ಬೆಂಗಳೂರು ತಂಡಕ್ಕೆ ಪಾಂಡ್ಯ ರಾಯಲ್ ಎಂಟ್ರಿ
ಟೀಮ್ ಇಂಡಿಯಾದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಕೃನಾಲ್ ಪಾಂಡ್ಯ, ಅವರನ್ನು ಖರೀದಿಸಲು, ಎರಡನೇ ದಿನ ಆರ್‌ಸಿಬಿ ಮನಸ್ಸು ಮಾಡಿತು. ಈ ವೇಳೆ ಸ್ಟಾರ್ ಆಟಗಾರರನ್ನು ಕೊಳ್ಳಲು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ಕಂಡು ಬಂದಿತು. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲ ನೀಡಬಲ್ಲ ಪ್ಲೇಯರ್. ಇವರಿಗೆ ಆರ್‌ಸಿಬಿ ಬರೋಬ್ಬರಿ 5.75 ಕೋಟಿ ರೂಪಾಯಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.
ಕೃನಾಲ್ ಪಾಂಡ್ಯ: ಐಪಿಎಲ್‌ನಲ್ಲಿ ಕೃನಾಲ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೃನಾಲ್ ಪಾಂಡ್ಯ ತಮ್ಮ ಎಡಗೈ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಕೃನಾಲ್ ಪಾಂಡ್ಯ ಗಮನ ಸೆಳೆದಿದ್ದಾರೆ. ಇಲ್ಲಿವರೆಗೆ ಐಪಿಎಲ್‌ನಲ್ಲಿ ಪಾಂಡ್ಯ ಆಡಿರುವ 127 ಪಂದ್ಯಗಳಲ್ಲಿ 21.96 ರ ಸರಾಸರಿಯಲ್ಲಿ 1240 ರನ್ ಗಳಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿಯೂ 76 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 11 ರನ್‌ಗಳಿಗೆ 3 ವಿಕೆಟ್ ಉರುಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications