For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌: ಸನ್‌ರೈಸರ್ಸ್‌ ವಿರುದ್ಧ ಸೂಪರ್‌ ಕಿಂಗ್ಸ್‌ಗೆ ಜಯ

 Chennai Super Kings VS Sunrisers Hyderabad

ಚೆನ್ನೈ, ಏಪ್ರಿಲ್‌ 23: ಶೇನ್‌ ವ್ಯಾಟ್ಸನ್‌ (96) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ 2019ರ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

176 ರನ್‌ಗಳ ಕಠಿಣ ಸವಾಲನ್ನು ಬೆನ್ನತ್ತಿದ ಸೂಪರ್‌ ಕಿಂಗ್ಸ್‌ 19.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 176 ರನ್‌ಗಳನ್ನು ಗಳಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಸತತ ಎರಡು ಸೋಲಿನಿಂದ ಹೊರಬಂದ ಸಿಎಸ್‌ಕೆ ಅಂಕ ಪಟ್ಟಿಯಲ್ಲಿ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಪ್ಲೇಆಫ್ಸ್‌ ಅರ್ಹತೆಯನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ.

ಇದಕ್ಕೂ ಮುನ್ನ ಡೇವಿಡ್‌ ವಾರ್ನರ್‌ (57) ಮತ್ತು ಮನೀಶ್‌ ಪಾಂಡೆ (83*) ಅವರ ಸ್ಫೋಟಕ ಅರ್ಧಶತಕಗಳ ಬಲದಿಂದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 175 ರನ್‌ಗಳನ್ನು ಗಳಿಸಿತು.

ಹೈದರಾಬಾದ್‌ ಪರ ಅಬ್ಬರಿಸಿದ ಡೇವಿಡ್‌ ವಾರ್ನರ್‌, 45 ಎಸೆತಗಳಲ್ಲಿ 3 ಫೋರ್‌, 2 ಸಿಕ್ಸರ್‌ ಸಹಿತ 57 ರನ್ ಗಳನ್ನು ಗಳಿಸಿದರೆ, ಮನೀಶ್‌ ಪಾಂಡೆ 49 ಎಸೆತಗಳಲ್ಲಿ 7 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 83 ರನ್‌ಗಳನ್ನು ಚಚ್ಚಿ ಔಟಾಗದೆ ಉಳಿದರು.

ಸತತ ಎರಡು ಸೋಲಿನಿಂದ ಕಂಗಾಲಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಟಾಸ್‌ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತ್ತು.

ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಭುವನೇಶ್ವರ್‌ ಕುಮಾರ್‌ಗೆ ಸನ್‌ರೈಸರ್ಸ್ ತಂಡದ ನಾಯಕತ್ವ ಲಭ್ಯವಾಯಿತು.

ಸಿಎಸ್‌ಕೆ ಸಂಭಾವ್ಯ 11
ಶೇನ್‌ ವ್ಯಾಟ್ಸನ್‌, ಫಾಫ್‌ ಡು ಪ್ಲೆಸಿಸ್‌, ಸುರೇಶ್‌ ರೈನಾ, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ಶಾರ್ದುಲ್‌ಠಾಕೂರ್‌, ದೀಪಕ್‌ ಚಹರ್‌, ಇಮ್ರಾನ್‌ ತಾಹಿರ್‌.

ಎಸ್‌ಆರ್‌ಎಚ್‌ ಸಂಭಾವ್ಯ 11
ಡೇವಿಡ್‌ ವಾರ್ನರ್‌, ಜಾನಿ ಬೈರ್‌ ಸ್ಟೋವ್‌, ಮೊಹಮ್ಮದ್‌ ನಬಿ/ಶಾಕಿಬ್‌ ಅಲ್‌ ಹಸನ್‌, ವಿಜಯ್‌ ಶಂಕರ್‌, ಯೂಸುಫ್‌ ಪಠಾಣ್‌, ದೀಪಕ್‌ ಹೂಡಾ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌,ಶಹಬಾಜ್‌ ನದೀಮ್‌, ಖಲೀಲ್‌ ಅಹ್ಮದ್‌, ಸಂದೀಪ್‌ ಶರ್ಮಾ.

Story first published: Tuesday, April 23, 2019, 23:40 [IST]
Other articles published on Apr 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+