ಮುಂಬೈ ಇಂಡಿಯನ್ಸ್ ವಿರುದ್ಧ ವಿಶಿಷ್ಠ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಶುರುವಾಗಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 19) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 30ನೇ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಋತುರಾಜ್ ಮೊದಲನೇ ಸ್ಥಾನಕ್ಕೇರಿದ್ದಾರೆ. ಆರಂಭಿಕರಾಗಿ ಬ್ಯಾಟಿಂಗ್‌ಗೆ ಬಂದಿದ್ದ ಋತುರಾಜ್ ಗಾಯಕ್ವಾಡ್ 58 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಇದರಲ್ಲಿ 9 ಫೋರ್ಸ್, 4 ಸಿಕ್ಸರ್ ಸೇರಿತ್ತು.
24ರ ಹರೆಯದ ಗಾಯಕ್ವಾಡ್ 2 ಅಂತಾರಾಷ್ಟ್ರೀಯ ಟಿ20ಐ ಪಂದ್ಯಗಳಲ್ಲಿ 35 ರನ್, 14 ಐಪಿಎಲ್ ಪಂದ್ಯಗಳಲ್ಲಿ 488 ರನ್ ಗಳಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸಿಎಸ್‌ಕೆ ಆರಂಭಿಕ ಇನ್ನಿಂಗ್ಸ್‌ನಲ್ಲಿ 20 ಓವರ್‌ಗೆ 6 ವಿಕೆಟ್ ಕಳೆದು 156 ರನ್ ಗಳಿಸಿತ್ತು. ಸಿಎಸ್‌ಕೆ ಪರ ಋತುರಾಜ್ ಬಿಟ್ಟರೆ ರವೀಂದ್ರ ಜಡೇಜಾ 26, ಡ್ವೇನ್ ಬ್ರಾವೋ 23 ರನ್ ಸೇರಿಸಿದ್ದರು.
ಮುಂಬೈ ವಿರುದ್ಧ ಅತ್ಯಧಿಕ ರನ್ ಗಳಿಸಿದ ಚೆನ್ನೈ ಆಟಗಾರರ ಪಟ್ಟಿ
# 88* ಋತುರಾಜ್ ಗಾಯಕ್ವಾಡ್
# 86* ಮೈಕಲ್ ಹಸ್ಸಿ
# 83* ಸುರೇಶ್ ರೈನಾ
# 81 ಮ್ಯಾಥ್ಯೂ ಹೇಡನ್
# 80 ಶೇನ್ ವಾಟ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications