For Quick Alerts
ALLOW NOTIFICATIONS  
For Daily Alerts
 

ಈ 4 ಆಟಗಾರರಿಗೆ ಮುಂದಿನ ಆವೃತ್ತಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಗೇಟ್‌ಪಾಸ್!?

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಅಂತಿಮ ಹಂತದಲ್ಲಿದೆ. ಈ ಬಾರಿಯ ಆವೃತ್ತಿಯಲ್ಲಿ ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿಯುದ್ದು ಭಾನುವಾರ ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದು ಕುತೂಹಲ ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ಪ್ರವೇಸಿದ್ದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧದ ಪಂದ್ಯದಲ್ಲಿ ಗೆದ್ದ ತಂಡ ಸಿಎಸ್‌ಕೆ ಜೊತೆಗೆ ಕಾದಾಟಕ್ಕೆ ಇಳಿಯಲಿದೆ.

ಈ ಬಾರಿಯ ಆವೃತ್ತಿಯಲ್ಲಿ ಪ್ಲೇಆಫ್ ಹಂತಕ್ಕೇರುಸದ ಮತ್ತೊಂದು ತಂಡವೆಂದರೆ ಅದು ಲಕ್ನೋ ಸೂಪರ್ ಜೈಂಟ್ಸ್. ಲೀಗ್ ಹಂತದ ಮೊದಲ ಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಎಲ್‌ಎಸ್‌ಜಿ ತಂಡ ಕೊನೆಯ ಹಂತದಲ್ಲಿ ಗೆಲುವಿನ ಲಯವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಪ್ಲೇಆಫ್‌ಗೇರುವಲ್ಲಿ ಯಶಸ್ವಿಯಾದ ತಂಡ ಪ್ಲೇಆಫ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಪ್ರದರ್ಶನ ನೀಡಿ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

IPL: Lucknow Super Giants may release these 4 cricketers before IPL 2024 mini Auction

ಹೀಗಾಗಿ ಎಲ್‌ಎಸ್‌ಜಿ ತಂಡ ಮುಂದಿನ ಆವೃತ್ತಿಯ ಬಗ್ಗೆ ಈಗ ಗಮನಹರಿಸಲು ಮುಂದಾಗಿದೆ. ಮುಂದಿನ ಆವೃತ್ತಿಗೂ ಮುನ್ನ ಎಲ್‌ಎಸ್‌ಜಿ ತಂಡ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯಬೇಕಾದರ್ಎ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಲ್ಲೂ ಈ ನಾಳ್ವರು ಆಟಗಾರರು ಎಲ್‌ಎಸ್‌ಜಿ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಆ ನಾಲ್ವರು ಆಟಗಾರರು ಯಾರು? ಮುಂದೆ ಓದಿ..

ಆಲ್‌ರೌಂಡರ್ ಆಟಗಾರ ದೀಪಕ್ ಹೂಡಾ

ಪ್ರತಿಭಾನ್ವಿತ ಆಟಗಾರ ಈಪಕ್ ಹೂಡಾ ಪಾಲಿಗೆ ಈ ಬಾರಿಯ ಐಪಿಎಲ್ ಆವೃತ್ತಿ ಅತ್ಯಂತ ಕಳಪೆ ಆವೃತ್ತಿ. ಟೂರ್ನಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವಕಾಶ ದೊರೆತರೂ ಅವರ ಬ್ಯಾಟಿಂಗ್‌ನ ಸರಾಸರಿ 10ಕ್ಕಿಂತ ಕಡಿಮೆಯಿದೆ. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ದೀಪಕ್ ಹೂಡಾ ಮೂರು ರನೌಟ್‌ನಲ್ಲಿ ಭಾಗಿಯಾಗಿದ್ದರು ಎಂಬುದು ಗಮನಾರ್ಹ. ಈ ಎಲ್ಲಾ ಕಾರಣಗಳಿಂದಾಗಿ ಎಲ್‌ಎಸ್‌ಜಿ ತಂಡ ದೀಪಕ್ ಹೂಡಾ ಅವರನ್ನು ತಂಡದಲ್ಲಿ ಉಳಿದಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.

ಆವೇಶ್‌ ಖಾನ್‌ಗೂ ಕೊಕ್ ಸಾಧ್ಯತೆ

2022ರ ಐಪಿಎಲ್ ಆವೃತ್ತಿಯಲ್ಲಿ 10 ಕೋಟಿ ನೀಡಿ ಆವೇಶ್ ಖಾನ್ ಅವರನ್ನು ಸೇರ್ಪಡೆಗೊಳಿಸಿದ್ದಾಗ ಅಭಿಮಾನಿಗಳು ಅಚ್ಚರಿಯಾಗಿದ್ದರು. ಆವೇಶ್ ಖಾನ್ ವಿಕೆಟ್ ಟೇಕಿಂಗ್ ಬೌಲರ್ ಎಂಬುದು ನಿಜ. ಆದರೆ ಆತ ಸಾಕಷ್ಟು ರನ್‌ಗಳನ್ನು ಕೂಡ ಬಿಟ್ಟುಕೊಡುತ್ತಿರುವುದು ತಂಡಕ್ಕೆ ಭಾರೀ ಹಿನ್ನಡೆಯಾಗುತ್ತಿದೆ. ಎಲ್‌ಎಸ್‌ಜಿ ತಂಡದಲ್ಲಿ ಕೆಲ ಪ್ರತಿಭಾನ್ವಿತ ಭಾರತೀಯ ವೇಗದ ಬೌಲರ್‌ಗಳು ಇರುವ ಕಾರಣ ಆವೇಶ್ ಖಾನ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ.

ಸ್ಟಾಋ್ ಆಟಗಾರ ಕ್ವಿಂಟನ್ ಡಿಕಾಕ್

ಲಕ್ನೋ ಸೂಪರ್ ಜೈಂಟ್ಸ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ ಈ ಬಾರಿಯ ಐಪಿಎಲ್‌ನಲ್ಲಿ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದಾರೆ. ಟೂರ್ನಿಯಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಡಿಕಾಕ್ ಆಡುವ ಅವಕಾಶ ಗಳಿಸಿಕೊಂಡಿದ್ದರು. ಟೂರ್ನಿಯ ಆರಂಭದಲ್ಲಿ ಡಿಕಾಕ್ ರಾಷ್ಟ್ರೀಯ ತಂಡದ ಜವಾಬ್ಧಾರಿಯ ಕಾರಣದಿಂದಾಗಿ ತಡವಾಗಿ ಎಲ್‌ಎಸ್‌ಜಿ ತಂಡವನ್ನು ಸೇರಿಕೊಂಡಿದ್ದರು. ಆದರೆ ಈ ಅವಧಿಯಲ್ಲಿ ಕೇಲ್ ಮೇಯರ್ಸ್ ಅಮೋಘ ಪ್ರದರ್ಶನ ನೀಡುವ ಮೂಲಕ ಆರಂಭಿಕ ಸ್ಥಾನವನ್ನು ಭದ್ರಗೊಳಿಸಿದ್ದರು. ಹೀಗಾಗಿ ಡಿಕಾಕ್‌ಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ವಿಶ್ವ ದರ್ಜೆಯ ಆಟಗಾರನಾಗಿರುವ ಕಾರಣ ಡಿಕಾಕ್ ಮುಂದಿನ ಆವೃತ್ತಿಗೂ ಮುನ್ನ ನಡೆಯುವ ಹರಾಜಿನಲ್ಲಿ ಭಾಗುಯಾಗುವುದು ತಂಡಕ್ಕೂ ಹಾಗೂ ಆಟಗಾರನಿಗೂ ಉತ್ತಮ ಆಯ್ಕೆಯಾಗಲಿದೆ.

ವೇಗಿ ಜಯ್‌ದೇವ್ ಉನಾದ್ಕಟ್

ಎಡಗೈ ವೇಗು ಜಯ್‌ದೇವ್ ಉನಾದ್ಕಟ್ ಈ ಬಾರಿಯ ಐಪಿಎಲ್‌ನಲ್ಲಿ ಮೂರು ಪಂದ್ಯಗಳಲ್ಲಿ ಎಲ್‌ಎಸ್‌ಜಿ ಪರವಾಗಿ ಆಡಿದ್ದರು. ಆದರೆ ಅವರು ಯಾವುದೇ ವಿಕೆಟ್ ಪಡೆಯಲು ಸಫಲವಾಗಿರಲಿಲ್ಲ. ಆದರೆ ಉನಾದ್ಕಟ್ ಸಾಕಷ್ಟು ರನ್‌ಬಿಟ್ಟುಕೊಟ್ಟಿದ್ದು 11.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ. ಹೀಗಾಗಿ ಜಯ್‌ದೇವ್ ಉನಾದ್ಕಟ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ಎಲ್‌ಎಸ್‌ಜಿ ಮ್ಯಾನೇಜ್‌ಮೆಂಟ್ ಮಾಡಿದರೆ ಅದು ಅಚ್ಚರಿಯ ನಿರ್ಧಾರವಲ್ಲ.

Story first published: Friday, May 26, 2023, 16:51 [IST]
Other articles published on May 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+