2ನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್
ನ್ಯೂ ಚಂಡೀಗಢ: 19ನೇ ಆವೃತ್ತಿಯ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್ ಜಯ ಸಾಧಿಸಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ಸ್ 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದೆ. ಈ ಮೂಲಕ ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಅರ್ಹತೆ ಪಡೆದಿದೆ.
ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ 92 ರನ್‌ಗಳ ಸೋಲು ಕಂಡಿರುವ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ತಂಡ ಫೈನಲ್‌ಗಾಗಿ ಕಾದಾಟವನ್ನು ನಡೆಸಲಿದೆ. ಈ ಪಂದ್ಯಕ್ಕೂ ನ್ಯೂ ಚಂಡೀಗಢ ಮೈದಾನ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಮೇ 31 ರಂದು ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಕಾದಾಟವನ್ನು ನಡೆಸಲಿದೆ.

ವೈಭವ್ ಆರ್ಭಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಅಬ್ಬರದ ಆರಂಭವನ್ನು ಕಂಡಿತು. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಹೈದರಾಬಾದ್ ತಂಡದ ಸ್ಟಾರ್ ವೇಗದ ಬೌಲರ್‌ಗಳ ವಿರುದ್ಧ ರನ್‌ಗಳನ್ನು ಬಾರಿಸಿ ಮಿಂಚಿದರು. ಪರಿಣಾಮ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಮೊದಲ ವಿಕೆಟ್‌ಗೆ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ 8 ಓವರ್‌ಗಳಲ್ಲಿ 125 ರನ್ ಸೇರಿಸಿತು. ಈ ಹಂತದಲ್ಲಿ ವೈಭವ್ 29 ಎಸೆತಗಳಲ್ಲಿ 5 ಬೌಂಡರಿ, 12 ಸಿಕ್ಸರ್ ಸಹಾಯದಿಂದ 97 ರನ್ ಬಾರಿಸಿ ಔಟ್ ಆದರು.
ಯಶಸ್ವಿ ಜೈಸ್ವಾಲ್ (29), ಮೂರನೇ ಕ್ರಮಾಂಕದ ಆಟಗಾರ ಧ್ರುವ್ ಜುರೇಲ್ (50 ರನ್, 5 ಬೌಂಡರಿ, 3 ಸಿಕ್ಸರ್), ನಾಯಕ ರಿಯಾನ್ ಪರಾಗ್ (26) ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 243 ರನ್ ಸೇರಿಸಿತು.
ಕಳಪೆ ಆರಂಭ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಜೋಫ್ರಾ ಆರ್ಚರ್ ಅವರ ಬೌನ್ಸರ್ ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಎರಡನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಟ್ರಾವಿಸ್ ಹೆಡ್ (17) ಜೋಡಿ 51 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಇಶಾನ್ ಕಿಶನ್ 33 ರನ್ ಬಾರಿಸಿ ಔಟ್ ಆದರು. ಕರ್ನಾಟಕದ ಆರ್ ಸ್ಮರಣ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಎಸ್‌ಆರ್‌ಎಚ್ ಪವರ್ ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ 38, ಸಲೀಲ್ ಆರೋರಾ 35, ಶಿವಂಗ್ ಕುಮಾರ್ 27 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ರಾಜಸ್ಥಾನ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು.

ರಾಯಲ್ಸ್ ತಂಡದ ಪರ ಜೋಫ್ರಾ ಆರ್ಚರ್ 3, ನಾಂಡ್ರೆ ಬರ್ಗರ್,ಸುಶಾಂತ್ ಮಿಶ್ರಾ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications