ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ 26 ಅಮಾಯಕರ ಮರಣಕ್ಕೆ ಭಾರತ ಸಹ ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ, ಪಾಕ್‌ನಲ್ಲಿ ಉಗ್ರರರ ತಾಣಗಳ ಮೇಲೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಪಾಕ್ ಸಹ ದಾಳಿ ನಡೆಸಿತು. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಮಧ್ಯೆ ಪರಿಸ್ಥಿತಿ ಹದಗಟ್ಟಿದೆ. ಇದರ ನೇರ ಪರಿಣಾಮ ಐಪಿಎಲ್ ಪಂದ್ಯಗಳ ಮೇಲೆ ಬಿದ್ದಿದೆ. ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟ ಬೆನ್ನೆಲ್ಲೆ ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಸ್ಥಗಿತಗೊಳಿಸಲಾಯಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ ಪಂದ್ಯಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ. ಐಪಿಎಲ್‌ನಲ್ಲಿ ಈ ವರೆಗೆ 58 ಪಂದ್ಯಗಳು ನಡೆದಿವೆ. ಇನ್ನು 16 ಪಂದ್ಯಗಳು ನಡೆಯಬೇಕಿದೆ. ಇದಕ್ಕಾಗಿ ಬಿಸಿಸಿಐ ಪ್ಲ್ಯಾನ್ ಬಿ ಮಾಡಿಕೊಳ್ಳುತ್ತಿದೆ. ಬಿಸಿಸಿಐ ಮುಂದಿನ ಐಪಿಎಲ್ ಪಂದ್ಯಗಳನ್ನು ನಡೆಸಲು ಮೂರು ಸ್ಥಳಗಳನ್ನು ಗುರುತಿಸಿದೆ. ಕ್ರಿಕ್ ಇನ್ಫೋ ವರದಿಯ ಪ್ರಕಾರ ಐಪಿಎಲ್‌ನ ಉಳಿದ ಪಂದ್ಯಗಳನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್‌ನಲ್ಲಿ ನಡೆಸುವ ಸಾಧ್ಯತೆ ಇದೆ.

ಐಪಿಎಲ್‌ನ ಉಳಿದ ಪಂದ್ಯಗಳನ್ನು ದಕ್ಷಿಣ ಭಾರತಕ್ಕೆ ಶಿಫ್ಟ್ ಮಾಡಲು ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಅನುಮತಿಯನ್ನು ಬಿಸಿಸಿಐ ಕಾಯುತ್ತಿದೆ. ಆ ಬಳಿಕವೇ ಉಳಿದ ಸಿದ್ಧತೆಗಳನ್ನು ಮಾಡಿಕೊಳ್ಳಲು ತೀರ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ. ಅಂದರೆ ಇನ್ನು ಮುಂದೆ ನಡೆಯುವ ಐಪಿಎಲ್ ಪಂದ್ಯಗಳು ಉತ್ತರ ಭಾರತದಲ್ಲಿ ನಡೆಯುವುದಿಲ್ಲ ಎಂಬುದು ಕನ್ಫರ್ಮ್ ಆದಂತೆ ಆಗಿದೆ.
ಐಪಿಎಲ್‌ನ ಉಳಿದ ಪಂದ್ಯಗಳನ್ನು ಸರ್ಕಾರ ಯಾವಾಗ ನಡೆಸುತ್ತದೆ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ. ಐಪಿಎಲ್‌ನಲ್ಲಿ ಇನ್ನು 16 ಪಂದ್ಯಗಳು ಬಾಕಿ ಇವೆ. ಉಳಿದ ಪಂದ್ಯಗಳ ಬಗ್ಗೆ ಬಿಸಿಸಿಐ ಇನ್ನು ಯಾವುದೇ ಅಪ್‌ಡೇಟ್ ನೀಡಲ್ಲ. ಇನ್ನು ಐಪಿಎಲ್ ಪಂದ್ಯಗಳನ್ನು ಶೀಘ್ರವಾಗಿ ನಡೆಸುವುದು ಡೌಟ್ ಎಂದು ಹೇಳಲಾಗುತ್ತಿದೆ. ಉಭಯ ದೇಶಗಳ ನಡುವಣ ಉದ್ವಿಗ್ನತೆ ಕಡಿಮೆ ಆಗದೇ ಐಪಿಎಲ್ ಪಂದ್ಯಗಳನ್ನು ಬೇಗ ನಡೆಸಲು ಸಾಧ್ಯವೇ ಇಲ್ಲ. ಈ ಬಗ್ಗೆ ಬಿಸಿಸಿಐ ಐಪಿಎಲ್ ಮಾಲೀಕರನ್ನು ಸಂಪರ್ಕಿಸಿದ್ದು, ಮಾಹಿತಿಯನ್ನು ನೀಡಿದೆ.
ಉಭಯ ದೇಶಗಳ ನಡುವಣ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಬಿಸಿಸಿಐ ದೇಶೀಯ ಹಾಗೂ ವಿದೇಶಿ ಆಟಗಾರರನ್ನು ಮನೆಗೆ ಕಳುಹಿಸಿದೆ. ಇನ್ನು ವಿದೇಶಿ ಆಟಗಾರರನ್ನು ಮತ್ತೆ ಕರೆತರುವುದು ಸುಲಭದ ಕೆಲಸವಲ್ಲ. ತವರಿಗೆ ಮರಳಿರುವ ಆಟಗಾರರು ಸಹ ಮುಂದಿನ ಐಪಿಎಲ್ ಪಂದ್ಯಗಳಿಗೆ ಲಭ್ಯರಾಗುತ್ತಾರೆ ಎಂದು ತಂಡಗಳು ನಂಬಿವೆ. ಈ ನಡುವೆ ಜೂನ್ 11 ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಗಳು ನಡೆಯಲಿವೆ. ಈ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಸ್ಟಾರ್ ಆಟಗಾರರು ಸಹ ಆಡುತ್ತಿದ್ದಾರೆ. ಇನ್ನು ಭಾರತ ಹಗೂ ಪಾಕ್ ನಡುವಣ ಪರಿಸ್ಥಿತಿ ತಿಳಿಗೊಂಡು ಯಾವಾಗ ಐಪಿಎಲ್ ಆರಂಭವಾಗುತ್ತದೆ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.