ಐಪಿಎಲ್: ಅರಬ್ ನಾಡಿನಲ್ಲಿ ನಡೆದ ಐಪಿಎಲ್‌ನಲ್ಲಿ ರನ್ ಮಳೆ ಹರಿಸಿದ 4 ಆಟಗಾರರು

ಬೆಂಗಳೂರು, ಆಗಸ್ಟ್ 22: ಚುಟುಕು ಕ್ರಿಕೆಟ್‌ನ ಅತಿ ದೊಡ್ಡ ಲೀಗ್ ಕ್ರಿಕೆಟ್ ಆಗಿರುವ ಐಪಿಎಲ್‌ಗೆ ಮತ್ತೆ ದಿನಗಣನೆ ಆರಂಭವಾಗಿದೆ. 14ನೇ ಆವೃತ್ತಿಯ ಐಪಿಎಲ್‌ನ ಮೊದಲಾರ್ಧದಲ್ಲಿ ಕೊರೊನಾವೈರಸ್ ಟೂರ್ನಿಗೆ ಆಘಾತ ನೀಡಿದ ಕಾರಣದಿಂದಾಗಿ ಮುಂದೂಡಿಕೆಯಾಗಿತ್ತು. ಹೀಗಾಗಿ ಉಳಿದ ಪಂದ್ಯಗಳನ್ನು ಈಗ ಮತ್ತೆ ಭಾರತದ ನೆಲದಿಂದ ಆಚೆ ಯುಎಇ ಅಂಗಳದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ.

ಕಳೆದ 13 ಆವೃತ್ತಿಗಳಲ್ಲಿ ಯುಎಇನಲ್ಲಿ ಈವರೆಗೆ 2 ಬಾರಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲಾಗಿದೆ. ಆದರೆ ಹೆಚ್ಚಿನ ದಾಂಡಿಗರು ಈ ಅಂಗಳದಲ್ಲಿ ದೊಡ್ಡ ಮೊತ್ತದ ರನ್ ಗಳಿಸಲು ವಿಫಲವಾಗಿದ್ದಾರೆ. 2014ರಲ್ಲಿ ಲೋಕಸಾಭಾ ಚುನಾವಣೆ ಭಾರತದಲ್ಲಿ ನಡೆಯುತ್ತಿದ್ದ ಕಾರಣ ಮೊದಲಾರ್ಧದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುತ್ತು. ಈ ಸಂದರ್ಭದಲ್ಲಿ ಯುಎಇ ನೆಲದ ಪಿಚ್‌ನ ಲಾಭವನ್ನು ಅಂದಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ(ಈಗ ಪಂಜಾಬ್ ಕಿಂಗ್ಸ್) ಪಡೆದುಕೊಳ್ಳಲು ಯಶಸ್ವಿಯಾಗಿತ್ತು. ಅದಾದ ನಂತರ ಎರಡನೇ ಚರಣದ ಪಂದ್ಯಗಳು ಭಾರತದಲ್ಲಿಯೇ ನಡೆದಿತ್ತು.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಅದಾ ಬಳಿಕ 2020ರಲ್ಲಿ ಕೊರೊನಾವೈರಸ್‌ನಿಂದ ಐಪಿಎಲ್ ರದ್ದಾಗುವ ಪರಿಸ್ಥಿತಿಯಲ್ಲಿದ್ದಾಗ ಬಿಸಿಸಿಐ ಮತ್ತೊಮ್ಮೆ ಯುಎಇನಲ್ಲಿಯೇ ಟೂರ್ನಿಯನ್ನು ನಡೆಸಲು ನಿರ್ಧರಿಸಿತ್ತು. ಸಾಕಷ್ಟು ಕಠಿಣ ನಿಯಮಗಳೊಂದಿಗೆ 2020ರ ಆವೃತ್ತಿಯಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಐಪಿಎಲ್‌ಅನ್ನು ಯುಎಇನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.ಇನ್ನು 2021ರ ಆವೃತ್ತಿಯ ಐಪಿಎಲ್‌ಅನ್ನು ಭಾರತದಲ್ಲಯೇ ಆರಂಭಿಸಲಾಯಿತಾದರೂ ಬಳಿಕ ಕೊರೊನಾವೈರಸ್ ಐಪಿಎಲ್‌ಗೆ ಆಘಾತ ನೀಡಿತು. ಹೀಗಾಗಿ ಟೂರ್ನಿಯನ್ನು ಅನಿವಾರ್ಯವಾಗಿ ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಈಗ ಸೆಪ್ಟೆಂಬರ್ ತಿಂಗಳಿನಲ್ಲಿ ಯುಎಇನಲ್ಲಿ ಐಪಿಎಲ್‌ನ 2021ರ ಆವೃತ್ತಿಯ ಉಳಿದ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಯುಎಇ ಅಂಗಳದಲ್ಲಿ ರನ್ ಮಳೆ ಹರಿಸಿದ ನಾಲ್ವರು ಆಟಗಾರರ ಬಗ್ಗೆ ಇಲ್ಲಿದೆ ವಿವರ:

4. ವಿರಾಟ್ ಕೊಹ್ಲಿ

4. ವಿರಾಟ್ ಕೊಹ್ಲಿ

ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳ ಪೈಕಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಒಟ್ಟಾರೆ ಐಪಿಎಲ್‌ನಲ್ಲಿ ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿಯೂ ನಂಬರ್ 1 ಆಟಗಾರನಾಗಿದ್ದಾರೆ. ಇನ್ನು ಈ ಬಾರಿಯ ಆವೃತ್ತಿಯಲ್ಲಿಯೂ ವಿರಾಟ್ ಕೊಹ್ಲಿ ಆರಂಬದಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದು ಎರಡನೇ ಚರಣದ ಪಂದ್ಯದಲ್ಲಿಯೂ ಈ ಪ್ರದರ್ಶನ ಮುಂದುವರಿಸುವ ನಿಶ್ವಾಸದಲ್ಲಿದ್ದಾರೆ. ಆರ್‌ಸಿಬಿ ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿದಿದೆ. ಇಲ್ಲಿ ವಿರಾಟ್ ಕೊಹ್ಲಿ 571 ರನ್‌ಗಳನ್ನು ಆರ್‌ಸಿಬಿ ಪರವಾಗಿ ಹರಿಸಿದ್ದಾರೆ. ಯಾವಾಗಲೂ ಅದ್ಭುತ ಫಾರ್ಮ್ ಪ್ರದರ್ಶಿಸುವ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‌ನಲ್ಲಿ ಅದ್ಭುತ ಆಟವಾಡುವ ಮೂಲಕ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ.

3. ಶಿಖರ್ ಧವನ್

3. ಶಿಖರ್ ಧವನ್

ಯುಎಇನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಭಾರತದ ಅನುಭವಿ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ ಕಳೆದೆರಡು ಐಪಿಎಲ್ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಬಾರಿಯು ಐಪಿಎಲ್‌ನಲ್ಲಿಯೂ ಆಡಿರುವ ಪಂದ್ಯಗಳಲ್ಲಿ ಧವನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಆಡಿದ ಮೊದಲ 8 ಪಂದ್ಯಗಳಲ್ಲಿ ಧವನ್ ಈಗಾಗಲೇ 380 ರನ್‌ಗಳಿಸಿದ್ದಾರೆ ಧವನ್.

ಶಿಖರ್ ಧವನ್ ನೀಡಿರುವ ಈ ಪ್ರದರ್ಶನದಿಂದಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಫೈನಲ್‌ಗೆ ಪ್ರವೇಶಿಸುವಲ್ಲಿಯೂ ಶಿಖರ್ ಧವನ್ ಪ್ರದರ್ಶನ ಪ್ರಮುಖವಾಗಿತ್ತು. ಯಾವುದೇ ಒತ್ತಡಗಳಿಲ್ಲದೆ ಧವನ್ ಸರಾಗವಾಗಿ ಬ್ಯಾಟ್ ಬೀಸುತ್ತಿದ್ದು ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಧವನ್ ಈವರೆಗೆ ಒಟ್ಟು 703 ರನ್‌ಗಳಿಸಿದ್ದಾರೆ.

2. ಡೇವಿಡ್ ವಾರ್ನರ್

2. ಡೇವಿಡ್ ವಾರ್ನರ್

ಯುಎಇ ಮೈದಾನದಲ್ಲಿ ನಡೆದ ಈವರೆಗಿನ ಐಪಿಎಲ್ ಪಂದ್ಯಗಳ ಪೈಕಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಮಿಂಚಿದ್ದ ಡೇವಿಡ್ ವಾರ್ನರ್ ಈ ಬಾರಿಯ ಆವೃತ್ತಿ ಆರಂಭಿಕ ಪಂದ್ಯಗಳಲ್ಲಿ ಅನುಭವಿಸಿದ ವೈಫಲ್ಯದ ಕಾರಣದಿಂದಾಗಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಕೇನ್ ವಿಲಿಯಮ್ಸನ್ ಈಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿದ್ದಾರೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್ ಭವಿಷ್ಯ ಈಗ ಅಯೋಮಯವಾಗಿದೆ.

ಸ್ಪೋಟಕ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಡೇವಿಡ್ ವಾರ್ನರ್ ಯಾವುದೇ ತಂಡದ ಪರವಾಗಿ ಆಡಿದರೂ ಮ್ಯಾಚ್ ವಿನ್ನರ್ ಎನಿಸಬಲ್ಲಂತಾ ಆಟಗಾರ. 2016ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು ವಾರ್ನರ್. ಹಾಗಿದ್ದರೂ ಈ ಬಾರಿಯ ಆವೃತ್ತಿಯ ಆರಂಭದಲ್ಲಿ ವಾರ್ನರ್ ಸ್ವಲ್ಪ ಕಳೆಗಿಂದಿದ್ದ ಕಾರಣದಿಂದಾಗಿ ಅವರನ್ನು ನಾಯಕತ್ವದಿಂದಲೇ ಕಿತ್ತುಹಾಕಿ ಕೇನ್ ವಿಲಿಯಮ್ಸನ್‌ಗೆ ನಾಯಕನ ಪಟ್ಟ ನೀಡಲಾಗಿದೆ. ಆಡುವ ಬಳಗದಿಂದಗಳು ವಾರ್ನರ್ ಹೊರಬಿದ್ದಿದ್ದರು. ಯುಎಇನಲ್ಲಿ ನಡೆದಿದ್ದ ಕಳೆದ ಬಾರಿಯ ಐಪಿಎಲ್‌ನಲ್ಲಿಯೂ ವಾರ್ನರ್ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈವರೆಗೆ ಯುಎಇನಲ್ಲಿ ಆಡಿದ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ 711 ರನ್‌ಗಳಿಸಿದ್ದಾರೆ.

1. ಕೆಎಲ್ ರಾಹುಲ್

1. ಕೆಎಲ್ ರಾಹುಲ್

ಯುಎಇನಲ್ಲಿ ಆಡಿರುವ ಐಪಿಎಲ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನವಲ್ಲಿರುವ ಕ್ರಿಕೆಟಿಗ ಕೆಎಲ್ ರಾಹುಲ್. ಪಂಜಾಬ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಫ್ರಾಂಚೈಸಿ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2020ರ ಯುಎಇನಲ್ಲಿ ನಡೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಅತಿ ಹೆಚ್ಚು ರನ್‌ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯ ಮೊದಲಾರ್ಧದ ಪಂದ್ಯಗಳಲ್ಲಿಯೂ ರಾಹುಲ್ ರನ್‌ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಯುಎಇನಲ್ಲಿ ನಡೆದ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಈವರೆಗೆ 788 ರನ್‌ಗಳನ್ನು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಈ ಬಾರಿಯ ಆವೃತ್ತಿಯ ಅಂತ್ಯದ ವೇಳೆಯೂ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದ್ದರೂ ಅದು ಅಚ್ಚರಿಯಾಗಲಾರದು. ರಾಹುಲ್ ನೀಡುತ್ತಾ ಬಂದಿರುವ ಪ್ರದರ್ಶನ ಇದಕ್ಕೆ ಪೂರಕವಾಗಿದೆ. ಐಪಿಎಲ್‌ನಲ್ಲಿ ನೀಡುತ್ತಿರುವ ಈ ಸ್ಥೊರ ಪ್ರದರ್ಶನವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಮುಂದುವರಿಸಲು ರಾಹುಲ್ ಯಶಸ್ವಿಯಾಗಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಕಳೆದ ಕೆಲ ವರ್ಷಗಳಿಂದ ರಾಹುಲ್ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 22, 2021, 11:38 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X