IPL ಬ್ರ್ಯಾಂಡ್ ಮೌಲ್ಯ ಶೇ.80ರಷ್ಟು ಏರಿಕೆ, CSK ಅತ್ಯಂತ ಮೌಲ್ಯಯುತ ತಂಡ; RCBಗೆ ಎಷ್ಟನೇ ಸ್ಥಾನ?
2022ರಲ್ಲಿ ದಾಖಲೆಯ ಬೆಲೆಗೆ ಮಾಧ್ಯಮ ಹಕ್ಕುಗಳ ಒಪ್ಪಂದದ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಎನಿಸಿಕೊಂಡಿತು.
ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನ ನಂತರ ಪ್ರತಿ ಪಂದ್ಯದ ಮೌಲ್ಯಕ್ಕೆ ಸಂಬಂಧಿಸಿದಂತೆ ಭಾರತದ ದೇಶೀಯ ಟಿ20 ಪಂದ್ಯಾವಳಿಯು ವಿಶ್ವದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಹೊಸ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದಲ್ಲಿ, ಲೀಗ್‌ನ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಕ್ಕಿಂತ ಶೇ.80ರಷ್ಟು (3.2 ಬಿಲಿಯನ್ ಡಾಲರ್) ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ಹೌಲಿಹಾನ್ ಲೋಕಿ ಅವರ ಅಧ್ಯಯನದ ಪ್ರಕಾರ, 2023ರ ಐಪಿಎಲ್ ವಿಜೇತ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ 212 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯವನ್ನು ಹೊಂದಿರುವ ಹತ್ತು ಫ್ರಾಂಚೈಸಿಗಳ ಪೈಕಿ ಅಗ್ರಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಚ್ಚಿನ ಯಶಸ್ಸಿನ ಮನ್ನಣೆ ನಾಯಕ ಎಂಎಸ್ ಧೋನಿಗೆ ಸಲ್ಲಬೇಕು. ಧೋನಿ ಈ ಬಾರಿಯ ಐಲಿಎಲ್‌ನಲ್ಲಿ ಅತಿದೊಡ್ಡ ಜನ ಬೆಂಬಲ ಪಡೆದ ಆಟಗಾರನಾಗಿದ್ದಾರೆ.
2023ರ ಇಡೀ ಋತುವಿನಲ್ಲಿ ಭಾರತದ ಮಾಜಿ ನಾಯಕನ ಆಟವನ್ನು ನೋಡಲು ಪ್ರಪಂಚದಾದ್ಯಂತದ ಅಭಿಮಾನಿಗಳು ಕ್ರೀಡಾಂಗಣಗಳಲ್ಲಿ ನೆರೆದಿದ್ದರು. ಏಕೆಂದರೆ ಎಂಎಸ್ ಧೋನಿ ತಮ್ಮ ಕೊನೆಯ ಋತುವನ್ನು ಆಡುತ್ತಾರೆ ಎಂಬ ವದಂತಿಗಳು ಹರಡಿದ್ದವು.
"ನಾವು ಐಪಿಎಲ್ ವ್ಯವಹಾರವನ್ನು ಮೌಲ್ಯಮಾಪನ ಮಾಡುತ್ತಿಲ್ಲ. ನಾವು ಬ್ರ್ಯಾಂಡ್ ಅನ್ನು ಮೌಲ್ಯೀಕರಿಸುತ್ತಿದ್ದೇವೆ, ಅದೊಂದು ಉಪಕ್ರಮವಾಗಿದೆ. ಸಿಎಸ್‌ಕೆ ಗೆಲುವಿನ ಮತ್ತು ಬ್ರ್ಯಾಂಡ್ ಹೆಚ್ಚಳಕ್ಕೆ ಎಂಎಸ್ ಧೋನಿ ಕಾರಣರಾಗಿದ್ದಾರೆ. ಪ್ರಾಯೋಜಕರು ತಂಡಗಳಿಗೆ ಶ್ರೇಯಾಂಕ ನೀಡುತ್ತಾರೆ, ಅವರು ಮೌಲ್ಯಮಾಪನ ಮಾಡುತ್ತಾರೆ," ಎಂದು ಕಾರ್ಪೊರೇಟ್ ಮೌಲ್ಯಮಾಪನ ಸಲಹಾ ಸೇವೆಗಳ ಉಪಾಧ್ಯಕ್ಷ ಹರ್ಷ ತಾಳಿಕೋಟಿ ತಿಳಿಸಿದ್ದಾರೆ.
ಐಪಿಎಲ್‌ನ ಆದಾಯ ಮಾದರಿಯ ಪ್ರಕಾರ, ಪ್ರತಿ ಫ್ರಾಂಚೈಸಿಯು ಕೇಂದ್ರೀಯ ಪೂಲ್‌ನಿಂದ (ಮಾಧ್ಯಮ ಹಕ್ಕುಗಳು ಮತ್ತು ಕೇಂದ್ರ ಪ್ರಾಯೋಜಕತ್ವಗಳು) ಸಮಾನ ಆದಾಯ ಪಡೆಯುತ್ತದೆ. ಇದು ಪ್ರತಿ ವರ್ಷವೂ ಬೆಳೆಯುತ್ತಲೇ ಇರುತ್ತದೆ ಹಾಗೂ ಲೀಗ್ ಅನ್ನು ಎಲ್ಲಾ ತಂಡಗಳಿಗೆ ಆಕರ್ಷಕ ಹೂಡಿಕೆಯನ್ನಾಗಿ ಮಾಡುತ್ತದೆ.
ವರದಿಯ ಪ್ರಕಾರ, ಮೂರು ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ತಮ್ಮ ಪಂದ್ಯಗಳಿಗೆ ಗರಿಷ್ಠ ವೀಕ್ಷಕರನ್ನು ಪಡೆದಿವೆ.
ಐಪಿಎಲ್ 2023ರ ಸಿಎಸ್‌ಕೆ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಜಿಯೋ ಸಿನಿಮಾ 32.0 ಮಿಲಿಯನ್ ಏಕಕಾಲಕ್ಕೆ ವೀಕ್ಷಕರನ್ನು ಪಡೆದು ದಾಖಲೆ ನಿರ್ಮಿಸಿತು.
ಆರ್‌ಸಿಬಿ 2ನೇ ಸ್ಥಾನದಲ್ಲಿ, ಮುಂಬೈ ಇಂಡಿಯನ್ಸ್ 3ನೇ ಸ್ಥಾನದಲ್ಲಿ
ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯಮಾಪನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 195 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಕಳೆದ ವರ್ಷಕ್ಕಿಂತ ಶೇ.52.3ರಷ್ಟು ಏರಿಕೆಯಾಗಿದೆ.
2008ರಿಂದ ಆರ್‌ಸಿಬಿ ಫ್ರಾಂಚೈಸ್ ಇನ್ನೂ ಒಂದೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಗಿದೆ. ಆದರೂ ಫ್ರಾಂಚೈಸಿಯ ಮೌಲ್ಯಮಾಪನವು ಪ್ರತಿ ವರ್ಷ ಬೆಳೆಯುತ್ತಲೇ ಇರುತ್ತದೆ.
ಮತ್ತೊಂದೆಡೆ, ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 190 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇದು ಕಳೆದ ವರ್ಷಕ್ಕಿಂತ ಶೇ.34.8ರಷ್ಟು ಏರಿಕೆ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications