Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂಪಾಯಿಗೆ ಹರಾಜು

IPL TV and Digital rights auction

ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್‌ನಿಂದ 2027ರ ಸೀಸನ್‌ವರೆಗಿನ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂಪಾಯಿಗೆ ಹರಾಜಾಗಿದೆ ಎಂದು ಪ್ರಾಥಮಿಕ ವರದಿ ಬಹಿರಂಗಗೊಂಡಿದೆ.

2023-2027ರ ಅವಧಿಯಲ್ಲಿ ನಡೆಯಲಿರುವ 410 ಪಂದ್ಯಗಳಿಗೆ ನಡೆದ ಹರಾಜಿನಲ್ಲಿ ಪ್ಯಾಕೇಜ್ A (TV) ಪ್ರಸಾರದ ಹಕ್ಕು 23,575 ಕೋಟಿ ರೂಪಾಯಿಗೆ ಹರಾಜಾಗಿದೆ. ಕಳೆದ ಬಾರಿ ಸ್ಟಾರ್ ಇಂಡಿಯಾ 2017 ರಲ್ಲಿ 16,347 ಕೋಟಿ ರೂ. ನೀಡಿತ್ತು. ಆದ್ರೀಗ 7 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದು, ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿ ದಾಖಲಾಗಿದೆ.

ಇನ್ನು ಪ್ಯಾಕೇಜ್ B ಡಿಜಿಟಲ್ ಪ್ರಸಾರದ ಹಕ್ಕು 20,500 ಕೋಟಿ ರೂಪಾಯಿಗೆ ಹರಾಜಾಗಿದ್ದು, ಪ್ರತಿ ಪಂದ್ಯಕ್ಕೆ 50 ಕೋಟಿ ರೂಪಾಯಿ ಬೆಲೆಯನ್ನು ಪಡೆದಂತಾಗಿದೆ. ಆದ್ರೆ ಈ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ಯಾರು ಪಡೆದಿದ್ದಾರೆ ಎಂಬುದು ಬಹಿರಂಗವಾಗಿದೆ.

ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕು ಪಡೆಯಲು ನಡೆದ ಬಿಡ್‌ ಪ್ರಮಾಣವನ್ನು ಒಟ್ಟಾಗಿ ಸೇರಿಸಿದ್ರೆ, ಈ ಹಕ್ಕುಗಳ ಮೌಲ್ಯ 107.5 ಕೋಟಿ ರೂ. ಎಎನ್‌ಐ ಮೂಲಗಳು ವರದಿ ಮಾಡಿದೆ. ಎರಡು ಮಾಧ್ಯಮ ಸಂಸ್ಥೆಗಳು ಒಂದು ಟಿವಿಗೆ ಮತ್ತು ಇನ್ನೊಂದು ಡಿಜಿಟಲ್‌ ಹಕ್ಕು ಪಡೆದಿವೆ.

ಯಾರು ಪ್ಯಾಕೇಜ್ A ಅನ್ನು ಪಡೆದಿದ್ದಾರೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣವಿಲ್ಲ. Viacom 18 ಭಾರತೀಯ ಉಪಖಂಡದ ಡಿಜಿಟಲ್ ಹಕ್ಕುಗಳನ್ನು ಒಳಗೊಂಡಿರುವ ಪ್ಯಾಕೇಜ್ B ಅನ್ನು ತೆಗೆದುಕೊಳ್ಳುತ್ತದೆ. ಉಳಿದ ಅಪ್‌ಡೇಟ್‌ಗಳನ್ನ ಮುಂದೆ ತಿಳಿಸಲಾಗುವುದು ನಿರೀಕ್ಷಿಸಿ..

ಇ-ಹರಾಜನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಣೆ
2023-27 ರಿಂದ ಐದು ವರ್ಷಗಳವರೆಗೆ ಪ್ರತಿ ಕ್ರೀಡಾಋತುವಿನಲ್ಲಿ 74 ಆಟಗಳಿಗೆ ಇ-ಹರಾಜು ನಡೆಸಲಾಗುವ ನಾಲ್ಕು ನಿರ್ದಿಷ್ಟ ಪ್ಯಾಕೇಜ್‌ಗಳಿವೆ. ಅಂತಿಮ ಎರಡು ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಹೆಚ್ಚಿಸುವ ಅವಕಾಶವಿದೆ.

ಪ್ಯಾಕೇಜ್ A: ಭಾರತೀಯ ಉಪ-ಖಂಡದ ವಿಶೇಷ ಟಿವಿ (ಪ್ರಸಾರ) ಹಕ್ಕುಗಳು
ಪ್ಯಾಕೇಜ್ ಬಿ: ಭಾರತೀಯ ಉಪಖಂಡದ ಡಿಜಿಟಲ್ ಹಕ್ಕುಗಳನ್ನು ಒಳಗೊಂಡಿದೆ.
ಪ್ಯಾಕೇಜ್ ಸಿ: ಡಿಜಿಟಲ್ ಸ್ಪೇಸ್‌ಗಾಗಿ ಪ್ರತಿ ಋತುವಿನಲ್ಲಿ 18 ಆಯ್ದ ಆಟಗಳಿಗೆ ಮಾತ್ರ.
ಪ್ಯಾಕೇಜ್ ಡಿ: ಎಲ್ಲಾ ಆಟಗಳು ಸಂಯೋಜಿತ ಟಿವಿ ಮತ್ತು ವಿದೇಶಿ ಮಾರುಕಟ್ಟೆಗಳಿಗೆ ಡಿಜಿಟಲ್ ಹಕ್ಕುಗಳಿಗಾಗಿರುತ್ತವೆ.

ಯಾರೂ ಊಹೆ ಮಾಡಿರಲಿಲ್ಲ ಇವ್ರು win ಆಗ್ತಾರೆ ಅಂತ !! | *Cricket | OneIndia Kannada

ಬಿಡ್‌ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ?
ಕಾರ್ಪೊರೇಟ್ ದೈತ್ಯರು ಈ ಹಕ್ಕುಗಳನ್ನು ಪಡೆಯಲು ಸ್ಪರ್ಧೆಯಲ್ಲಿದ್ದಾರೆ. ಡಿಸ್ನಿಸ್ಟಾರ್, ರಿಲಯನ್ಸ್ ವಯಾಕಾಮ್ 18, ಸೋನಿ ನೆಟ್‌ವರ್ಕ್, ಜೀ ಎಂಟರ್‌ಟೈನ್‌ಮೆಂಟ್‌ನಂತಹ ದೊಡ್ಡ ಕಂಪನಿಗಳು ಬಿಡ್ಡಿಂಗ್ ನಲ್ಲಿ ಭಾಗಿಯಾಗಿವೆ. ಅವುಗಳ ಜೊತೆಗೆ ಟೈಮ್ಸ್ ಇಂಟರ್‌ನೆಟ್ ಮತ್ತು ರಿಲಯನ್ಸ್ ಜಿಯೋ ಕೂಡ ಕಣದಲ್ಲಿವೆ. ಟೈಮ್ಸ್ ಇಂಟರ್ನೆಟ್ ಮತ್ತು ರಿಲಯನ್ಸ್ ಜಿಯೋ ಡಿಜಿಟಲ್ ಹಕ್ಕುಗಳಿಗಾಗಿ ಮಾತ್ರ ಬಿಡ್ ಮಾಡಿದೆ. ಸೂಪರ್ ಸ್ಪೋರ್ಟ್ ಇಂಟರ್‌ನ್ಯಾಷನಲ್ ಟೆರಿಟರಿ ಹಕ್ಕುಗಳಿಗಾಗಿ ಬಿಡ್‌ ಸಲ್ಲಿಸಿದೆ

Story first published: Monday, June 13, 2022, 17:20 [IST]
Other articles published on Jun 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+