ಐಪಿಎಲ್ 10ರ ಮೇಲೆ ಬೆಟ್ಟಿಂಗ್ ಕರಿನೆರಳು, ಮಾಸ್ಟರ್ ಮೈಂಡ್ ಬಂಧನ
ಕಾನ್ಪುರ್, ಮೇ 12 : ಇಂಡಿಯನ್ ಪ್ರೀಮಿಯಗ್ರಳು (ಐಪಿಎಲ್) 10ರ ಮೇಲೆ ಬೆಟ್ಟಿಂಗ್ ಕರಿನೆರಳು ಆವರಿಸುವ ಲಕ್ಷಣಗಳು ಕಂಡು ಬಂದಿದೆ. ಕಾನ್ಪುರದ ಪಂಚತಾರಾ ಹೋಟೆಲ್ ಸೇರಿದಂತೆ ಹಲವೆಡೆ ನಡೆಸಿದ ದಾಳಿಯಲ್ಲಿ ಬುಕ್ಕಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಆಟಗಾರರಿದ್ದ ಹೋಟೆಲ್ ನಲ್ಲಿದ್ದರು ಎಂದು ತಿಳಿದು ಬಂದಿದೆ.
ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಆಟಗಾರರು ವಾಸ್ತವ್ಯವಿದ್ದ ಟೀಮ್ ಹೋಟೆಲ್ನಲ್ಲಿಯೇ ಮೂವರು ಬಂಧಿತರಾಗಿದ್ದಾರೆ.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ 2 ವಿಕೆಟ್ಗಳಿಂದ ರೋಚಕವಾಗಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿತ್ತು. ಬುಕ್ಕಿಗಳಿಂದ ಬರೋಬ್ಬರಿ 40 ಲಕ್ಷ ರೂ. ನಗದು ಹಾಗೂ ಐದು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಬೈ ಮೂಲದ ಮಾಸ್ಟರ್ವೆುೖಂಡ್ ರಮೇಶ್ ಷಾ, ವಿಕಾಸ್ ಚೌಹಾಣ್ ಹಾಗೂ ರಮೇಶ್ ಬಂಧಿತರು. ಪೊಲೀಸ್ ಮೂಲಗಳ ಪ್ರಕಾರ, ಭಾರತದ ಪ್ರಮುಖ ಸ್ಟೇಡಿಯಂಗಳನ್ನು ರಮೇಶ್ ಷಾ ತನ್ನ ನೆಟ್ವರ್ಕ್ ಹೊಂದಿದ್ದು, ಪಿಚ್ ಕುರಿತಾಗಿ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದ. ಹೋಟೆಲ್ನ 17ನೇ ಮಹಡಿಯ 1733 ನಂಬರ್ ಕೋಣೆಯಲ್ಲಿ ಈ ಮೂವರು ವಾಸವಿದ್ದರು. ಬಂಧಿತರಿಂದ ಡೈರಿಯೊಂದನ್ನೂ ವಶ ಪಡಿಸಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications