
ಐಪಿಎಲ್ 2022ರ ಸೀಸನ್‌ನಲ್ಲಿ 74 ಪಂದ್ಯಗಳನ್ನ ಆಡಿಸಲಾಯ್ತು!
ಐಪಿಎಲ್ 2021ರ ಸೀಸನ್‌ಗೆ ಹೋಲಿಸಿದ್ರೆ ಕಳೆದ ಸೀನಸ್‌ನಲ್ಲಿ ಪಂದ್ಯಗಳ ಸಂಖ್ಯೆಯನ್ನು 60ರಿಂದ 74 ಪಂದ್ಯಗಳಿಗೆ ಹೆಚ್ಚಿಸಲಾಗಿತ್ತು. 10 ತಂಡಗಳು ಅನೇಕ ವರ್ಷದ ಬಳಿಕ ಐಪಿಎಲ್‌ನಲ್ಲಿ ಕಾಣಿಸಿಕೊಂಡವು.
ಇದರ ಜೊತೆಗೆ 10 ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದನ್ನ ಕಾಣಬಹುದು. ಎಲ್ಲಾ ತಂಡಗಳು 14 ಪಂದ್ಯಗಳನ್ನಾಡಿದ್ದು, ಅದೇ ಸಾಲಿನ ತಂಡದ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಿದ್ರೆ, ಅವರು ಇತರ ಗುಂಪಿನ ಉಳಿದ ತಂಡಗಳ ವಿರುದ್ಧ ಒಮ್ಮೆ ಆಡಿದ್ದಾರೆ.
ಟಿ20 ಸರಣಿ: ಮೊದಲ ಪಂದ್ಯದಲ್ಲಿ ಸೋಲು; ವಿರಾಟ್ ಕೊಹ್ಲಿ ಸಾಲಿಗೆ ಸೇರಿದ ರಿಷಭ್ ಪಂತ್

2023 ಸೀಸನ್‌ನಿಂದ ಪಂದ್ಯಗಳ ಸಂಖ್ಯೆ ಹೆಚ್ಚಿಸಲಾಗುವುದು
ವರದಿ ಪ್ರಕಾರ 2023 ರಿಂದ 2027ರ ಸೀಸನ್‌ವರೆಗೆ ಪಂದ್ಯಗಳ ಹೆಚ್ಚಿಸಲಾಗುತ್ತಿದ್ದು, ಮುಂದಿನ ಎರಡು ಸೀಸನ್‌ಗಳು 74 ಪಂದ್ಯಗಳನ್ನ ಕಾಣಬಹುದು, ನಂತರ ಎರಡು ಸೀಸನ್‌ಗಳಲ್ಲಿ 84 ಪಂದ್ಯಗಳು, ಐದು ಆರನೇ ಸೀಸನ್‌ನಲ್ಲಿ(2026, 2027) 94 ಪಂದ್ಯಗಳನ್ನ ಆಡಿಸಲು ಬಿಸಿಸಿಐ ಯೋಜನೆ ನಡೆಸುತ್ತಿದೆ.
84 ಪಂದ್ಯಗಳ ಆಯ್ಕೆಯು ತೆರೆದಿದ್ದರೂ ಸಹ 410 ಪಂದ್ಯಗಳ ಲೆಕ್ಕಾಚಾರದೊಂದಿಗೆ ಹೋಗಲು ಬಿಡ್ಡರ್ಸ್‌ಗೆ ಸೂಚಿಸಲಾಗಿದೆ ಎಂದು ನಂಬಲಾಗಿದೆ.

ಪಂದ್ಯ ಹೆಚ್ಚಳದ ಕುರಿತು ಬಿಸಿಸಿಐ ದೃಢಪಡಿಸಬೇಕಿದೆ
ಹೌದು ಐಪಿಎಲ್ ಮುಂಬರುವ ಸೀಸನ್‌ಗಳಲ್ಲಿ ಪಂದ್ಯಗಳ ಸಂಖ್ಯೆಯನ್ನ ಹೆಚ್ಚಿಸಲು ಬಿಸಿಸಿಐ ದೃಢಪಡಿಸಬೇಕಿದೆ . ಒಂದು ಸೀಸನ್‌ನಲ್ಲಿ 84 ಮತ್ತು 94 ಪಂದ್ಯಗಳನ್ನು ಮಾಡಲು ಆಡಳಿತ ಮಂಡಳಿಯು ಆಟಗಳ ಸಂಖ್ಯೆಯನ್ನು ಹೇಗೆ ವಿಭಜಿಸುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.
ಅಲ್ಲದೆ, ವಿಶೇಷ ಪ್ಯಾಕೇಜ್‌ನಲ್ಲಿನ ಪಂದ್ಯಗಳ ಸಂಖ್ಯೆಯು 74 ರಿಂದ ಋತುವಿಗೆ 18 ಹೆಚ್ಚಳ, 84-ಪಂದ್ಯಗಳ ಸೀಸನ್‌ಗೆ 20 ಪಂದ್ಯಗಳು ಮತ್ತು 94 ಪಂದ್ಯಗಳ ಸೀಸನ್‌ನಲ್ಲಿ 22 ಪಂದ್ಯ ಹೆಚ್ಚಿಸಲಿದೆ ಎಂದು ವರದಿಯಾಗಿದೆ.

IPL ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಎರಡನೇ ಸ್ಥಾನ ಪಡೆಯುವ ಸಾಧ್ಯತೆ
ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ. 2023-2027ರ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್ ಹಕ್ಕು 33 ಕೋಟಿ ರೂ. ಆಗಲಿದೆ.
ಸಾಧಾರಣವಾಗಿ ಟಿವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.


Click it and Unblock the Notifications












