For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕಾಸ್ಟ್‌ಕಟ್ಟಿಂಗ್: ಪ್ರೈಸ್‌ಮನಿಯಲ್ಲಿ ಭಾರೀ ಕಡಿತ!

IPL Prize Money Reduced To Half As Bcci Seeks Cost Cutting

ಐಪಿಎಲ್ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಮೆಂಟ್. ಟಿ20 ಮಾದರಿಯ ಈ ಕ್ರಿಕೆಟ್ ಟೂರ್ನಿಗಾಗಿ ಖರ್ಚುಮಾಡುವ ಹಣದಿಂದಲೇ ಸಾಕಷ್ಟು ಚರ್ಚೆಗೀಡಾಗಿದೆ. ಆಟಗಾರರ ಬಿಡ್ಡಿಂಗ್‌ನಿಂದ ಹಿಡಿದು ಫ್ರಾಂಚೈಸಿಗಳು ಸಾಕಷ್ಟು ಹಣವನ್ನು ಈ ಆಟದ ಮೇಲೆ ಚೆಲ್ಲುತ್ತಾರೆ. ಈಗ ಈ ಟೂರ್ನಿಯ ಪ್ರೈಸ್‌ಮನಿಯಲ್ಲಿ ಬಿಸಿಸಿಐ ಭಾರೀ ಕಡಿತವನ್ನು ಮಾಡಲಿದೆ. ಈ ಬಗ್ಗೆ ಎಲ್ಲಾ ಪ್ರಾಂಚೈಸಿಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಪಿಟಿಐ ಸುದ್ಧಿ ಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿಯ ಐಪಿಎಲ್‌ನಲ್ಲಿ ಶೇಕಡಾ 50ರಷ್ಟು ಕಡಿತವಾಗಲಿದೆ. ಕಳೆದ ಬಾರಿಯ ಐಪಿಎಲ್ ವಿಜೇತ ತಂಡ 20 ಕೋಟಿ ನಗದು ಹಣವನ್ನು ಪ್ರೈಸ್‌ಮನಿಯಾಗಿ ಪಡೆದುಕೊಂಡಿತ್ತು. ಆದರೆ ಈ ಬಾರಿ ಅರ್ಧದಷ್ಟು ಕಡಿತವಾಗಲಿದೆ. ವಿಜೇತ ತಂಡ 10 ಕೋಟಿ ಹಣವನ್ನು ಪ್ರೈಸ್‌ಮನಿಯಾಗಿ ನೀಡಲು ನಿರ್ಧರಿಸಲಾಗಿದೆ.

ಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿ

ರನ್ನರ್‌ಅಪ್ ತಂಡ ಈ ಹಿಂದೆ 12.5 ಕೋಟಿ ಹಣವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಬದಲಾಗಿ 6.25 ಕೋಟಿ ಹಣವನ್ನು ರನ್ನರ್‌ಅಪ್ ತಂಡ ಪಡೆದುಕೊಳ್ಳಲಿದೆ. ಇನ್ನು ಕ್ವಾಲಿಫಯರ್‌ನಲ್ಲಿ ಸೋತ ತಂಡಗಳು ತಲಾ 4.375 ಕೋಟಿ ಹಣವನ್ನು ಪಡೆದುಕೊಳ್ಳಲಿದೆ.

ಇನ್ನು ಈ ಭಾರಿ ಪ್ರಮಾಣದಲ್ಲಿ ಪ್ರೈಸ್‌ಮನಿ ಕಡಿತ ಮಾಡುತ್ತಿರುವುದಕ್ಕೆ ಬಿಸಿಸಿಐ ಕಾರಣವನ್ನು ಕೂಡ ನೀಡಿದೆ. ಐಪಿಎಲ್ ಫ್ರಾಂಚೈಸಿಗಳು ಈಗ ಹಣಕಾಸಿನ ವಿಚಾರದಲ್ಲಿ ಉತ್ತಮ ಹಂತದಲ್ಲಿದೆ. ಹೀಗಾಗಿ ಈ ಕಾಸ್ಟ್‌ಕಟ್ಟಿಂಗ್ ಮಾಡಲಾಗ್ತಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

ಐಪಿಎಲ್ ಫ್ರಾಂಚೈಸಿಗಳು ಬೇರೆ ಬೇರೆ ಮೂಲಗಳಿಂದ ಆದಾಯವನ್ನು ಗಳಿಸುತ್ತಿವೆ. ಪ್ರಾಯೋಜಕತ್ವ ಸೇರಿದಂತೆ ಇತರೆ ಮೂಲಗಳಿಂದ ಯಥೇಚ್ಛ ಆದಾಯ ಬರುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

Story first published: Wednesday, March 4, 2020, 16:09 [IST]
Other articles published on Mar 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+