IPL Final: 2ನೇ ಬಾರಿ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ 156 ರನ್ ಗುರಿ ನೀಡಿದ ಗುಜರಾತ್
ಅಹಮದಾಬಾದ್: ಭರವಸೆಯ ವೇಗದ ಬೌಲರ್‌ಗಳ ಕರಾರುವಾಕ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 155 ರನ್‌ಗಳಿಗೆ ಗುಜರಾತ್ ಟೈಟಾನ್ಸ್ ತಂಡವನ್ನು 19ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ನಲ್ಲಿ ಕಟ್ಟಿಹಾಕಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಮೊದಲ ಓವರ್‌ನಲ್ಲಿ 13 ರನ್ ಬಾರಿಸಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕರು ಆರ್‌ಸಿಬಿ ಬೌಲರ್‌ಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ರೂಪಿಸಿಕೊಂಡರು. ಆದರೆ ಎರಡನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಬಿಗುವಿನ ದಾಳಿ ನಡೆಸಿ ರನ್‌ಗಳಿಗೆ ಕಡಿವಾಣ ಹಾಕಿದರು. ಪರಿಣಾಮ ಮೂರನೇ ಓವರ್‌ನಲ್ಲಿ ಬಿಗ್ ಹಿಟ್ ಬಾರಿಸುವ ಮೂಲಕ ರನ್‌ಗಳನ್ನು ಕಲೆ ಹಾಕುವತ್ತ ಗುಜರಾತ್ ಟೈಟಾನ್ಸ್ ತಂಡ ಚಿತ್ತ ನೆಟ್ಟಿತು.

ಆದರೆ ಶುಭಮನ್ ಗಿಲ್ ಅವರ ಆಟಕ್ಕೆ ಜೋಶ್ ಹ್ಯಾಜಲ್‌ವುಡ್ ಖೆಡ್ಡಾ ತೋಡಿದರು. ಬ್ಯಾಕ್ ಆಫ್ ಲೆಂತ್ ಡಿಲೆವರಿಯನ್ನು ತಪ್ಪಾಗಿ ಗ್ರಹಿಸಿದ ಗಿಲ್, ಮಿಡ್ ಆಫ್‌ನಲ್ಲಿ ರಜತ್ ಪಾಟಿದಾರ್ ಅವರಿಗೆ ಕ್ಯಾಚ್ ನೀಡಿದರು. ಇನ್ನು ನಂತರದ ಓವರ್‌ನಲ್ಲಿ ಸಾಯಿ ಸುದರ್ಶನ್ ಅವರಿಗೆ ಭುವನೇಶ್ವರ್ ಕುಮಾರ್ ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾದರು. ಶಾರ್ಟ್ ಬೌಲ್‌ನ್ನು ದಂಡಿಸುವಲ್ಲಿ ವಿಫಲರಾದ ಸಾಯಿ ಸುದರ್ಶನ್, ವಿಕೆಟ್ ಕೀಪರ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ಜವಾಬ್ದಾರಿ ಮರೆತ ಬ್ಯಾಟರ್ಸ್
ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ಗಳ ತಂತ್ರವನ್ನು ಅರಿತು ಕೊಳ್ಳುವಲ್ಲಿ ವಿಫಲರಾದ ಬ್ಯಾಟರ್‌ಗಳು ರನ್ ಬರವನ್ನು ಅನುಭವಿಸಿದರು. ಅಲ್ಲದೆ ಯಾವುದೇ ಜೊತೆಯಾಟಗಳು ತಂಡಕ್ಕೆ ಆಧಾರವಾಗಲಿಲ್ಲ. ಮಧ್ಯದ ಓವರ್‌ಗಳಲ್ಲೂ ಆರ್‌ಸಿಬಿ ತಂಡದ ಅನುಭವಿ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್‌ಗಳಿಗೆ ನೆಲಕಚ್ಚಿ ನಿಂತು ಬ್ಯಾಟ್ ಮಾಡಲು ಬಿಡಲಿಲ್ಲ.
ವಾಷಿಂಗ್ಟನ್ ಸುಂದರ್ ಅರ್ಧಶತಕ
ಗುಜರಾತ್ ಟೈಟಾನ್ಸ್ ತಂಡದ ಪರ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡದೇ ಇದ್ದಾಗ ವಾಷಿಂಗ್ಟನ್ ಸುಂದರ್ ಮಾತ್ರ ತಂಡಕ್ಕೆ ಆಧಾರವಾದರು. ಇವರು 37 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ ಅಜೇಯ 50 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಸೇರಿಸಿತು.
ಆರ್‌ಸಿಬಿ ತಂಡದ ಪರ ವೇಗದ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿ ಅಬ್ಬರಿಸಿದರು. ಯುವ ವೇಗದ ಬೌಲರ್ ರಸಿಕ್ ಸಲಾಂ ದಾರ್ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications