ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹ್ಯಾಟ್ರಿಕ್ ಹೀರೋ ಕರನ್ ಕುರಿತ ಕುತೂಹಲಕಾರಿ ಸಂಗತಿಗಳು!

IPL: Sam Curran hat-trick inspires Kings XI Punjab win

ನವದೆಹಲಿ, ಏಪ್ರಿಲ್ 3: ಸೋಮವಾರ (ಏಪ್ರಿಲ್ 1) ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಚ್ಚರಿ ರೀತಿಯಲ್ಲಿ ಗೆದ್ದಿತ್ತು. ಪಂಜಾಬ್ ಗೆಲುವಿಗೆ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕರನ್ ಕಾರಣರಾಗಿದ್ದರು.

ಐಪಿಎಲ್ 2019 ಮೈಖೇಲ್ ಕನ್ನಡ 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಸ್ಯಾಮ್ ಕರನ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ತಂಡ ಗೆಲ್ಲಬೇಕಿದ್ದ ಪಂದ್ಯವನ್ನು ಸೋತು ಆಘಾತ ಅನುಭವಿಸಿತ್ತು. ಪಂಜಾಬ್ ಪಾಲಿಗಂತೂ ಕರನ್ ಅಂದು ಹ್ಯಾಟ್ರಿಕ್ ಹೀರೋ, ಗೆಲುವಿನ ರುವಾರಿ ಅನ್ನಿಸಿದ್ದರು.

ಆರ್‌ಸಿಬಿ ಟ್ರೋಲ್ ಆಗೋದಕ್ಕೂ ನೆಹ್ರಾ ಹೀಗ್ ಹೇಳೋದಕ್ಕೂ ಸರಿಹೋಯ್ತು!ಆರ್‌ಸಿಬಿ ಟ್ರೋಲ್ ಆಗೋದಕ್ಕೂ ನೆಹ್ರಾ ಹೀಗ್ ಹೇಳೋದಕ್ಕೂ ಸರಿಹೋಯ್ತು!

ಪಂಜಾಬ್ - ಡೆಲ್ಲಿ ನಡುವಿನ ಆ ಪಂದ್ಯದಲ್ಲಿ ಸ್ಯಾಮ್ ಕರನ್ ವಿಶೇಷ ಸಾಧನೆ ಮತ್ತು ಕುತೂಹಲಕಾರಿ ಕೆಲ ಸಂಗತಿಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ.

ಕೇವಲ 11 ರನ್ನಿಗೆ 4 ವಿಕೆಟ್

ಕೇವಲ 11 ರನ್ನಿಗೆ 4 ವಿಕೆಟ್

ಸೋಮವಾರ ಮೊಹಾಲಿಯಲ್ಲಿ ನಡೆದಿದ್ದ ಐಪಿಎಲ್ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಡಿದ್ದವು. ಈ ವೇಳೆ ಗೆಲ್ಲುವ ಪಂದ್ಯವನ್ನು ಡೆಲ್ಲಿ ಕೈಚೆಲ್ಲಿತ್ತು. ಪಂದ್ಯದ ಫಲಿತಾಂಶ ಪಂಜಾಬ್ ಪರವಾಗಲು ಮುಖ್ಯಾ ಕಾರಣ ಸ್ಯಾಮ್ ಕರನ್ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆ. ಸ್ಯಾಮ್ ಕೇವಲ 11 ರನ್ನಿಗೆ 4 ವಿಕೆಟ್ ಕಬಳಿಸಿದ್ದು ಎದುರಾಳಿ ಡೆಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.

ಆರಂಭಿಕ ಇನ್ನಿಂಗ್ಸ್‌ನಲ್ಲೇ ಹ್ಯಾಟ್ರಿಕ್

ಆರಂಭಿಕ ಇನ್ನಿಂಗ್ಸ್‌ನಲ್ಲೇ ಹ್ಯಾಟ್ರಿಕ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಅತೀ ಕಿರಿಯ ಆಟಗಾರನಾಗಿ ಕಿಂಗ್ಸ್ XI ಪಂಜಾಬ್ ಪ್ರತಿನಿಧಿಸಿದ್ದ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕರನ್ ಪಾತ್ರರಾಗಿದ್ದರು. ಕರನ್‌ಗೀಗ 20ರ ಹರೆಯ. ಐಪಿಎಲ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮೆರೆದ ಇಬ್ಬರೇ ಆಟಗಾರರೆಂದರೆ ಅದು ಯುವರಾಜ್ ಸಿಂಗ್ ಮತ್ತು ಸ್ಯಾಮ್ ಕರನ್!

ಫಲಿತಾಂಶ ತಿರುಗಿಸಿದ್ದ ಕರನ್

ಫಲಿತಾಂಶ ತಿರುಗಿಸಿದ್ದ ಕರನ್

ಅಂತಿಮ 4 ಓವರ್‌ಗೆ ಅಂದರೆ 24 ಎಸೆತಗಳಿಗೆ ಡೆಲ್ಲಿಗೆ ಗೆಲ್ಲಲು 23 ರನ್‌ಗಳ ಅವಶ್ಯಕತೆಯಿತ್ತು. ಡೆಲ್ಲಿ ಖಾತೆಯಲ್ಲಿ ಆಗ ಇನ್ನೂ 6 ವಿಕೆಟ್‌ಗಳಿದ್ದವು. ಆದರೆ ಸ್ಯಾಮ್ ಪಂದ್ಯದ ಗತಿಯನ್ನೇ ತಿರುಗಿಸಿದ್ದರು. ಅಂತಿಮ ಈ ನಾಲ್ಕು ಓವರ್‌ನಲ್ಲಿ ಸ್ಯಾಮ್ ಕ್ರಮವಾಗಿ ಕಾಲಿನ್ ಇಂಗ್ರಾಮ್, ಹರ್ಷಲ್ ಪಟೇಲ್, ಕಾಗಿಸೋ ರಬಾಡಾ ಮತ್ತು ಸಂದೀಪ್ ಸಂದೀಪ್ ಲಮಿಖಾನೆ ಅವರನ್ನು ಓಟ್ ಮಾಡಿದ್ದರು. ಫಲಿತಾಂಶವಾಗಿ ಡೆಲ್ಲಿ 14 ರನ್ನಿಗೆ ಶರಣಾಯ್ತು.

ಗೇಲ್ ಸ್ಥಾನ ಆವರಿಸಿದ ಬಾಲಕ

ಗೇಲ್ ಸ್ಥಾನ ಆವರಿಸಿದ ಬಾಲಕ

ಹಿಂದೊಮ್ಮೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮತ್ತು ಸ್ಯಾಮ್ ಕರನ್ ಜೊತೆಯಾಗಿ ನಿಂತು ಫೋಟೋ ತೆಗೆಸಿದ್ದರು. ಆಗಿನ್ನೂ ಕರನ್ ಸಣ್ಣ ಬಾಲಕ. ಆದರೆ ಸೋಮವಾರದ (ಏಪ್ರಿಲ್ 1) ಪಂದ್ಯದಲ್ಲಿ ಕರನ್ ಅವರು ಗೇಲ್ ಸ್ಥಾನವನ್ನು ಆವರಿಸಿ ಮೈದಾನಕ್ಕಿಳಿದಿದ್ದರು. ಪಂದ್ಯದಲ್ಲಿ ಗೇಲ್ ಆಡಿರಲಿಲ್ಲ! (ಚಿತ್ರಕೃಪೆ: ಕ್ರಿಕ್ ಫಿಟ್).

Story first published: Wednesday, April 3, 2019, 1:21 [IST]
Other articles published on Apr 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X