Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ 5 ವರ್ಷಗಳಲ್ಲಿ IPL ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ: 94 ಪಂದ್ಯಗಳು!

IPL

ಐಪಿಎಲ್ 15ನೇ ಸೀಸನ್‌ನಲ್ಲಿ ಬಿಸಿಸಿಐ 10 ತಂಡಗಳನ್ನ ಆಡಿಸುವ ಮೂಲಕ ಟೂರ್ನಿಗೆ ಹೊಸ ಕಳೆಯನ್ನು ನೀಡಿತು. ಐಪಿಎಲ್ 2021ರ ಸೀಸನ್‌ಗೆ ಹೋಲಿಸಿದ್ರೆ ಕಳೆದ ಸೀನಸ್‌ನಲ್ಲಿ ಪಂದ್ಯಗಳ ಸಂಖ್ಯೆಯನ್ನು 60ರಿಂದ 74 ಪಂದ್ಯಗಳಿಗೆ ಹೆಚ್ಚಿಸಲಾಗಿತ್ತು.

ಇದರ ಜೊತೆಗೆ 10 ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದನ್ನ ಕಾಣಬಹುದು. ಎಲ್ಲಾ ತಂಡಗಳು 14 ಪಂದ್ಯಗಳನ್ನಾಡಿದ್ದು, ಪ್ರತಿ ತಂಡ ಎರಡು ಬಾರಿ ಮುಖಾಮುಖಿಯಾಗಿದ್ರೆ, ಅವರು ಇತರ ಗುಂಪಿನ ಉಳಿದ ತಂಡಗಳ ವಿರುದ್ಧ ಒಮ್ಮೆ ಆಡಿದ್ದಾರೆ.

ಆದ್ರೆ ಇತ್ತೀಚಿನ ಮಾಹಿತಿ ಪ್ರಕಾರರ 2023 ರಿಂದ 2027ರ ಸೀಸನ್‌ವರೆಗೆ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ಸಿದ್ಧಗೊಂಡಿದ್ದು, ಮುಂದಿನ ಎರಡು ಸೀಸನ್‌ಗಳು 74 ಪಂದ್ಯಗಳನ್ನ ಕಾಣಬಹುದಾಗಿದೆ. ನಂತರ ಎರಡು ಸೀಸನ್‌ಗಳಲ್ಲಿ 84 ಪಂದ್ಯಗಳು, ಐದು ಆರನೇ ಸೀಸನ್‌ನಲ್ಲಿ(2026, 2027) 94 ಪಂದ್ಯಗಳನ್ನ ಆಡಿಸಲು ಬಿಸಿಸಿಐ ಯೋಜನೆ ನಡೆಸುತ್ತಿದೆ.

ಹೊಸದಾಗಿ ನೇಮಕಗೊಂಡ ಐಪಿಎಲ್ ಅಧ್ಯಕ್ಷ ಅರುಣ್ ದುಮಾಲ್ ಹೇಳಿಕೆಯ ಪ್ರಕಾರ ಬಿಸಿಸಿಐ ಐಪಿಎಲ್‌ನಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಹೊರಟಿದೆ.

''ಐಪಿಎಲ್ ಸೀಸನ್ ಅಭಿಮಾನಿಗಳಿಗೆ ಹೆಚ್ಚು ಸ್ನೇಹಯುತವಾಗಿರುವಂತೆ ನಾವು ಹೆಚ್ಚಿನ ಆವಿಷ್ಕಾರಗಳನ್ನ ತರಲು ಯೋಜಿಸುತ್ತಿದ್ದೇವೆ. ಯಾರು ಟಿವಿಯಲ್ಲಿ ಐಪಿಎಲ್‌ ಅನ್ನು ನೋಡುತ್ತಾರೆ, ಅಥವಾ ಯಾರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯಗಳನ್ನ ವೀಕ್ಷಿಸುತ್ತಾರೋ ಅವರಿಗೆ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಸೀಸನ್ ಆಯೋಜಿಸಲು ಮುಂದಾಗಲಿದ್ದೇವೆ'' ಎಂದು ಧುಮಾಲ್‌ ಪಿಟಿಐಗೆ ತಿಳಿಸಿದ್ದಾರೆ.

''ಐಪಿಎಲ್ ವೇಳಾಪಟ್ಟಿಯಲ್ಲಿ ಉತ್ತಮವಾಗಿ ಮೊದಲೇ ಸಿದ್ಧಪಡಿಸಿದ್ದಲ್ಲಿ, ವಿಶ್ವದಾದ್ಯಂತ ಅಭಿಮಾನಿಗಳು ಅದಕ್ಕೆ ತಕ್ಕಂತೆ ತಮ್ಮ ಪ್ರಯಾಣ ಬೆಳೆಸಲು ಮತ್ತು ಯೋಜಿಸಲು ಸರಿಯಾಗುತ್ತದೆ. ಇದರಿಂದ ಅಭಿಮಾನಿಗಳಿಗೆ ಕೊಟ್ಟ ಹಣಕ್ಕೆ ಮೌಲ್ಯ ಹಿಂದಿರುಗುವಂತಿರಬೇಕು'' ಎಂದು ಐಪಿಎಲ್ ಅಧ್ಯಕ್ಷ ಅಭಿಪ್ರಾಯ ಪಟ್ಟಿದ್ದಾರೆ.

ಆದ್ರೆ ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ಪಂದ್ಯಗಳನ್ನ ಹೆಚ್ಚಿಸುವ ಕುರಿತಾಗಿ ನೆಟ್ಟಿಗರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಪಂದ್ಯಗಳ ಹೆಚ್ಚಳದಿಂದ ಅಂತರಾಷ್ಟ್ರೀಯ ಕ್ರಿಕೆಟ್ ಹಾಳಾಗುತ್ತಿದೆ. ಐಪಿಎಲ್‌ನಿಂದಾಗಿ ಆಟಗಾರರು ಇಂಜ್ಯುರಿಗೆ ತುತ್ತಾಗುತ್ತಿದ್ದಾರೆ. ಮೂರು ತಿಂಗಳ ಕಾಲ ಫ್ರಾಂಚೈಸಿ ಕ್ರಿಕೆಟ್ ಅನ್ನು ಯಾರು ನೋಡುತ್ತಾರೆ. ನೀವು ಎಷ್ಟೇ ಕ್ರಿಕೆಟ್ ಪಂದ್ಯಗಳನ್ನ ಆಡಿಸಿದ್ರೂ ಫುಟ್ಬಾಲ್ ರೀತಿಯಲ್ಲಿ ಸೆಳೆಯಲು ಸಾಧ್ಯವಿಲ್ಲ ಏಕೆಂದರೆ ಐಪಿಎಲ್‌ ಭಾರತಕ್ಕೆ ಸೀಮಿತ ಎಂದು ಟೀಕಿಸಿದ್ದಾರೆ.

Story first published: Tuesday, November 8, 2022, 22:57 [IST]
Other articles published on Nov 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+