Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಆಟಗಾರರ ಹರಾಜು 2023: ಪಾಕ್ ವಿರುದ್ಧ ಅಬ್ಬರಿಸಿದ ಈ ಆಟಗಾರನಿಗೆ ಐಪಿಎಲ್‌ನಲ್ಲಿ ಫುಲ್ ಡಿಮ್ಯಾಂಡ್?

IPL Player Auction 2023 : England Batter Harry Brook Can Get Good Amount In IPL Auction

2023ರ ಐಪಿಎಲ್‌ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಹಲವು ಆಟಗಾರರು ವಿವಿಧ ಟೂರ್ನಿಗಳಲ್ಲಿ ನೀಡಿರುವ ಪ್ರದರ್ಶನ ಅವರ ಬೇಡಿಕೆಯನ್ನು ನಿರ್ಧರಿಸುತ್ತದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಈ ಬಾರಿಯ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. 23 ವರ್ಷದ ಸ್ಫೋಟಕ ಬ್ಯಾಟರ್ ಟೆಸ್ಟ್ ಸರಣಿಯಲ್ಲಿ 3ನೇ ಶತಕವನ್ನು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅವರು ಗಳಿಸಿರುವ ಮೂರು ಶತಕಗಳು ತ್ವರಿತ ಗತಿಯಲ್ಲಿ ಬಂದಿವೆ. ಟೆಸ್ಟ್ ಮಾದರಿಯಲ್ಲಿ ಕೂಡ ಬ್ರೂಕ್ 100 ಕ್ಕಿಂತ ಹೆದ್ದು ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಪಾಕಿಸ್ತಾನದ ಸ್ಪಿನ್‌ಗೆ ಸಹಕಾರಿಯಾದ ಪಿಚ್‌ಗಳಲ್ಲಿ ಅವರು ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡಿರುವುದು ಮತ್ತೊಂದು ಧನಾತ್ಮಕ ಸಂಗಿಯಾಗಿದೆ.

ಟಿ20 ಕೌಶಲ್ಯಗಳನ್ನು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಬಳಸಿಕೊಳ್ಳುತ್ತಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ರೂಕ್ ಸ್ಫೋಟಕ ಬ್ಯಾಟರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 58 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ ಮಾಡಲು ಬಂದ ಬ್ರೂಕ್ ಬೌಲರ್‌ಗಳ ವಿರುದ್ಧ ಪ್ರತಿದಾಳಿ ನಡೆಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು.

IPL Player Auction 2023 : England Batter Harry Brook Can Get Good Amount In IPL Auction

ಫಿನಿಶರ್ ಪಾತ್ರಕ್ಕೆ ಉತ್ತಮ ಆಯ್ಕೆ

ಕೇವಲ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಬ್ರೂಕ್ ಈಗಾಗಲೇ 3 ಶತಕ ಗಳಿಸಿರುವುದು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ. ಹ್ಯಾರಿ ಬ್ರೂಕ್ ಟಿ20 ಮಾದರಿಯಲ್ಲಿ 137.78 ಸ್ಟ್ರೈಕ್ ರೇಟ್ ಹೊಂದಿದ್ದಾರೆ

ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡದ ಪರವಾಗಿ 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 372 ರನ್ ಗಳಿಸಿದ್ದು, 137.78 ರ ಅತ್ಯುತ್ತಮ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ಪಾಕಿಸ್ತಾನದಲ್ಲಿ ಹ್ಯಾರಿ ಬ್ರೂಕ್ ನೀಡುತ್ತಿರುವ ಅಮೋಘ ಪ್ರದರ್ಶನವನ್ನು ಎಲ್ಲಾ ಫ್ರಾಂಚೈಸಿಗಳು ಗಮನಿಸಿವೆ.

ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಮುಖವಾಗಿ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರುವ ತಂಡಗಾಗಿವೆ. ಆದರೂ, ಇತರೆ ತಂಡಗಳು ಕೂಡ ಬ್ರೂಕ್‌ಗಾಗಿ ಹರಾಜಿನಲ್ಲಿ ಪೈಪೋಟಿ ನಡೆಸುವ ಸಾಧ್ಯತೆ ಇದೆ.

Story first published: Sunday, December 18, 2022, 22:03 [IST]
Other articles published on Dec 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+