Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಯುವಿ ಹೋರಾಟ ವ್ಯರ್ಥ, ಕ್ಯಾಪಿಟಲ್ಸ್‌ಗೆ ಶರಣಾದ ಇಂಡಿಯನ್ಸ್!

IPL 2019 MI vs DC : ಪಿಚ್ಚರ್ ಅಭೀ ಬಾಕಿ ಹೈ ಅಂದ ಯುವಿ ನೋಡಿ ಎಲ್ಲರೂ ಗಪ್ ಚುಪ್..!
IPL: Mumbai vs Delhi , 3rd Match - Live Cricket Score

ಮುಂಬೈ, ಮಾರ್ಚ್ 24: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 24) ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿ 37 ರನ್ ಜಯ ಸಾಧಿಸಿದೆ. ಆದರೆ ಪಂದ್ಯದಲ್ಲಿ 'ಕೆಚ್ಚೆದೆಯ ಮಹಾರಾಜ' ಯುವರಾಜ್ ಸಿಂಗ್ ಮತ್ತು ರಿಷಬ್ ಪಂತ್ ಅವರ ಆಕರ್ಷಕ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45759

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ರಿಷಬ್ ಪಂತ್ ಸ್ಫೋಟಕ 78* (27 ಎಸೆತ) ರನ್ ಬಾರಿಸಿ ತಂಡ ಅತ್ಯಧಿಕ ರನ್ ಪೇರಿಸಲು ನೆರವಾದರು. ಶಿಖರ್ ಧವನ್ 43, ಕಾಲಿನ್ ಇನ್‌ಗ್ರಾಮ್ 47 ರನ್‌ ಕೊಡುಗೆಯೊಂದಿಗೆ ಡೆಲ್ಲಿ ತಂಡ 20 ಓವರ್‌ಗೆ 6 ವಿಕೆಟ್ ಕಳೆದು 213 ರನ್ ಕಲೆ ಹಾಕಿತು.

ಮುಂಬೈ ಇಂಡಿಯನ್ಸ್ ವೇಗದ ರನ್‌ನತ್ತ ಸಾಗಿತಾದರೂ ವಿಕೆಟ್ ಕಾವಲು ಕಾಯುವಲ್ಲಿ ಎಡವಿತು. ಅದರಲ್ಲೂ ನಾಯಕ ರೋಹಿತ್ ಶರ್ಮಾ 14, ಕ್ವಿಂಟನ್ ಡಿ ಕಾಕ್ 27, ಸೂರ್ಯ ಕುಮಾರ್ ಯಾದವ್ 2, ಕೀರನ್ ಪೊಲಾರ್ಡ್ 21, ಹಾರ್ದಿಕ್ ಪಾಂಡ್ಯ 0, ಬೆನ್ ಕಟಿಂಗ್ 3 ರನ್‌ಗೆ ಔಟ್ ಆಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಆದರೆ ಕೃನಾಲ್ ಪಾಂಡ್ಯಾ ಮತ್ತು ಯುವರಾಜ್ ಸಿಂಗ್, ಮುಂಬೈ ನಿರೀಕ್ಷೆಯನ್ನು ಕೊಂಚಕಾಲ ಜೀವಂತವಾಗಿಟ್ಟರು. ಯುವರಾಜ್ 35 ಎಸೆತಗಳಿಗೆ 53, ಕೃನಾಲ್ 15ಕ್ಕೆ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ತಂಡ ಸೋಲು ಖಚಿತವಾಗಿತ್ತು. ಡೆಲ್ಲಿ ನೀಡಿದ್ದ 214 ರನ್ ಗುರಿ ಬೆನ್ನಟ್ಟಿದ್ದ ಮುಂಬೈ 19.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 176 ರನ್ ಬಾರಿಸಿ ಶರಣಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಕೀಮೋ ಪಾಲ್, ಆಕ್ಸರ್ ಪಟೇಲ್, ರಾಹುಲ್ ತೆವಾಟಿಯ, ಕಾಗಿಸೊ ರಬಾಡಾ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಯುವರಾಜ್ ಸಿಂಗ್, ಕೀರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಬೆನ್ ಕಟಿಂಗ್, ಮಿಚೆಲ್ ಮ್ಯಾಕ್ಕ್ಲೆನಾಘನ್, ರಾಸಿಕ್ ಸಲಾಮ್, ಜಸ್‌ಪ್ರೀತ್ ಬೂಮ್ರಾ.

Story first published: Monday, March 25, 2019, 0:11 [IST]
Other articles published on Mar 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+