವಾಗಿದೆ ಎಂಬ ಮಾತನ್ನು ಚೋಪ್ರ ಹೇಳಿದ್ದಾರೆ.
ಹಾಗಾದರೆ ಆಕಾಶ್ ಚೋಪ್ರ ವಿಶ್ಲೇಷಣೆಯ ಪ್ರಕಾರ ಕೆಎಲ್ ರಾಹುಲ್ ಕಳೆದ ಆವೃತ್ತಿಯಲ್ಲಿ ನಿಧಾನಗತಿಯ ಬ್ಯಾಟಿಂಗ್‌ನ ಮೊರೆ ಹೋಗಲು ಕಾರಣವೇನು? ಮುಂದೆ ಓದಿ..
"ರಾಹುಲ್ ನಿಧಾನಗತಿಯ ಬ್ಯಾಟಿಂಗ್‌ಗೆ ಕಾರಣ ಪಂಜಾಬ್ ತಂಡ": "ಕೆಎಲ್ ರಾಹುಲ್ ಹಾರ್ದಿಕ್ ಪಾಂಡ್ಯ ರೀತಿಯಲ್ಲಿಯೇ ದೊಡ್ಡ ಹೊಡೆತಗಳನ್ನು ಬಾರಿಸುವ ಆಟಗಾರ. ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ ನಿಧಾನಗತಿಯ ಬ್ಯಾಟಿಂಗ್‌ಗೆ ರಾಹುಲ್ ಮೊರೆ ಹೋಗಬೇಕಾಯಿತು. ಅದಕ್ಕೆ ಕಾರಣ ಆ ತಂಡವೇ ಹಾಗಿತ್ತು. ಆದರೆ ಈಗ ಅವರ ತಂಡವನ್ನು ಅವರ ಜೊತೆ ಚರ್ಚಿಸಿದ ಬಳಿಕ ರಚಿಸಲಾಗಿದೆ. ಈಗ ನೀವು ಎಷ್ಟು ಉತ್ತಮ ನಾಯಕ ಎಂಬುದನ್ನು ಸಾಬೀತುಪಡಿಸಬೇಕಿದೆ. ಈ ಸಂದರ್ಭದಲ್ಲಿ ಕಾರಣಗಳನ್ನು ನೀಡಲು ಸಾಧ್ಯವಿಲ್ಲ" ಎಂದು ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ವಿವರಿಸಿದ್ದಾರೆ.
ಈಗ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿ: ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಈ ಬಾರಿ ನಿಜವಾದ ಸಾಮರ್ಥ್ಯವನ್ನು ತೋರ್ಪೊಡಿಸಲು ಕೆಎಲ್ ರಾಹುಲ್‌ಗೆ ದೊರೆತ ಅತ್ಯುತ್ತಮ ಸಂದರ್ಭವಿದು ಎಂದಿದ್ದಾರೆ. "ಈಗ ನೀವು ನಿರಾಳವಾಗಿ ಆಡಬಹುದು. ಈಗ ಆಗದಿದ್ದರೆ ಮುಂದೆ ಸಾಧ್ಯವಾಗುವುದಿಲ್ಲ. ಇದು ಮಾಡು ಇಲ್ಲವೇ ಮಡಿ ಸಂದರ್ಭ. ಗೌತಮ್ ಗಂಭೀರ್ ಹಾಗೂ ಆಂಡಿ ಫ್ಲವರ್ ಅವರಂತಾ ಅತ್ಯುತ್ತಮ ಕ್ರಿಕೆಟ್ ಅನುಭವ ಹೊಂದಿರುವ ಇಬ್ಬರು ನಿಮ್ಮ ತಂಡಕ್ಕೆ ಬೆಂಬಲಕ್ಕಿದ್ದಾರೆ. ನೀವೋರ್ವ ಅತ್ಯುತ್ತಮ ನಾಯಕ ಮತ್ತು ಅದ್ಭುತವಾದ ಆಟಗಾರ. ನಿಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಈ ಬಾರಿ ಸಂಪೂರ್ಣವಾಗಿ ಪ್ರದರ್ಶಿಸಿ" ಎಂದು ಕೆಎಲ್ ರಾಹುಲ್‌ಗೆ ಆಕಾಶ್ ಚೋಪ್ರ ಸಲಹೆ ನೀಡಿದ್ದಾರೆ.
ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್: ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ಕೆಎಲ್ ರಾಹುಲ್ ಹರಾಜಿಗೂ ಮುನ್ನವೇ ನೂತನವಾಗಿ ಐಪಿಎಲ್ ಟೂರ್ನಿಗೆ ಸೇರ್ಪಡೆಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡರು. ಇದೀಗ ಕೆಎಲ್ ರಾಹುಲ್ ಲಕ್ನೋ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹೊಸ ತಮಡದ ಜವಾಬ್ಧಾರಿ ಹೊತ್ತಿರುವ ಕೆಎಲ್ ರಾಹುಲ್ ಪ್ರದರ್ಶನದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ಸ್ಕ್ವಾಡ್: ಕೆಎಲ್ ರಾಹುಲ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಆಯುಷ್ ಬಡೋನಿ, ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications