
ಕೆ ಗೌತಮ್: 9.25 ಕೋಟಿ ಸಂಬಳ
2021ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹರಾಜಿನಲ್ಲಿ ಸೇರಿಸಿಕೊಂಡ ದುಬಾರು ಆಟಗಾರ ಕೆ ಗೌತಮ್. ಹಾಗಿದ್ದರು ಕೂಡ ಕರ್ನಾಟಕದ ಈ ಆಲ್‌ರೌಂಡರ್‌ಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ದೊರೆಯಲಿಲ್ಲ. ಕಳೆದ ಮಿನಿ ಹರಾಜಿನಲ್ಲಿ ದುಬಾರು ಬೆಲೆಯನ್ನು ಪಡೆಯುವ ಮೂಲಕ ಗೌತಮ್ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ತಂಡಗಳ ಅಗತ್ಯಗಳಿಗೆ ತಕ್ಕಂತ ಆಟಗಾರರು ಹರಾಜಿನಲ್ಲಿ ಇರಲಿಲ್ಲವಾದ ಕಾರಣ ಈ ದುಬಾರಿ ಬೆಲೆಯನ್ನು ಗೌತಮ್ ಪಡೆದಿದ್ದರು. ಆದರೆ ಈ ಬಾರಿ ಹರಾಜಿನಲ್ಲಿ ಹೆಚ್ಚಿನ ಆಯ್ಕೆಗಳು ದೊರೆಯಲಿರುವ ಕಾರಣದಿಂದಾಗಿ ಗೌತಮ್ ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಮೊತ್ತವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಸಿಕ್ಕ ಅವಕಾಶದಲ್ಲಿ ಗೌತಮ್ ವಿಶೇಷವಾದ ಪ್ರದರ್ಶನವನ್ನೇನೂ ನೀಡಿಲ್ಲ. ಇದು ಕೂಡ ಕಡಿಮೆ ಬೇಡಿಕೆ ಕಡಿಮೆಯಾಗಲು ಕಾರಣವಾಗಬಹುದು.

ಕೃನಾಲ್ ಪಾಂಡ್ಯ: 8.8 ಕೋಟಿ ರೂಪಾಯಿ
2022ರ ಮೆಗಾ ಹರಾಜಿನಲ್ಲಿ ಭಾರೀ ಪ್ರಮಾಣದಲ್ಲಿ ಸಂಬಳದಲ್ಲಿ ಕುಸಿತ ಕಾಣಲಿರುವ ಆಟಗಾರರ ಪಟ್ಟಿಯಲ್ಲಿರುವ ಎರಡನೇ ಆಟಗಾರ ಕೃನಾಲ್ ಪಾಂಡ್ಯ. 2018ರ ಹರಾಜಿನಲ್ಲಿ ಆರ್‌ಟಿಎಂ ಬಳಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಮ್ಮೆ ಸೇರ್ಪಡೆಗೊಳಿಸಿತ್ತು. ಆದರೆ ಇತ್ತೀಚಿನ ಆವೃತ್ತಿಯಲ್ಲಿ ಕೃನಾಲ್ ಪಾಂಡ್ಯ ಫಾರ್ಮ್ ಕಳಪೆಯಾಗಿದೆ. ಬೌಲಿಂಗ್‌ನಲ್ಲಿಯೂ ಕಡಿಮೆ ಪರಿಣಾಮಕಾರಿಯಾಗಿದ್ದಲ್ಲದೆ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತದ ಕೊಡುಗೆ ನೀಡಲು ಸಮರ್ಥವಾಗಿಲ್ಲ. ಇದು ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಕೃನಾಲ್ ಪಾಂಡ್ಯ ಕಡಿಮೆ ಮೊತ್ತವನ್ನು ಪಡೆಯಲು ಕಾರಣವಾಗಬಹುದು.

ಸುರೇಶ್ ರೈನಾ: 11 ಕೋಟಿ ರೂಪಾಯಿ
ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿರುವ ಸುರೇಶ್ ರೈನಾ ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಫಾರ್ಮ್ ಕೊರತೆಯನ್ನು ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಸುರೇಶ್ ರೈನಾ ದೇಶೀಯ ಕ್ರಿಕೆಟ್‌ನಲ್ಲಿ ಕೂಡ ಹೆಚ್ಚು ಸಕ್ರಿಯವಾಗಿಲ್ಲದ ಕಾರಣ ಅವರ ಫಾರ್ಮ್ ಬಗ್ಗೆ ಫ್ರಾಂಚೈಸಿಗಳು ಸಹಲವಾಗಿಯೇ ಕಳವಳಪಡುತ್ತವೆ. ಹೀಗಾಗಿ ಸುರೇಶ್ ರೈನಾ ಈ ಬಾರಿಯ ಹರಾಜಿನಲ್ಲಿ ಭಾರಿ ಮೊತ್ತದ ಕುಸಿತ ಕಾಣಲಿದ್ದಾರೆ.

ಇಯಾನ್ ಮಾರ್ಗನ್: 5.25 ಕೋಟಿ ರೂಪಾಯಿ
ಕಳೆದ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ನಂತರ ಈ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಹೀಗಾಗಿ ಅತ್ಯುತ್ತಮ ವೈಟ್ ಬಾಲ್ ಆಟಗಾರ ಎನಿಸಿಕೊಂಡಿರುವ ಇಯಾನ್ ಮಾರ್ಗನ್ ಈ ಬಾರಿಯ ಹರಾಜಿನಲ್ಲಿ ಯಾರಿಗೂ ಬೇಡವಾಗಿ ಉಳಿದುಕೊಂಡರೂ ಅಚ್ಚರಿ ಪಡಬೇಕಿಲ್ಲ. ಒಂದು ವೇಲೆ ಹರಾಜಾದರೂ ಭಾರೀ ಕಡಿಮೆ ಮೊತ್ತದ ಸಂಬಳವನನ್ಉ ಪಡೆಯುವುದು ಖಚಿತ.

ದಿನೇಶ್ ಕಾರ್ತಿಕ್: 7.4 ಕೋಟಿ ರೂಪಾಯಿ
ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಈಗ ಪರಿಣಾಮಕಾರಿ ಆಟಗಾರನಾಗಿ ಗುರುತಿಸಿಕೊಳ್ಳಲು ವಿಫಲವಾಗುತ್ತಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಹೆಚ್ಚಿನ ಬೇಡಿಕೆ ಪಡೆಯುವ ಸಾಧ್ಯತೆ ಕಡಿಮೆಯಿದೆ. ಈ ಕಾರಣದಿಂದಾಗಿಯೇ ದಿನೇಶ್ ಕಾರ್ತಿಕ್ ಈ ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಕಡಿಮೆ ಸಂಬಳವನ್ನು ಪಡೆಯಬಹುದು.

ಪ್ಯಾಟ್ ಕಮ್ಮಿನ್ಸ್: 15.5 ಕೋಟಿ ರೂಪಾಯಿ
2020ರ ಆವೃತ್ತಿಯ ಮಿನಿ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅತ್ಯಂತ ದಿಬಾರಿ ಮೊತ್ತಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. 2021ರ ಆವೃತ್ತಿಗೂ ಕೆಕೆಆರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿರುವ ಕಾರಣದಿಂದಾಗಿ ಪ್ಯಾಟ್ ಕಮ್ಮಿನ್ಸ್ ಕಡಿಮೆ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಮನೀಶ್ ಪಾಂಡೆ: 11 ಕೋಟಿ ರೂಪಾಯಿ
ಈ ಬಾರಿಯ ಮೆಗಾ ಹರಾಜಿನಲ್ಲಿ ಸಂಬಳದಲ್ಲಿ ಭಾರೀ ಕುಸಿತ ಕಾಣಲಿರಿವ ಆಟಗಾರರ ಪಥಕಿ ಮನೀಶ್ ಪಾಂಡೆ ಕೂಡ ಒಬ್ಬರು. 2-18ರ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆದುಕೊಂಡಿದ್ದರು ಮನೀಶ್ ಪಾಂಡೆ. ಆದರೆ ಅದಾದ ಬಳಿಕ ಮನೀಶ್ ಪಾಂಡೆ ಪ್ರದರ್ಶನ ಕುಸಿತ ಕಾಣುತ್ತಾ ಸಾಗಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಮನೀಶ್ ಪಾಂಡೆ ಕಡಿಮೆ ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ. ಅನೇಕ ಯುವ ಆಟಗಾರರು ಲಭ್ಯವಿರುವ ಕಾರಣದಿಂದಾಗಿ ಮನೀಸ್ ಬೇಡಿಕೆ ಕುಸಿಯುವುದರಲ್ಲಿ ಅನುಮಾನವಿಲ್ಲ.


Click it and Unblock the Notifications












