Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK ತೊರೆಯಲಿದ್ದಾರಾ ರವೀಂದ್ರ ಜಡೇಜಾ? ಈ 3 ತಂಡಗಳು ಇಟ್ಟಿವೆ ಜಡ್ಡು ಮೇಲೆ ಕಣ್ಣು; ಮನಸ್ಸು ಮಾಡಲಿದೆಯಾ RCB?

ರವೀಂದ್ರ ಜಡೇಜಾ ಐಪಿಎಲ್‌ನ ಸ್ಟಾರ್ ಆಟಗಾರರಲ್ಲಿ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಸುದೀರ್ಘ ಕಾಲದಿಂದ ಆಡುತ್ತಿರುವ ಜಡೇಜಾ ತಂಡದ ಯಶಸ್ಸಿಗೂ ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಮತ್ತೊಮ್ಮೆ ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದಲ್ಲಿ ಹಲವು ವಿಚಾರಗಳ ಬಗ್ಗೆ ಅಸಮಾಧಾನ ಹೊಂದಿರುವುದು ಮತ್ತೆ ಮತ್ತೆ ಅಭಿಮಾನಿಗಳ ಮುಂದೆ ವ್ಯಕ್ತವಾಗುತ್ತಿದೆ

ಒಂದು ಪಂದ್ಯದಲ್ಲಿ ನಾಐಕ ಎಂಎಸ್ ಧೋನಿ ಜೊತೆಗೆ ಗಂಭೀತರವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದು, ಜಿಟಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡ ಬಳಿಕ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಜಡೇಜಾಗೆ ಏನೋ ಗಂಭೀರವಾಗಿ ವಿವರಿಸುತ್ತಿರುವುದು ಕೂಡ ಈ ಅಸಮಾಧಾನ ಭಾಗ ಎಂಬುದು ವರದಿಯಾಗುತ್ತಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರವೀಂದ್ರ ಜಡೇಜಾ ಮಾಡಿರುವ ಕೆಲ ಟ್ವೀಟ್‌ಗಳು ಕೂಡ ಈ ಸುದ್ದಿಗಳಿಗೆ ಪೂರಕವಾಗಿಯೇ ಇದೆ.

IPL: Rift between Ravindra Jadeja and CSK: These 3 teams can target in IPL 2024

ಈ ಎಲ್ಲಾ ಕಾರಣಗಳಿಂದಾಗಿ ರವೀಂದ್ರ ಜಡೇಜಾ ಸಿಎಸ್‌ಕೆ ತಂಡವನ್ನು ತೊರೆಯಲಿದ್ದಾರಾ ಎಂಬ ಬಗ್ಗೆ ಚರ್ಚೆಗಳು ಜೋರಾಗಲು ಕಾರಣವಾಗಿದೆ. ಕಳೆದ ಆವೃತ್ತಿಯಲ್ಲಿಯೂ ಜಡ್ಡು ಧೋನಿ ಹಾಘೂ ಮ್ಯಾನೇಜ್‌ಮೆಂಟ್ ಭಿನ್ನಭಿಪ್ರಾಯಗಳು ದೊಡ್ಡದಾಗಿತ್ತು. ಆದರೆ ಬಳಿಕ ಸಿಎಸ್‌ಕೆ ತಂಡದಲ್ಲಿಯೇ ಜಡೇಜಾ ಈ ಆವೃತ್ತಿಗೆ ಉಳಿದುಕೊಂಡಿದ್ದಾರೆ.

ಜಡೇಜಾ ಅವರನ್ನು ಮುಂದಿನ ಆವೃತ್ತಿಗೆ ಮುನ್ನ ಹರಾಜು ಪಟ್ಟಿಗೆ ಬಿಡುಗಡೆಗೊಳಿಸಿದರೆ ಉಳೀದ ತಂಡಗಳು ಇಂಥಾ ಗುಣಮಟ್ಟದ ಆಟಗಾರನನ್ನು ಕೊಳ್ಳಲು ಪೈಪೋಟಿ ನಡೆಸುವುದು ಸಹಜ. ಅದರಲ್ಲೂ ಈ ಮೂರು ತಂಡಗಳಿಗೆ ರವೀಂದ್ರ ಜಡೇಜಾ ಅವರಂಥಾ ಆಲ್‌ರೌಂಡರ್‌ನ ಅಗತ್ಯ ಬಹಳ ಇದೆ ಎಂಬುದು ಸ್ಪಷ್ಟ. ಹಾಗಾಗಿ ಈ ತಂಡಗಳು ಜಡೇಜಾ ಅವರನ್ನು ಗುರಿಯಾಗಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಳ ಕ್ರಮಂಕದ ಬ್ಯಾಟಿಂಗ್ ದುರ್ಬಲವಾಗಿದ್ದ ಕಾರಣ ಸಾಕಷ್ಟು ಹಿನ್ನಡೆ ಕಂಡಿತು. ಆಲ್‌ರೌಂಡರ್ ಸ್ಥಾನದಲ್ಲಿ ಕಣಕ್ಕಿಳಿದ ಶಹ್ಬಾಜ್ ಅಹ್ಮದ್ ಮಿಂಚಲು ವಿಫಲವಾದ ಕಾರಣ ರವೀಂದ್ರ ಜಡೇಜಾ ಸೇರ್ಪಡೆ ತಂಡದಲ್ಲಿ ದೊಡ್ಡ ಸಮತೋಲನವನ್ನುಂಟು ಮಾಡಲಿದೆ. ಅಲ್ಲದೆ ಕೆಳ ಕ್ರಮಾಂಕದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಲೈನಪ್‌ಗೆ ದೊಡ್ಡ ಬಲ ದೊರೆಯಲಿದೆ.

ಲಕ್ನೋ ಸೂಪರ್ ಜೈಂಟ್ಸ್
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲಕ್ನೋದ ಪಿಚ್ ಉಳಿದ ಎಲ್ಲಾ ತಾಣಗಳಿಗಿಂತಲೂ ಹೆಚ್ಚು ನಿಧಾನದ ಪಿಚ್ ಆಗಿತ್ತು. ಚೆನ್ನೈನ ಪಿಚ್‌ಗಿಂತಲೂ ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ನೆರವು ನೀಡಿತ್ತು. ಇಂಥಾ ಪಿಚ್‌ನಲ್ಲಿ ಬೌಲಿಂಗ್‌ನ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚುವ ಸಾಮರ್ಥ್ಯಹೊಂದಿರುವ ಜಡೇಜಾ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಗುರಿಯಾಗಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಎಲ್‌ಎಸ್‌ಜಿ ತಂಡದಲ್ಲಿ ಈ ಬಾರಿ ಭಾರತೀಯ ದಾಂಡಿಗರು ವಿಫಲವಾಗಿರುವ ಕಾರಣ ಬಲಿಷ್ಠಗೊಳಿಸಲು ಇದು ಉತ್ತಮ ಅವಕಾಶ.

ಮುಂಬೈ ಇಂಡಿಯನ್ಸ್
ಇನ್ನು ರವೀಂದ್ರ ಜಡೇಜಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬದ್ಧ ಎದುರಾಳಿ ಮುಂಬೈ ಇಂಡಿಯನ್ಸ ತಂಡಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಆಸಕ್ತಿಯಿದೆಯಾ ಎಂಬುದು ಕೂಡ ಕುತೂಹಲ ಮೂಡಿಸಿದೆ. ಮುಂಬೈ ಇಂಡಿಯನ್ಸ ತಂಡ ಸಹಜವಾಗಿ ರವೀಂದ್ರ ಜಡೇಜಾ ಅವರಂಥಾ ಆಟಗಾರನನ್ನು ಹೊಂದಲು ಕಾತರಿಸುತ್ತಿದೆ. ಜಡೇಜಾ ತಂಡವನ್ನು ಸೇರಿಕೊಂಡರೆ ತಂಡದ ಸಮತೋಲನ ಮತ್ತಷ್ಟು ಉತ್ತಮವಾಗಲಿದೆ ಎಂಬುದು ನಿಜ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಅವರನ್ನು ಕೊಳ್ಳುವ ಅವಕಾಶ ದೊರೆತರೆ ಮುಂಬೈ ಇಂಡಿಯನ್ಸ್ ಆ ಅವಕಾಶವನ್ನು ಕೈಚೆಲ್ಲಲಾರದು ಎಂಬುದು ನಿಜ.

Story first published: Saturday, May 27, 2023, 10:07 [IST]
Other articles published on May 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+