IPL playoff scenario: 3 ಸ್ಥಾನಕ್ಕಾಗಿ ನಡೆದಿದೆ ಜಿದ್ದಿನ ಕಾಳಗ; ಯಾವ ತಂಡಕ್ಕೆ ಎಷ್ಟು ಚಾನ್ಸ್ ಇದೆ? ಇಲ್ಲಿದೆ ಮಾಹಿತಿ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ಹುಟ್ಟಿಸಿದೆ. ಈಗಾಗಲೇ ಐಪಿಎಲ್‌ನ 62ನೇ ಪಂದ್ಯಗಳು ಮುಗಿದಿವೆ. ಈ ವೇಳೆ 10 ತಂಡಗಳಲ್ಲಿ ಕೇವಲ ಒಂದು ತಂಡ ಮಾತ್ರ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿದ 13 ಪಂದ್ಯಗಳಲ್ಲಿ 18 ಅಂಕಗಳನ್ನು ಕಲೆ ಹಾಕಿದ್ದು, ಈ ಆವೃತ್ತಿಯ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಉಳಿದ ಮೂರು ಸ್ಥಾನಗಳ ಪ್ಲೇ ಆಫ್‌ಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಹಾಗಿದ್ದರೆ ಯಾವ ತಂಡಕ್ಕೆ ಎಷ್ಟು ಅವಕಾಶ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಐಪಿಎಲ್‌ನ ಪ್ಲೇ ಆಫ್‌ಗೆ ಒಟ್ಟಾರೆ 4 ತಂಡಗಳು ಅರ್ಹತೆ ಪಡೆದಿವೆ. ಉಳಿದ ಮೂರು ಸ್ಥಾನಗಳಿಗೆ ಒಟ್ಟು 7 ತಂಡಗಳು ಸಹ ಈ ಮೂರು ಸ್ಥಾನಗಳ ಮೇಲೆ ಕಣ್ಣು ನೆಟ್ಟಿವೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಲೀಗ್ ಹಂತದಲ್ಲೇ ಹೊರ ನಡೆದಿವೆ. ಹಾಗಿದ್ದಾರೆ ಯಾವ ತಂಡದ ಲೆಕ್ಕಾಚಾರ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ಸಿಬಿ
ಆರ್‌ಸಿಬಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದು ನಂಬರ್ 1 ಸ್ಥಾನದಲ್ಲೇ ಮುಂದುವರಿದಿದೆ. ಆರ್‌ಸಿಬಿಗೆ ಇನ್ನು ಒಂದು ಪಂದ್ಯ ಬಾಕಿ ಉಳಿದಿದೆ. ಈ ವೇಳೆ ಆರ್‌ಸಿಬಿ ಆ ಒಂದು ಪಂದ್ಯ ಗೆದ್ದರೆ ಸುಲಭವಾಗಿ ಅಗ್ರಸ್ಥಾನ ಭದ್ರ ಪಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಸೋತರೆ, ಆರ್‌ಸಿಬಿ ಮತ್ತೆ ಎಸ್‌ಆರ್‌ಎಚ್, ಜಿಟಿ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.
ಗುಜರಾತ್
ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಸಹ ಟೂರ್ನಿಯಿಂದ ಹೊರ ನಡೆಯುವ ಭೀತಿಯನ್ನು ಅನುಭವಿಸುತ್ತಿದೆ. ಗುಜರಾತ್ ಸಿಎಸ್‌ಕೆ ವಿರುದ್ಧ ಸೋತರೆ ಸಮೀಕರಣ ಬದಲಾಗುತ್ತದೆ. ಎಸ್‌ಆರ್‌ಎಚ್, ಸಿಎಸ್‌ಕೆ, ಆರ್‌ಆರ್ ತಂಡಗಳಿಗೂ 16 ಅಂಕಗಳನ್ನು ಕಲೆ ಹಾಕುವ ಅವಕಾಶ ಇದೆ. ಒಂದು ವೇಳೆ ಈ ರೀತಿ ಆದಾಗ ನೆಟ್‌ರನ್ ರೇಟ್ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.
ಎಸ್‌ಆರ್‌ಎಚ್
ಸನ್‌ರೈಸರ್ಸ್ ಹೈದರಾಬಾದ್ ತಂಡ ಅಗ್ರ 4 ಸ್ಥಾನ ಪಡೆಯುವ ಅವಕಾಶ 87.9ರಷ್ಟಿದೆ. ಇನ್ನು ಈ ಈ ತಂಡ ಮೇ 18 ರಂದು ಸಿಎಸ್‌ಕೆ ವಿರುದ್ಧ, ಮೇ 22 ರಂದು ಆರ್‌ಸಿಬಿ ವಿರುದ್ಧ ಮಹತ್ವದ ಪಂದ್ಯವನ್ನು ಆಡಲಿದೆ.
ಸಿಎಸ್‌ಕೆ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ 44.9ರಷ್ಟಿದೆ. ಸಿಎಸ್‌ಕೆ ತಂಡ ಮೇ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಮೇ 21 ರಂದು ಜಿಟಿ ವಿರುದ್ಧ ಪಂದ್ಯವನ್ನು ಆಡಲಿದೆ. ಈ ತಂಡಕ್ಕೂ 2ನೇ ಸ್ಥಾನವನ್ನು ಪಡೆಯುವ ಅವಕಾಶ 25ರಷ್ಟಿದೆ.
ರಾಜಸ್ಥಾನ
ರಾಜಸ್ಥಾನ್ ರಾಯಲ್ಸ್‌ಗೂ ಐಪಿಎಲ್‌ನ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶ ಹೆಚ್ಚಿದೆ. ಈ ತಂಡ ಇನ್ನು 2 ಪಂದ್ಯಗಳನ್ನು ಆಡಲಿದ್ದು, ಪ್ಲೇ ಆಫ್ ಪ್ರವೇಶಿಸುವ ಅವಕಾಶ 44.5 ರಷ್ಟಿದೆ. ಇನ್ನು ಈ ತಂಡಕ್ಕೆ ಅಗ್ರ2ರಲ್ಲಿ ಸ್ಥಾನ ಪಡೆಯುವ ಅವಕಾಶ 9.4 ರಷ್ಟಿದೆ.
ಪಂಜಾಬ್
ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶ 35.2% ಕ್ಕೆ ಕುಸಿದಿದೆ. ಈ ತಂಡಕ್ಕೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಕೇವಲ 4ನೇ ತಂಡವಾಗಿ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಮಾತ್ರ ಪಜಾಬ್ ಕಿಂಗ್ಸ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯವನ್ನು ಆಡಲಿದ್ದು, ಈ ತಂಡಕ್ಕೂ ಪ್ಲೇ ಆಫ್ ಪ್ರವೇಶಿಸುವ ಅವಕಾಶ 19.5% ರಷ್ಟಿದೆ. ಇವರು ತಮ್ಮ ನೆಟ್ ರನ್‌ರೇಟ್ ಸುಧಾರಿಸಿಕೊಂಡಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಬಹುದಾಗಿದೆ.
ಕೆಕೆಆರ್
ಲೀಗ್ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವ ಆಸೆ ಶೇಕಡಾ 18 ರಷ್ಟಿದೆ. ಈ ತಂಡ ಸಹ ಡೆಲ್ಲಿ, ಪಂಜಾಬ್ ನಂತೆ ಟಾಪ್ 2 ರೇಸ್‌ನಿಂದ ಹೊರ ಬಿದ್ದಿದ್ದು, ನಾಲ್ಕನೇ ಸ್ಥಾನಕ್ಕಾಗಿ ಫೈಟ್ ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications