IPL playoff scenarios: 4 ಸ್ಥಾನಗಳಲ್ಲಿ 3 ತಂಡಗಳು ಫಿಕ್ಸ್: 1 ಸ್ಥಾನಕ್ಕಾಗಿ 5 ತಂಡಗಳ ಬಿಗ್ ಫೈಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಮವಾರ ಲೀಗ್‌ನ 63ನೇ ಪಂದ್ಯ ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಉಭಯ ತಂಡಗಳಿಗೆ ಮಹತ್ವದಾಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 180 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 181 ರನ್ ಕಲೆ ಹಾಕಿ ಜಯ ಸಾಧಿಸಿತು. ಅಲ್ಲದೆ ಪ್ಲೇ ಆಫ್‌ಗೆ ಅರ್ಹತೆಯನ್ನು ಪಡೆಯಿತು.

ಐಪಿಎಲ್‌ನ ಅಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಪ್ಲೇ ಆಫ್‌ಗೆ ಪ್ರವೇಶ ಪಡೆಯುತ್ತವೆ. ಈ ಪಟ್ಟಿಯಲ್ಲಿ ಆರ್‌ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಗುಜರಾಟ್ ಟೈಟಾನ್ಸ್ 16 ಅಂಕ ಸೇರಿಸಿದರೆ, ಎಸ್‌ಆರ್‌ಎಚ್ 16 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿವೆ. ಇನ್ನು ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ ಸತತ 6ನೇ ಸೋಲು ಕಂಡಿದೆ. ಇನ್ನು ಈ ತಂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ತಂಡ ಪ್ಲೇ ಆಫ್ ಪ್ರವೇಶಿಸುವ ಆಸೆ ಬೇರೆ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಪಂಜಾಬ್ ಇನ್ನು ಲೀಗ್‌ನಲ್ಲಿ ಮೇ 23 ರಂದು ಎಲ್‌ಎಸ್‌ಜಿ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದಾಗ ಮಾತ್ರ ಪ್ಲೇ ಆಫ್ ಲೆಕ್ಕಾಚಾರ ಹಸಿರಾಗಿರುತ್ತದೆ.
ಪಂಜಾಬ್ ಪ್ಲೇ ಆಫ್ ಪ್ರವೇಶಿಸಬೇಕಾದರೆ,ರಾಜಸ್ಥಾನ್ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಾದರೂ ಸೋಲಬೇಕು.
ಕೆಕೆಆರ್ ಮುಂದಿನ ಎರಡೂ ಲೀಗ್ ಹಂತದ ಪಂದ್ಯಗಳನ್ನು ಗೆದ್ದರೆ, ಪಂಜಾಬ್ ಹಾಗೂ ಕೋಲ್ಕತ್ತಾ ತಂಡದ ಅಂಕಗಳು ಸಮನಾಗುತ್ತವೆ. ಆಗ ನೆಟ್ ರನ್ ರೇಟ್ ಲೆಕ್ಕಾಚಾರ ಶುರುವಾಗುತ್ತದೆ.
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ಮುಂದಿನ ಎರಡೂ ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿದರೆ ನೇರವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.
ಒಂದು ವೇಳೆ ರಾಜಸ್ಥಾನ್ ಎರಡರಲ್ಲಿ ಒಂದು ಪಂದ್ಯದಲ್ಲಿ ಜಯ ಸಾಧಿಸಿದರೆ, 14 ಅಂಕಗಳನ್ನು ಕಲೆ ಹಾಕಲಿದೆ. ಈ ವೇಳೆ ಕೆಕೆಆರ್ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಕಂಡರೆ, ಪಂಜಾಬ್ ಕಿಂಗ್ಸ್ ತಂಡ ಲೀಗ್ ಹಂತದ ಕೊನೆಯ ಪಂದ್ಯವನ್ನು ಸೋಲ ಬೇಕಾಗುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ 14 ಅಂಕಗಳನ್ನು ಕಲೆ ಹಾಕುವ ಅವಕಾಶ ಇದೆ. ಇಷ್ಟು ಅಂಕ ಕಲೆ ಹಾಕಿದರೂ ಡೆಲ್ಲಿ ಪ್ಲೇ ಆಫ್‌ಗೆ ಹೇಗೆ ಪ್ರವೇಶಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಮೇ 24 ರಂದು ನಡೆಯಲಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 100ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲುವ ಅವಶ್ಯಕತೆ ಇದೆ.
ಸಿಎಸ್‌ಕೆ ಸಹ ದೊಡ್ಡ ಅಂತರದಿಂದ ಸೋಲ ಬೇಕಾಗುತ್ತದೆ.
ರಾಜಸ್ಥಾನ್ ಹಾಗೂ ಪಂಜಾಬ್ ತಂಡಗಳು ತಮ್ಮ ಮುಂದಿನ ಎರಡೂ ಪಂದ್ಯಗಳನ್ನು ಸೋಲಬೇಕಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್
ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋಲು ಕಂಡರೂ ಸಹ 14 ಅಂಕಗಳನ್ನು ಕಲೆ ಹಾಕುವ ಅವಕಾಶ ಇದೆ. ಸಿಎಸ್‌ಕೆ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಮೇ 21 ರಂದು ಜಿಟಿ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯ.
ಕೆಕೆಆರ್ ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕಿದೆ.
ರಾಜಸ್ಥಾನ್ ರಾಯಲ್ಸ್ ಎಲ್‌ಎಸ್‌ಜಿ ಹಾಗೂ ಎಂಐ ತಂಡಗಳ ವಿರುದ್ಧ ಲೀಗ್ ಹಂತದ ಎರಡೂ ಪಂದ್ಯಗಳನ್ನು ಸೋಲುವ ಅನಿವಾರ್ಯತೆ ಇದೆ. ಪಂಜಾಬ್ ಸಹ ಲೀಗ್ ಹಂತದಲ್ಲಿ ತನ್ನ ಪಂದ್ಯವನ್ನು ಸೋಲಬೇಕಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಜಯ ಸಾಧಿಸಿದಾಗ ನೆಟ್ ರನ್ ರೇಟ್ ಲೆಕ್ಕಾಚಾರ ಆರಂಭವಾಗುತ್ತದೆ.
ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಈ ವೇಳೆ ಈ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ತಂಡದ ಮೊತ್ತ 15 ಆಗುತ್ತದೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ಎರಡು ಪಂದ್ಯಗಳಲ್ಲಿ ಒಂದು ಸೋಲು ಕಾಣಬೇಕಾಗುತ್ತದೆ. ಅಲ್ಲದೆ ಪಂಜಾಬ್ ಸಹ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋಲಬೇಕು. ಇನ್ನು ಚೆನ್ನೈ ಹಾಗೂ ಡಿಸಿ ತಂಡಗಳು ಅತಿ ಹೆಚ್ಚು ಅಂದರೆ 14 ಅಂಕ ಕಲೆ ಹಾಕಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications