Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Records: ಐಪಿಎಲ್‌ ಇತಿಹಾಸದಲ್ಲಿ ಅತಿ ಕ್ಯಾಚ್ ಪಡೆದ ಟಾಪ್‌ 5 ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಹಲವು ತಂಡಗಳು ತಮ್ಮ ತಯಾರಿ ನಡೆಸಿವೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು 10 ತಂಡಗಳು ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್‌ಸಿಬಿ) ತಂಡ ಸಹ ಎರಡನೇ ಬಾರಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ.

ಈ ಟೂರ್ನಿಯಲ್ಲಿ ಬ್ಯಾಟರ್‌ಗಳು ರನ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಇನ್ನು ಬೌಲರ್‌ಗಳ ರನ್‌ಗಳಿಗೆ ಕಡಿವಾಣ ಹಾಕಿದ್ದಾರೆ. ಫೀಲ್ಡರ್‌ಗಳು ಸಹ ಅಮೋಘ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಟಾಪ್‌ 5 ಆಟಗಾರರ ಪರಿಚಯ ಇಲ್ಲಿದೆ. ಇದರಲ್ಲಿ ನಾಲ್ವರು ಭಾರತೀಯ ಆಟಗಾರರು ಎಂಬುದೇ ವಿಶೇಷವಾಗಿದೆ.

IPL Records

ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದ ಪರ ಆಡುವ ವಿರಾಟ್‌ ಕೊಹ್ಲಿ ಸಹ ಈ ಲೀಸ್ಟ್‌ನಲ್ಲಿ ಸ್ಥಾನ ಪಡೆದ ಆಟಗಾರ. ಇವರು ಈ ಟೂರ್ನಿಯಲ್ಲಿ ಆರ್‌ಸಿಬಿ ಪರವೇ 19 ಆವೃತ್ತಿಗಳನ್ನು ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ವರೆಗೆ ಇವರು ಆರ್‌ಸಿಬಿ ಪರ 267 ಪಂದ್ಯಗಳನ್ನು ಆಡಿದ್ದು, 39.54 ಸರಾಸರಿಯಲ್ಲಿ 8,661 ರನ್‌ ಸಿಡಿಸಿದ್ದಾರೆ. ಇದರಲ್ಲಿ 8 ಶತಕಗಳು ಸೇರಿವೆ. ಈ ಅವಧಿಯಲ್ಲಿ ವಿರಾಟ್ ಒಟ್ಟು 117 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಸುರೇಶ್‌ ರೈನಾ

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಎರಡನೇ ಆಟಗಾರ ಸುರೇಶ್ ರೈನಾ. ಇವರು ತಮ್ಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಿಂದ ಹೆಸರುವಾಸಿ. ಈಗಾಗಲೇ ರೈನಾ ಐಪಿಎಲ್‌ಗೆ ಗುಡ್‌ಬಾಯ್ ಹೇಳಿದ್ದು, 32.51 ಸರಾಸರಿಯಲ್ಲಿ 5,528 ರನ್ ಕಲೆ ಹಾಕಿದ್ದಾರೆ. ಇವರು ಒಟ್ಟಾರೆ 2 ತಂಡಗಳ ಪರ ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಇವರು 109 ಕ್ಯಾಚ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ.

ರವೀಂದ್ರ ಜಡೇಜಾ

ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿರುವ ಭರವಸೆಯ ಆಲ್‌ರೌಂಡರ್ ರವೀಂದ್ರ ಜಡೇಜಾ ಸಹ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 254 ಪಂದ್ಯಗಳಲ್ಲಿ 109 ಕ್ಯಾಚ್ ಪಡೆದಿದ್ದಾರೆ. ಇವರು ಒಂದೇ ಐಪಿಎಲ್‌ ಪಂದ್ಯದಲ್ಲಿ ನಾಲ್ಕು ಕ್ಯಾಚ್ ಪಡೆದ ದಾಖಲೆ ಹೊಂದಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಜಡೇಜಾ ಒಂದು ಕ್ಯಾಚ್ ಪಡೆದಲ್ಲಿ, ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದಾರೆ.

ಕೀರನ್ ಪೊಲಾರ್ಡ್‌

ವೆಸ್ಟ್‌ ಇಂಡೀಸ್ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್‌ ಸಹ ಐಪಿಎಲ್‌ನಲ್ಲಿ ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇವರು ಈ ಲೀಗ್‌ಗೆ ಈಗಾಗಲೇ ವಿದಾಯ ಹೇಳಿದ್ದು, ಒಟ್ಟು ಆಡಿದ 189 ಪಂದ್ಯಗಳಲ್ಲಿ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ವೇಳೆ ಕೀರನ್‌ 3,412 ರನ್ ಸಿಡಿಸಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ ಸಹ 2008ರ ಐಪಿಎಲ್‌ನಿಂದ ಆಡುತ್ತಿರುವ ಆಟಗಾರ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರು ಆಡಿದ 272 ಪಂದ್ಯಗಳಲ್ಲಿ 29.73 ಸರಾಸರಿಯಲ್ಲಿ 7,046 ರನ್ ಗಳಿಸಿದ್ದಾರೆ. ಅಲ್ಲದೆ 102 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಇನ್ನು 8 ಕ್ಯಾಚ್‌ಗಳನ್ನು ಪಡೆಯುವಲ್ಲಿ ಸಫಲರಾದರೆ ದೊಡ್ಡ ದಾಖಲೆಯನ್ನು ಬರೆಯಬಹುದು.

Story first published: Friday, March 13, 2026, 8:00 [IST]
Other articles published on Mar 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+