ಈ ಕೆಲಸ ಮಾಡದಿದ್ದರೆ ಆಡಲು ಬಿಡಲ್ಲ ಎಂದಿದ್ರು ಮುಂಬೈ ಇಂಡಿಯನ್ಸ್‌ನ ಆಟಗಾರ; ಕಹಿ ಘಟನೆ ಬಿಚ್ಚಿಟ್ಟ ಉತ್ತಪ್ಪ!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಜಗತ್ತಿನ ಅತಿದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಥಮ ಆವೃತ್ತಿಯಿಂದಲೂ ಆಡುತ್ತಿರುವ ಕೆಲ ಆಟಗಾರರ ಪೈಕಿ ಕೆಲವರು ಆರಂಭದಿಂದಲೂ ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದರೆ, ಹಲವು ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳ ಪರ ಕಣಕ್ಕಿಳಿದಿದ್ದಾರೆ.
ಹೀಗೆ ಹಲವು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರತಿನಿಧಿಸಿರುವ ಆಟಗಾರರ ಪೈಕಿ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಓರ್ವರು. ಹೀಗೆ ಹಲವು ತಂಡಗಳನ್ನು ಪ್ರತಿನಿಧಿಸಿರುವ ರಾಬಿನ್ ಉತ್ತಪ್ಪ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ತಂಡದ ಪರ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ವೃತ್ತಿ ಜೀವನದ ಅಂತಿಮ ಘಟ್ಟದಲ್ಲೂ ಕೂಡ ಚುಟುಕು ಕದನದಲ್ಲಿ ಮಿಂಚುತ್ತಿದ್ದಾರೆ.
ಹೀಗೆ ಹಲವಾರು ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಅನುಭವವನ್ನು ಹೊಂದಿರುವ ರಾಬಿನ್ ಉತ್ತಪ್ಪ ಇದೀಗ ತಾನು ಈ ಹಿಂದೆ ಪ್ರತಿನಿಧಿಸಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿವಾದದ ರೂಪ ಪಡೆದುಕೊಳ್ಳುತ್ತಿದೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ವಿರುದ್ಧವಾಗಿ ಹೇಳಿ ಇರುವುದಾದರೂ ಏನು ಎಂಬ ಮಾಹಿತಿ ಈ ಕೆಳಕಂಡಂತಿದೆ.

2008ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ ಆಡಿದ್ದ ರಾಬಿನ್ ಉತ್ತಪ್ಪ
ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದರು. ಈ ವಿಷಯವನ್ನು ಸ್ವತಃ ಉತ್ತಪ್ಪ ಮೆಲುಕು ಹಾಕಿದ್ದು ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತಾನು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ತನ್ನ ಜೊತೆ ಮನೀಷ್ ಪಾಂಡೆ ಹಾಗೂ ಜಹೀರ್ ಖಾನ್ ಕೂಡ ಇದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

ಇದೇ ವೇಳೆ ಮುಂಬೈನ ಆಟಗಾರ ಒತ್ತಡ ಹೇರಿದ್ದರು
ಹೀಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ದಿನಗಳನ್ನು ಸ್ಮರಿಸಿರುವ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರನೋರ್ವ ತನಗೆ ವರ್ಗಾವಣೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಯಿಸಿದ್ದರು ಹಾಗೂ ಸಹಿ ಹಾಕದಿದ್ದರೆ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಒತ್ತಡ ಹೇರಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಆ ಆಟಗಾರನ ಹೆಸರನ್ನು ಹೇಳಲು ಇಚ್ಛಿಸದ ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ ಮೊದಲು ತಂಡದಿಂದ ವರ್ಗಾವಣೆಯಾದ ಆಟಗಾರರಲ್ಲಿ ನಾನೂ ಕೂಡ ಓರ್ವ ಎಂಬುದನ್ನೂ ಕೂಡ ತಿಳಿಸಿದ್ದಾರೆ. ಹಾಗೂ ಆ ಆಟಗಾರ ಒತ್ತಡ ಹೇರಿದಾಗ ತನಗೆ ವರ್ಗಾವಣೆ ಪತ್ರಕ್ಕೆ ಸಹಿ ಹಾಕಲು ಇಷ್ಟವಿರಲಿಲ್ಲ ಏಕೆಂದರೆ ಮುಂಬೈ ತಂಡ ತ್ಯಜಿಸಲು ತಾನು ಸಿದ್ಧನಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ. ಈ ಮೂಲಕ ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ಆರ್‌ಸಿಬಿ ಪರ ಉತ್ತಮವಾಗಿ ಆಡಲಿಲ್ಲ, ಮುಂಬೈನಲ್ಲಿ ಸರಿಯಾದ ಅವಕಾಶ ಸಿಗಲಿಲ್ಲ
ಇನ್ನು ಮೊದಲ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಬಿನ್ ಉತ್ತಪ್ಪ ನಂತರದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ತಾನು ಖಿನ್ನತೆಗೊಳಗಾಗಿ ಯಾವುದೇ ಪಂದ್ಯದಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಲಾಗಲಿಲ್ಲ ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಪರ ಆಡಿದ್ದ ದಿನಗಳ ಬಗ್ಗೆ ಹೇಳಿಕೊಂಡ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ಪರ ಸತತವಾಗಿ ಆಡುವ ಸರಿಯಾದ ಅವಕಾಶ ತನಗೆ ಸಿಗಲಿಲ್ಲ ಹಾಗೂ ಡ್ರಾಪ್ ಮಾಡಿ ಅವಕಾಶ ನೀಡಲಾಗಿತ್ತು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications