Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

IPL : Here is the List of players with most runs in IPL by boundaries

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳನ್ನು ನಡೆಸುವ ಚಿಂತನೆಯಲ್ಲಿದೆ.

ಐಪಿಎಲ್ ಮುಂದೂಡಲ್ಪಟ್ಟ ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ನಿರ್ಮಾಣವಾಗಿರುವ ಹಲವಾರು ದಾಖಲೆಗಳ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲಿ ಬೌಂಡರಿಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ದಾಖಲೆಯೂ ಕೂಡ ಒಂದು. ಬೌಂಡರಿಗಳಿಂದ ಅತಿಹೆಚ್ಚು ರನ್ ಗಳಿಸಿದವರು ಯಾರಿರಬಹುದು ಎಂದು ಯೋಚಿಸಿದಾಗ ಬಹುತೇಕ ಕ್ರೀಡಾಭಿಮಾನಿಗಳ ತಲೆಯಲ್ಲಿ ಮೊದಲುಬರುವ ಉತ್ತರ ಎಬಿ ಡಿವಿಲಿಯರ್ಸ್ ಹಾಗೂ ನಂತರ ಬೇರೆ ಆಟಗಾರರ ಹೆಸರು. ಆದರೆ ಸತ್ಯಾಂಶವೇನೆಂದರೆ ಬೌಂಡರಿಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಏಳನೇ ಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.

ಬೌಂಡರಿಗಳಿಂದ (ಕೇವಲ ಫೋರ್ಸ್ ಮತ್ತು ಸಿಕ್ಸರ್) ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ : ಕ್ರಿಸ್ ಗೇಲ್ 3754, ವಿರಾಟ್ ಕೊಹ್ಲಿ 3326, ಡೇವಿಡ್ ವಾರ್ನರ್ 3306, ರೋಹಿತ್ ಶರ್ಮಾ 3248, ಶಿಖರ್ ಧವನ್ 3232, ಸುರೇಶ್ ರೈನಾ 3220 ಹಾಗೂ ಎಬಿ ಡಿವಿಲಿಯರ್ಸ್ 3094 ರನ್.

Story first published: Tuesday, May 11, 2021, 9:34 [IST]
Other articles published on May 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+