For Quick Alerts
ALLOW NOTIFICATIONS  
For Daily Alerts
 

MS Dhoni ಈ ವಿಡಿಯೋ ಒಮ್ಮೆ ನೋಡಿದರೆ ಪದೇ ಪದೇ ನೋಡುತ್ತೀರಾ

ಟಿ20 ವಿಶ್ವಕಪ್‌ ಭಾರತದಲ್ಲಿ ನಡೆಯುತ್ತಿದೆ. ಈ ವಿಶ್ವಕಪ್‌ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಆರಂಭವಾಗಲಿದೆ. ಈ ಲೀಗ್‌ನಲ್ಲಿ ಒಟ್ಟು 10 ತಂಡಗಳ ಭಾಗವಹಿಸುತ್ತಿವೆ. ಈ ಲೀಗ್‌ಗಾಗಿ ಈಗಾಗಲೇ ಹಲವು ತಂಡಗಳ ಮೈದಾನದಲ್ಲಿ ತಾಲೀಮು ನಡೆಸುತ್ತಿವೆ. 19ನೇ ಆವೃತ್ತಿ ಐಪಿಎಲ್‌ ಮಾರ್ಚ್‌ ಕೊನೆಯ ವಾರದಲ್ಲಿ ಆರಂಭವಾಗಲಿದೆ. ಆದರೆ ಈ ಲೀಗ್‌ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನು ಬಿಡುಗಡೆ ಮಾಡಿಲ್ಲ. ಐದು ಬಾರಿ ದಾಖಲೆಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ಭರ್ಜರಿ ತಯಾರಿ ನಡೆಸಿದೆ. ಈ ವೇಳೆ ಎಂಎಸ್‌ ಧೋನಿ ಅವರು ಅಭ್ಯಾಸದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡ ತನ್ನ ಅಧಿಕೃತ ಸಾಮಾಜಿಕ ತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಜಸ್ಟ್ 7 ಸೆಕೆಂಡ್‌ಗಳದ್ದಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

MS Dhoni

ಧೋನಿ ಬ್ಯಾಟ್ ಮಾಡುವಾಗ ನೆಟ್‌ ಬೌಲರ್ ಚೆಂಡನ್ನು ವೈಡ್ ಎಸೆದರು. ಆ ಚೆಂಡ ಆಫ್‌ ಸ್ಟಂಪ್‌ನಿಂದ ಬಹಳ ಆಚೆ ಇತ್ತು. ಆರಂಭದಲ್ಲಿ ಚೆಂಡನ್ನು ಕಂಡು ಧೋನಿ ಬಿಗ್ ಹಿಟ್ ಬಾರಿಸಲು ಮುಂದೆ ಸಾಗುತ್ತಾರೆ. ಆದರೆ ಚೆಂಡು ವೈಡ್ ಹೋಗುತ್ತಿರುವುದನ್ನು ಗಮನಸಿದ ಮಾಹಿ ಅದನ್ನು ಬಿಡುತ್ತಾರೆ. ಬಳಿಕ ಧೋನಿ ಮಗುವಿನಂತೆ ಜಿಗಿದು, ತನ್ನ ಎರಡೂ ಕೈಗಳನ್ನು ಚಾಚಿ ವೈಡ್‌ ಬೌಲ್ ಎಂದು ಸೂಚಿಸುತ್ತಾರೆ. ಅಭಿಮಾನಿಗಳು ಅವರ ಈ ವೀಡಿಯೊವನ್ನು ಇಷ್ಟಪಡುತ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಸಾಧನೆ

ಭಾರತದ ಪರ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಮಾಹಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಆಡುತ್ತಿದ್ದಾರೆ ಧೋನಿ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಐಪಿಎಲ್ ನಿಯಮಗಳ ಪ್ರಕಾರ, ಐದು ವರ್ಷಗಳ ಅವಧಿಯಲ್ಲಿ ಭಾರತೀಯ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದೇ ಇದ್ದಲ್ಲಿ ಆತನನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮದಡಿ ಚೆನ್ನೈ ಧೋನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಅನ್‌ಕ್ಯಾಪ್ಡ್‌ ಪ್ಲೇಯರ್‌ಗೆ ನೀಡುವ 4 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.

ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿರುವ ಆಟಗಾರ. ಇವರು ಈ ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟ ತೊಡಿಸಿದ ನಾಯಕ. 44 ವರ್ಷದ ಧೋನಿ 278 ಐಪಿಎಲ್‌ ಪಂದ್ಯಗಳಲ್ಲಿ 5,439 ರನ್ ಗಳಿಸಿದ್ದಾರೆ.

ಧೋನಿ ನಿವೃತ್ತಿ?

ಪ್ರತಿ ಐಪಿಎಲ್ ಆವೃತ್ತಿಗಳು ಆರಂಭವಾದಾಗಲೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ಈ ಆವೃತ್ತಿ ಕೊನೆಯದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರಂತೆ ಈ ಬಾರಿಯೂ ಕೇಳಿ ಬರುತ್ತಿದ್ದು, ಧೋನಿ ಆರಂಭಿಕ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ.

Story first published: Monday, March 2, 2026, 20:16 [IST]
Other articles published on Mar 2, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+