ನಾಯಕರಾಗಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಯಾರು? ಪಟ್ಟಿಯಲ್ಲಿ ಕನ್ನಡಿಗ ರಾಹುಲ್, ವಿರಾಟ್‌ಗೂ ಸ್ಥಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆಡಲು ಅವಕಾಶ ಸಿಗುವುದೇ ದೊಡ್ಡ ಸಾಹಸ. ಇನ್ನು ಶ್ರೀಮಂತ ಲೀಗ್‌ನಲ್ಲಿ ತಂಡವನ್ನು ಮುನ್ನಡೆಸುವುದು ಎಂದರೆ ಹೆಚ್ಚಿನ ಒತ್ತಡ. ಐಪಿಎಲ್ ಇತಿಹಾಸದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತು ಬ್ಯಾಟ್ ಮಾಡುವುದು ಕಷ್ಟದ ಕೆಲಸ. ಒಂದೆಡೆ ರಣತಂತ್ರಗಳ ಒತ್ತಡ, ಇನ್ನೊಂದೆಡೆ ರನ್ ಗಳಿಸುವ ಅನಿವಾರ್ಯತೆ ಎರಡೂ ಸವಾಲನ್ನು ಮೆಟ್ಟಿನಿಂತು ಸಮರ್ಥವಾಗಿ ಇನಿಂಗ್ಸ್ ಕಟ್ಟುವುದೇ ಸವಾಲು.
ಐಪಿಎಲ್‌ನಂತಹ ಹೈ-ವೋಲ್ಟೇಜ್ ಲೀಗ್‌ನಲ್ಲಿ ನಾಯಕರಾದವರು ವೈಯಕ್ತಿಕ ಪ್ರದರ್ಶನ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಐಪಿಎಲ್‌ನಲ್ಲಿ ನಾಯಕರಾಗಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿ, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿದ ಬ್ಯಾಟಿಂಗ್ ದಿಗ್ಗಜರ ಬಗ್ಗೆ ಮಾಹಿತಿ ಇಲ್ಲಿದೆ.

ನಾಯಕರಾಗಿ ವಿರಾಟ್ ಅಬ್ಬರ
ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ನಾಯಕ ಎಂಬ ಹೆಗ್ಗಳಿಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಬಹುವರ್ಷಗಳ ಕಾಲ ಮುನ್ನಡೆಸಿದ್ದಾರೆ. ಈ ವೇಳೆ ಇವರು 143 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ನಾಯಕರಾಗಿ 5 ಶತಕಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಇವರು ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಅಲ್ಲದೆ 3 ಬಾರಿ ಮೂರಂಕಿ ಸಾಧನೆ ಮಾಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ನಾಯಕರಾಗಿ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ (ಸಿಎಸ್‌ಕೆ), ಆಡಮ್ ಗಿಲ್‌ಕ್ರಿಸ್ಟ್ (ಕಿಂಗ್ಸ್ ಇಲೆವೆನ್ ಪಂಜಾಬ್), ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್), ರಿಷಭ್ ಪಂತ್ (ಎಲ್‌ಎಸ್‌ಜಿ), ಸಂಜು ಸ್ಯಾಮ್ಸನ್ (ಆರ್‌ಆರ್), ವೀರೇಂದ್ರ ಸೆಹ್ವಾಗ್ (ಡೆಲ್ಲಿ ಡೆರ್‌ಡೆವಿಲ್ಸ್), ಶುಭಮನ್ ಗಿಲ್ (ಜಿಟಿ), ಸಚಿನ್ ತೆಂಡೂಲ್ಕರ್ (ಎಂಐ), ಡೇವಿಡ್ ವಾರ್ನರ್ (ಎಸ್‌ಆರ್‌ಎಚ್) ಸ್ಥಾನ ಪಡೆದಿದ್ದಾರೆ.
ನಾಯಕನಾಗಿ ಅತಿ ದೊಡ್ಡ ಇನಿಂಗ್ಸ್ ಕಟ್ಟಿದ್ದು ಯಾರು?
ನಾಯಕರಾಗಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಸಲ್ಲುತ್ತದೆ. 2020ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿ ಬ್ಯಾಟ್ ಮಾಡಿದ ಕೆಎಲ್ ರಾಹುಲ್ 69 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 132 ರನ್ ಸಿಡಿಸಿದ್ದಾರೆ. ಇದುವೇ ನಾಯಕರಾಗಿ ಒಬ್ಬ ಪ್ಲೇಯರ್ ಐಪಿಎಲ್‌ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ.
ನಾಯಕರಾಗಿ ಬಿಗ್ ಇನಿಂಗ್ಸ್ ಕಟ್ಟಿದ ಟಾಪ್ 5 ಪ್ಲೇಯರ್ಸ್
ಕೆಎಲ್ ರಾಹುಲ್ (ಪಂಜಾಬ್), 132* ರನ್
ಡೇವಿಡ್ ವಾರ್ನರ್ (ಎಸ್‌ಆರ್‌ಎಚ್), 126 ರನ್
ವೀರೇಂದ್ರ ಸೆಹ್ವಾಗ್ (ಡಿಡಿ), 119 ರನ್
ಸಂಜು ಸ್ಯಾಮ್ಸನ್ (ಆರ್‌ಆರ್), 119 ರನ್
ರಿಷಭ್ ಪಂತ್ (ಎಲ್‌ಎಸ್‌ಜಿ), 118* ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications