Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುರೇಶ್ ರೈನಾ - ಹರ್ಭಜನ್ ಸಿಂಗ್ ಈ ಟೂರ್ನಿ ಮಾತ್ರವಲ್ಲ ಮುಂದಿನ ಐಪಿಎಲ್‌ನಿಂದಲೂ ಔಟ್?

Ipl: Can Suresh Raina And Harbhajan Singh Part Of Ipl 2021?

ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ಕೈಗೊಂಡಿದ್ದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಜೊತೆಗಿನ ಎಲ್ಲಾ ಒಪ್ಪಂದವನ್ನು ಸಿಎಸ್‌ಕೆ ರದ್ದುಗೊಳಿಸಲು ಮುಂದಾಗಿದೆ ಎಂದು ಗುರುವಾರ ವರದಿಯಾಗಿತ್ತು. ಈ ಮೂಲಕ ಈ ಇಬ್ಬರು ಆಟಗಾರರಿಗೆ ಶಾಕ್ ನೀಡಲು ಸಿಎಸ್‌ಕೆ ಫ್ರಾಂಂಚೈಸಿ ಸಿದ್ಧವಾಗಿದೆ. ಆದರೆ ಇದರ ಜೊತೆಗೆ ಈ ಇಬ್ಬರು ಆಟಗಾರರು ಮತ್ತೊಂದು ಕಾರಣಕ್ಕೆ ಚಿಂತಿಸಬೇಕಾದ ಪ್ರಸಂಗ ಉಂಟಾಗಿದೆ. ಈ ಬಾರಿಯ ಆವೃತ್ತಿಂದ ಹೊರಗುಳಿಯುವ ನಿರ್ಧಾರವನ್ನು ಸ್ವತಃ ಈ ಆಟಗಾರರೇ ತೆಗೆದುಕೊಂಡಿದ್ದರಾದರೂ ಮುಂದಿನ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಬಗ್ಗೆ ಕರಿ ನೆರಳು ಆವರಿಸಿದಂತೆ ಕಂಡು ಬರುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಅವರ ಹೆಸರನ್ನು ಕಿತ್ತು ಹಾಕಿದ ಬಳಿಕ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಒಪ್ಪಂದವನ್ನೇ ಅಂತ್ಯಗೊಳಿಸುವ ಬಗ್ಗೆ ವರದಿಯಾಗಿತ್ತು. ಆದರೆ ಈಗ ಈ ಇಬ್ಬರು ಆಟಗಾರರು ಮುಂದಿನ ವರ್ಷದ ಐಪಿಎಲ್ ಆವೃತ್ತಿಯಿಂದಲೂ ಹೊರಗುಳಿಯುವ ಆತಂಕದಲ್ಲಿದ್ದಾರೆ.

Story first published: Friday, October 2, 2020, 13:25 [IST]
Other articles published on Oct 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+