IPL Player Auction 2023: ಆರ್‌ಸಿಬಿ ಕುರಿತಂತೆ ದೊಡ್ಡ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

2023 ರ ಮಿನಿ ಹರಾಜಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಬಲಿಷ್ಠವಾಗಿದೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ 7 ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಅವರ ಪರ್ಸ್‌ನಲ್ಲಿ 8.75 ಕೋಟಿ ರುಪಾಯಿ ಮೊತ್ತ ಉಳಿದಿದ್ದು, ಯಾರನ್ನು ಖರೀದಿಸಲಿದೆ ಎನ್ನುವ ಕುತೂಹಲ ಮೂಡಿದೆ.
ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್ ಪ್ಲಾನ್' ನಲ್ಲಿ ಮಾತನಾಡಿರುವ ಇರ್ಫಾನ್ ಪಠಾಣ್, ಆರ್‌ಸಿಬಿ ಸಮತೋಲಿತ ತಂಡವಾಗಿದೆ ಎಂದು ವಿವರಿಸಿದ್ದಾರೆ. "ನನ್ನ ಮಟ್ಟಿಗೆ ಹೇಳುವುದಾದರೆ, ಆರ್‌ಸಿಬಿ ಬಹುತೇಕ ಸಮತೋಲನದಿಂದ ಕೂಡಿರುವ ತಂಡವಾಗಿದೆ. ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. ನಾಲ್ವರು ಆಲ್‌ರೌಂಡರ್ ಇದ್ದು, ತಂಡ ಸಾಕಷ್ಟು ಬಲಿಷ್ಠವಾಗಿದೆ" ಎಂದು ಹೇಳಿದರು.
ಮೂರು ಬಾರಿ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2023ರ ಆವೃತ್ತಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

ಆಲ್‌ರೌಂಡರ್‌ಗಳು ತಂಡದ ಪ್ರಮುಖ ಶಕ್ತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆಲ್‌ರೌಂಡರ್‌ಗಳನ್ನು ಹೊಂದಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಹಿಪಾಲ್ ಲೊಮ್ರೋರ್ ಬೌಲಿಂಗ್ ಮಾಡಬಲ್ಲರು. ಅವರು ಸ್ಫೋಟಕ ಬ್ಯಾಟಿಂಗ್ ಮಾಡುವ ಶಕ್ತಿ ಹೊಂದಿದ್ದಾರೆ.
ವನಿಂದು ಹಸರಂಗ ಮತ್ತು ಶಹಬಾಜ್ ಅಹ್ಮದ್ ಕೂಡ ಉತ್ತಮ ಆಲ್‌ರೌಂಡರ್‌ಗಳಾಗಿದ್ದಾರೆ. ಇದು ತಂಡದ ಸಮತೋಲವನ್ನು ಹೆಚ್ಚಿಸುತ್ತದೆ ಎಂದು ಪಠಾಣ್ ಹೇಳಿದ್ದಾರೆ. ಜೋಶ್ ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಉತ್ತಮ ವೇಗದ ಬೌಲರ್ ಆಗಿದ್ದಾರೆ. ಎಲ್ಲಾ ವಿಭಾಗಗಳಲ್ಲಿಯೂ ಆರ್‌ಸಿಬಿ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಿದರು.
AUS vs SA 1st Test: ಗಬ್ಬಾದಲ್ಲಿ 2ನೇ ದಿನವೇ ಮುಗಿದ ಪಂದ್ಯ; ಆಸೀಸ್‌ನ ಬೂಟಾಟಿಕೆ ಎಂದು ಟೀಕಿಸಿದ ಸೆಹ್ವಾಗ್

ಐಪಿಎಲ್ ವೇಳೆಗೆ ಮ್ಯಾಕ್ಸ್‌ವೆಲ್ ಫಿಟ್
ಗ್ಲೆನ್ ಮ್ಯಾಕ್ಸ್‌ವೆಲ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಐಪಿಎಲ್ ಆರಂಭವಾಗುವ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ. 2023ರ ಐಪಿಎಲ್‌ನಲ್ಲಿ ಆಡುತ್ತೇನೆ ಎಂದು ಮ್ಯಾಕ್ಸ್‌ವೆಲ್ ಸ್ವತಃ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡ ಪ್ರಮುಖ ಮಧ್ಯಮ ಕ್ರಮಾಂಕದ ಆಟಗಾರ, ಸ್ಫೋಟಕ ಇನ್ನಿಂಗ್ಸ್ ಆಡುವ ಮ್ಯಾಕ್ಸ್‌ವೆಲ್ ಭಾರತದ ಪಿಚ್‌ಗಳಲ್ಲಿ ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮಾತ್ರವಲ್ಲದೆ ಉತ್ತಮವಾಗಿ ಬೌಲಿಂಗ್ ಕೂಡ ಮಾಡಬಲ್ಲರು.

ಆರ್‌ಸಿಬಿ ಈ ವಿಚಾರಗಳತ್ತ ಗಮನ ಹರಿಸಬೇಕು
ಆದರೂ, ಆರ್‌ಸಿಬಿ ಕೆಲವೊಂದು ವಿಚಾರಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಆಕಾಶ್ ದೀಪ್‌ಗೆ ತಂಡದಲ್ಲಿ ಅವಕಾಶ ನೀಡಬೇಕು ಎಂದು ಪಠಾಣ್ ಹೇಳಿದ್ದಾರೆ. ಅವರು ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿದರೆ, ತಂಡದ ವೇಗದ ಬೌಲಿಂಗ್ ಮತ್ತಷ್ಟು ಶಕ್ತಿಯುತವಾಗಲಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್‌ಗೆ ಬದಲೀ ಬೌಲರ್ ಒಬ್ಬರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಆಸ್ಟ್ರೇಲಿಯಾ ಈ ಬಾರಿ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ, ಜೋಶ್ ಹೇಜಲ್‌ವುಡ್ ಸಂಪೂರ್ಣವಾಗಿ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಆಶಸ್ ಸರಣಿಗೆ ಮುಖ್ಯವಾಗಿರುವುದರಿಂದ, ಅವರಿಗೆ ಬದಲೀ ಆಟಗಾರರನ್ನು ಹೊಂದುವುದು ಅವಶ್ಯಕ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications