ವಿಶ್ವಕಪ್ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್

ಲಂಡನ್, ಮೇ 23: ಇಂಗ್ಲಿಷ್ ಕ್ರಿಕೆಟ್ ಬೆಳವಣಿಗೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸಹಾಯ ಮಾಡಿದೆ. ವಿಶ್ವಕಪ್ ಪಂದ್ಯಾವಳಿಗಳ ಬಳಿಕ ಐಪಿಎಲ್ ವಿಶ್ವದ ಅತ್ಯುತ್ತಮ ಟೂರ್ನಿ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ತಾನು ಕಾತರನಾಗಿರುವುದಾಗಿ ಬಟ್ಲರ್ ಹೇಳಿದ್ದಾರೆ.
ಕೊರೊನಾವೈರಸ್ ಭೀತಿ ಇಲ್ಲದಿದ್ದರೆ 13ನೇ ಆವೃತ್ತಿಯ ಐಪಿಎಲ್ ಮಾರ್ಚ್ 29ರಿಂದ ಆರಂಭಗೊಳ್ಳುವುದರಲ್ಲಿತ್ತು. ಆದರೆ ಕೋವಿಡ್ 19 ಕಾರಣ ಭಾರತದಲ್ಲಿ ಲಾಕ್‌ಡೌನ್ ಜಾರಿಯಾಗಿದ್ದರಿಂದ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
'ಕಳೆದ ಕೆಲ ವರ್ಷಗಳಿಂದ ಆಡುತ್ತಿರುವ ಆಟಗಾರರಿಗೆ ಮತ್ತು ಇಂಗ್ಲಿಷ್ ಕ್ರಿಕೆಟ್ ಬೆಳವಣಿಗೆಗೆ ಐಪಿಎಲ್ ನೆರವು ನೀಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಐಪಿಎಲ್ ಆಡಲು ಸಾಧ್ಯವಾಗದ್ದಕ್ಕೆ ಹತಾಶೆಯಾಗಿದೆ. ನನ್ನ ಪ್ರಕಾರ ವಿಶ್ವಕಪ್ ಬಳಿಕ ಐಪಿಎಲ್ ಅತ್ಯುತ್ತಮ ಟೂರ್ನಿ,' ಎಂದು ಬಟ್ಲರ್ ಅಭಿಪ್ರಾಯಿಸಿದ್ದಾರೆ.
2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಅಗಿರುವ ಜೋಸ್ ಬಟ್ಲರ್, ಐಪಿಎಲ್‌ನಲ್ಲಿ ಎರಡು ಫ್ರಾಂಚೈಸಿಗಳ ಪರ ಆಡಿದ್ದಾರೆ. 2016-17ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಬಟ್ಲರ್, 2018ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications