ಟಿ20 ಕ್ರಿಕೆಟ್ ಅಂದರೆ ಅದು ಬ್ಯಾಟರ್‌ಗಳ ಮಾದರಿ ಎಂಬುದು ಸಾಮಾನ್ಯ ಭಾವನೆ. ಇಲ್ಲಿ ಬೌಲರ್‌ಗಳು ಇರುವುದೇ ದಂಡಿಸಿಕೊಳ್ಳುವುದಕ್ಕೆ ಎಂಬ ಮಾತಿದೆ. ಚುಟುಕು ಮಾದರಿ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿರುವುದರ ಜೊತೆಗೆ ಮನರಂಜನೆಯ ದೃಷ್ಟಿಯಿಂದ ಪಿಚ್‌ಗಳನ್ನು ಕೂಡ ಬ್ಯಾಟರ್‌ಗಳಿಗೆ ಪೂರಕವಾಗಿರುವಂತೆ ಮಾಡಿರುವುದು ಇದಕ್ಕೆ ಕಾರಣ.
ಹಾಗಿದ್ದರೂ ಬ್ಯಾಟರ್‌ಗಳನ್ನು ತಿಣುಕಾಡುವಂತೆ ಮಾಡುವ, ರನ್‌ಗಳಿಸಲು ಪರದಾಡಿಸುವ ಸಾಕಷ್ಟು ಯಶಸ್ವಿ ಬೌಲರ್‌ಗಳು ಕೂಡ ಇದ್ದಾರೆ ಎಂಬುದು ಗಮನಾರ್ಹ. ಇದಕ್ಕೆ ತಾಜಾ ಉದಾಹರಣೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಕಾಶ್ ಮದ್ವಲ್ ಅವರ ಅದ್ಭುತ ಬೌಲಿಂಗ್ ದಾಳಿ. ಈ ದಾಳಿ ಈಗ ಐಪಿಎಲ್‌ನ ಶ್ರೇಷ್ಠ ಬೌಲಿಂಗ್ ಸ್ಪೆಲ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಆಕಾಶ್ ಮಧ್ವಲ್ ಅವರ ಈ ಬೌಲಿಂಗ್ ಸಾಧನೆ ಸೇರಿದಂತೆ ಐಪಿಎಲ್ ಇತಿಹಾಸದ ಟಾಪ್ ಐದು ಅತ್ಯದ್ಭುತ ಬೌಲಿಂಗ್ ಪ್ರದರ್ಶನದ ಮಾಹಿತಿ ಇಲ್ಲಿದೆ. ಮುಂದೆ ಓದಿ...

5. ಆಕಾಶ್ ಮಧ್ವಲ್, 2023(ಮುಂಬೈ ಇಂಡಿಯನ್ಸ್) Vs LSG, 2023 | 3.3 ಓವರ್‌ಗಳಲ್ಲಿ 5/5
ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಆಕಾಶ್ ಮಧ್ವಲ್ ಈ ವರ್ಷದ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಆಕಾಶ್ 3.3 ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಕೇವಲ 5 ರನ್ ನೀಡಿದ್ದು 5 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಕೇವಲ 1.42 ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ. ಈ ಅದ್ಭುತ ಬೌಲಿಂಗ್ ದಾಳಿಯ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫಯರ್ ಪಂದ್ಯವಾಡುವ ಅರ್ಹತೆ ಪಡೆದುಕೊಂಡಿದೆ.
4. ಅನಿಲ್ ಕುಂಬ್ಳೆ, 2009(ರಾಯಲ್ ಚಾಲೆಂಜರ್ಸ್ ಬೆಂಗಳೂರು) vs RR |3.1 ಓವರ್‌ಗಳಲ್ಲಿ 5/5
2009ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಎರಡನೇ ಪಂದ್ಯದಲ್ಲಿಯೇ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಅವರಿಂದ ಈ ಅಮೋಘ ಬೌಲಿಂಗ್ ಪ್ರದರ್ಶನ ಬಂದಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳ ಕೇವಲ 3.1 ಓವರ್‌ಗಳಲ್ಲಿ 5 ರನ್ ನೀಡಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದರು. ಈ ಅಮೀಘ ಬೌಲಿಂಗ್ ಪ್ರದರ್ಶನದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ 58 ರನ್‌ಗೆ ಆಲೌಟ್ ಆಗಿತ್ತು.
3. ಆಡಮ್ ಝಂಪಾ 2016(ರೈಸಿಂಗ್ ಪುಣೆ ಸೂಪರ್ ಜೈಂಟ್ಸ್) vs SRH, 2016 | 4 ಓವರ್‌ಗಳಲ್ಲಿ 6/19
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೌಲರ್ ಆಡಂ ಜಂಪಾ. 2016ರ ಐಪಿಎಲ್ ಆವೃತ್ತಿಯಲ್ಲಿ ಜಂಪಾ ಪ್ರಸ್ತುತ ನಿಷ್ಕೃಯವಾಗಿರುವ ರೈಸಿಂಗ್ ಪುಣೆ ಸೂಪೆರ್ ಜೈಂಟ್ಸ್ ತಂಡದ ಪರವಾಗಿ ಆಡಿದ್ದಾಗ ಈ ಸಾಧನೆ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಜಂಪಾ 16 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಪಡೆದಿದ್ದರು.
2. ಸೊಹೈಲ್ ತನ್ವೀರ್ 2008 (ರಾಜಸ್ಥಾನ್ ರಾಯಲ್ಸ್), vs CSK, 2008 | 4 ಓವರ್‌ಗಳಲ್ಲಿ 6/14
ಐಪಿಎಲ್ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದ ವೇಗದ ಬೌಲರ್ ಪಾಕಿಸ್ಥಾನದ ಸೋಹೈಲ್ ತನ್ವೀರ್ ಐಪಿಎಲ್‌ನ ಅದ್ಭುತ ಬೌಲಿಂಗ್ ಬೌಲಿಂಗ್ ಸ್ಪೆಲ್‌ನಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ಓವರ್‌ಗಳ ಬೌಲಿಂಗ್ ದಾಳಿಯಲ್ಲಿ ಕೇವಲ 14 ರನ್‌ಗಳನ್ನು ನೀಡಿ 6 ವಿಕೆಟ್ ಪಡೆದು ಮಿಂಚಿದ್ದರು ಸೊಹೈಲ್ ತನ್ವೀರ್. ಐಪಿಎಲ್ ಇತಿಹಾಸದ ಮೊದಲ ಪರ್ಪಲ್ ಕ್ಯಾಪ್ ಧರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೂಡ ಸೋಹೈಲ್ ತನ್ವೀರ್ ಹೊಂದಿದ್ದಾರೆ.
1. ಅಲ್ಜಾರಿ ಜೋಸೆಫ್ 2019(ಮುಂಬೈ ಇಂಡಿಯನ್ಸ್) vs SRH | 3.4 ಓವರ್‌ಗಳಲ್ಲಿ 6/12
ಐಪಿಎಲ್ ಇತಿಹಾಸದ ಅತ್ಯದ್ಭಯತ ಬೌಲಿಂಗ್ ಸ್ಪೆಲ್‌ಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಅಲ್ಜಾರಿ ಜೋಸೆಪ್ ಅವರ ಬೌಲಿಂಗ್ ಪ್ರದರ್ಶನ. 2019ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಈ ಅದ್ಭುತ ಪ್ರದರ್ಶನ ನೀಡಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ 3.4 ಓವರ್‌ಗಳ ಬೌಲಿಂಗ್ ದಾಳಿಯಲ್ಲಿ ಎದುರಾಳಿಯತ ಆರು ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟಿದ್ದರು. ಇದು ಟೂರ್ನಿಯ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ.