IPL Player Auction 2023 : ಈ ಬಾರಿಯ ಹರಾಜಿನಲ್ಲಿ ಗಮನ ಸೆಳೆಯಬಹುದಾದ ಮೂವರು ಯುವ ಲೆಗ್ ಸ್ಪಿನ್ನರ್‌ಗಳು ಇವರು

2023ರ ಮಿನಿ ಹರಾಜಿಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಡಿಸೆಂಬರ್ 23ರಂದು ಇದೇ ಮೊದಲ ಬಾರಿಗೆ ಕೊಚ್ಚಿಯಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ. 405 ಕ್ರಿಕೆಟಿಗರು ಈ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ.
ಸ್ಯಾಮ್ ಕರನ್, ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್ ಸೇರಿದಂತೆ ಹಲವು ಆಟಗಾರರು ಈ ಬಾರಿ ಮಿನಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹಲವು ಫ್ರಾಂಚೈಸಿಗಳು ತಮ್ಮ ತಂಡದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿವೆ.
ದೊಡ್ಡ ಆಟಗಾರರನ್ನು ಹೊರತುಪಡಿಸಿ, ಈ ಬಾರಿ ಐಪಿಎಲ್‌ನಲ್ಲಿ ಲೆಗ್-ಸ್ಪಿನ್ನರ್‌ಗಳಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. 2023ರ ಐಪಿಎಲ್ ಭಾರತದಲ್ಲಿ ನಡೆಯುತ್ತಿರುವುದರಿಂದ, ಸ್ಪಿನ್ನರ್ ಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಹರಾಜಿಗಾಗಿ ಆಟಗಾರರ ಪಟ್ಟಿಯನ್ನು ನೋಡಿದರೆ, ಇದುವರೆಗೂ ರಾಷ್ಟ್ರೀಯ ತಂಡಕ್ಕೆ ಆಡದ ಹಲವು ಆಟಗಾರರು ಇದ್ದಾರೆ. ಅನ್‌ಕ್ಯಾಪ್ಡ್ ಸ್ಪಿನ್ನರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಾಜಿನಲ್ಲಿ ಇಲ್ಲ, ಆದ್ದರಿಂದಲೇ ಇರುವ ಆಟಗಾರರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಐಪಿಎಲ್ 2023 ರ ಹರಾಜಿನಲ್ಲಿ ಈ ಮೂವರು ಲೆಗ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ.

ಯುವ ಸ್ಪಿನ್ನರ್ ಸುಧೇಶನ್ ಮಿಧುನ್
2019ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಭಾಗವಾಗಿದ್ದ ಕೇರಳದ ಸುಧೇಶನ್ ಮಿಧುನ್ ಆ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶವನ್ನು ಪಡೆಯಲಿಲ್ಲ. ನಂತರದ ಆವೃತ್ತಿಯಿಂದ ಅವರು ಮುಂಬೈ ಇಂಡಿಯನ್ಸ್ (MI) ಮತ್ತು ಭಾರತೀಯ ಕ್ರಿಕೆಟ್ ತಂಡದ ನೆಟ್ ಬೌಲರ್ ಆಗಿ ಕೆಲಸ ಮಾಡಿದ್ದಾರೆ.
ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆರು ಪಂದ್ಯಗಳನ್ನು ಆಡಿರುವ ಅವರು, 6.53 ಎಕಾನಮಿಯಲ್ಲಿ 8 ವಿಕೆಟ್ ಪಡೆದರು. ಅವರ ಬೌಲಿಂಗ್ ಪ್ರದರ್ಶನವನ್ನು ಹಲವು ಫ್ರಾಂಚೈಸಿಗಳು ಗಮನಿಸಿವೆ, ಈ ಬಾರಿ ಯ ಮಿನಿ ಹರಾಜಿನಲ್ಲಿ ಅವರು ಯಾವುದಾದರು ತಂಡದ ಭಾಗವಾಗುವ ಸಾಧ್ಯತೆ ಇದೆ.

ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್
ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದ, ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 2022ರ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದರು. ಆದರೆ, ಅವರು ಮಿನಿ ಹರಾಜಿಗೆ ಮುನ್ನ ಹೈದರಾಬಾದ್ ತಂಡದಿಂದ ಬಿಡುಗಡೆಗೊಂಡಿದ್ದು, ಹರಾಜಿನಲ್ಲಿ ನೊಂದಾಯಿಸಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ 49 ಪಂದ್ಯಗಳನ್ನು ಆಡಿರುವ ಶ್ರೇಯಸ್ ಗೋಪಾಲ್ ಅನುಭವಿ ಆಟಗಾರ. ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಶ್ರೇಯಸ್ ಯಾವುದೇ ತಂಡಕ್ಕಾದರೂ ಉತ್ತಮ ಆಯ್ಕೆಯಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶ್ರೇಯಸ್ ಗೋಪಾಲ್ ಉತ್ತಮ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪಿಚ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಅವರು ತಂಡದ ಪ್ರಮುಖ ಆಲ್‌ರೌಂಡರ್ ಆಗಬಲ್ಲರು.

ತಮಿಳುನಾಡು ಸ್ಪಿನ್ನರ್ ಮುರುಗನ್ ಅಶ್ವಿನ್
ಮುರುಗನ್ ಅಶ್ವಿನ್ ಟಿ20 ಮಾದರಿಯಲ್ಲಿ ತಮಿಳುನಾಡು ಪರ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಅವರು ಅಷ್ಟೇನೂ ಉತ್ತಮ ಪ್ರದರ್ಶನ ನೀಡಿದ ಇತಿಹಾಸ ಇಲ್ಲ. 42 ಪಂದ್ಯಗಳನ್ನಾಡಿರುವ ಅವರು 35 ವಿಕೆಟ್ ಪಡೆದಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ, ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಏಳು ಪಂದ್ಯಗಳಿಂದ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಮುಂಬು ಇಂಡಿಯನ್ಸ್ ತಂಡದಿಂದ ಬಿಡುಗಡೆಯಾದ ನಂತರ, ಅವರಿಗೆ ಉತ್ತಮ ಬೇಡಿಕೆ ಉಂಟಾಗುವ ಸಾಧ್ಯತೆ ಇಲ್ಲ. ಆದರೆ, ಅನುಭವಿ ಸ್ಪಿನ್ನರ್ ಎನ್ನುವ ಕಾರಣಕ್ಕೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಆಸಕ್ತಿ ತೋರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications